ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಶಾಸಕಾಂಗ ಸಭೆಗೆ ಶಾಸಕ ಜಮೀರ್ ಗೈರು

|
Google Oneindia Kannada News

ಬೆಂಗಳೂರು, ಸೆ.3 : ಜೆಡಿಎಸ್ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲವನ್ನು ದೂರ ಮಾಡಲು ಕರೆದಿರುವ ಶಾಸಕಾಂಗ ಪಕ್ಷದ ಸಭೆಗೆ ಪ್ರಮುಖ ನಾಯಕರು ಗೈರು ಹಾಜರಾಗಿದ್ದು, ಜೆಡಿಎಸ್ ಪಕ್ಷದ ಭಿನ್ನಮತ ಮತ್ತೊಮ್ಮೆ ಬಯಲಾಗಿದೆ. ಜಮೀರ್ ಅಹ್ಮದ್ ಖಾನ್ ಸೇರಿದಂತೆ ಪ್ರಮುಖರು ಸಭೆಯಿಂದ ದೂರ ಉಳಿದಿದ್ದಾರೆ.

ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್‌ನಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಆದರೆ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ, ಹಿರಿಯ ನಾಯಕ ಇಕ್ಬಾಲ್ ಅನ್ಸಾರಿ ಮುಂತಾದವರು ಸಭೆಯಿಂದ ದೂರವುಳಿದಿದ್ದಾರೆ.

Zameer Ahmed Khan

ಕುಮಾರಸ್ವಾಮಿ ಅವರ ಪರಮಾಪ್ತ ಜಮೀರ್ ಅಹಮದ್ ಖಾನ್ ಅವರು ಶಾಸಕಾಂಗ ಸಭೆಯ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ನೋಡಿದ್ದೇನೆ. ಪಕ್ಷದ ವತಿಯಿಂದ ಯಾವ ನಾಯಕರು ನನ್ನನ್ನು ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಕೆಲವು ದಿನಗ ಹಿಂದೆ ಎಲ್ಲಾ ಶಾಸಕರಿಗೂ ಪತ್ರ ಬರೆದು ಸಭೆಗೆ ಆಹ್ವಾನಿಸಿದ್ದರು. [ಶಾಸಕರಿಗೆ ಕುಮಾರಸ್ವಾಮಿ ಪತ್ರ]

ಕುಮಾರಸ್ವಾಮಿ ಹೇಳುವುದೇನು? : ಶಾಸಕಾಂಗ ಪಕ್ಷದ ಸಭೆಯ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ನಲ್ಲಿ ಭಿನ್ನಮತ ಇರುವುದು ನಿಜ, ಅದನ್ನು ಸರಿಪಡಿಸಲು ಇಂದು ಸಭೆ ಕರೆಯಲಾಗಿದೆ. ಇದಕ್ಕೆ ಜಮೀರ್ ಅಹ್ಮದ್ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ, ಅವರು ತಮಗೆ ಆಹ್ವಾನ ಬಂದಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಉರ್ದು ಅಥವಾ ಇಂಗ್ಲಿಶ್‌ನಲ್ಲಿ ಆಹ್ವಾನ ನೀಡಬೇಕಾಗಿತ್ತು ಅಂತ ಕಾಣುತ್ತೆ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷದಿಂದ ಹೊರಹೋಗುತ್ತೇವೆ ಎಂದು ಹೇಳುವ ನಾಯಕರನ್ನು ಯಾರು ಕಟ್ಟಿಹಾಕುವುದಿಲ್ಲ. ಅವರನ್ನು ಸನ್ಮಾನಿಸಿ ಕಳುಹಿಸಿ ಕೊಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

English summary
Chamarajpet MLA Zameer Ahmed Khan ( JDS) did not attend the JDLP meeting at The Chancery Pavillion hotel Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X