ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವನದುರ್ಗದಲ್ಲಿ ದಾರಿ ತಪ್ಪಿ ದಿಕ್ಕು ಕಾಣದಾಗಿದ್ದ ಯುವಕನ ರಕ್ಷಣೆ

By ಬಿಎಂ ಲವಕುಮಾರ್
|
Google Oneindia Kannada News

ಮಾಗಡಿ, ಅಕ್ಟೋಬರ್ 3: ಸಾವನದುರ್ಗ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದ ವೇಳೆ ದಾರಿ ತಪ್ಪಿದ್ದ ಬಿಹಾರ ಮೂಲದ ಯುವಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ನೀರಲ್ಲಿ ಮುಳುಗುತ್ತಿದ್ದರೂ ಸೆಲ್ಫಿಯಲ್ಲೇ ಬ್ಯುಸಿಯಾದ ಸ್ನೇಹಿತರು!ನೀರಲ್ಲಿ ಮುಳುಗುತ್ತಿದ್ದರೂ ಸೆಲ್ಫಿಯಲ್ಲೇ ಬ್ಯುಸಿಯಾದ ಸ್ನೇಹಿತರು!

ಬಿಹಾರ ಮೂಲದ ಶುಭಂ (28) ಎಂಬ ಯುವಕನೇ ತಪ್ಪಿಸಿಕೊಂಡವನಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

Young man was rescued by the firefighters in Savandurga

ಸೆ. 30ರಂದು ಬೆಂಗಳೂರಿನಿಂದ ಸಾವನದುರ್ಗಕ್ಕೆ ಚಾರಣ ಬಂದಿದ್ದ ಬಿಹಾರ ಮೂಲದ ಯುವಕರ ತಂಡ ಬೆಟ್ಟವನ್ನು ಹತ್ತಿದೆ. ಸಂಜೆ ಸಮಯದಲ್ಲಿ ಬೇರೆ ಬೇರೆ ಮಾರ್ಗದಲ್ಲಿ ಇಳಿಯುವಾಗ ಶುಭಂ ಎಂಬಾತ ಅರವತ್ತರಿಂದ ಎಪ್ಪತ್ತು ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಜತೆಯಲ್ಲಿದ್ದ ಇಬ್ಬರು ಕೆಳಗೆ ಇಳಿದ ಬಳಿಕ ಶುಭಂ ಕಾಣದಿದ್ದಾಗ ಕೂಡಲೇ ಮಾಗಡಿ ಪೊಲೀಸರಿಗೆ ವಿಷಯ ಮುಟ್ಟಿಸಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.

ಈ ಕುರಿತು ಅಗ್ನಿಶಾಮಕ ದಳಕ್ಕೆ ಪೊಲೀಸರು ಮಾಹಿತಿ ನೀಡಿದ ಮೇರೆಗೆ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅರುವತ್ತು ಅಡಿ ಆಳದಲ್ಲಿದ್ದ ಶುಭಂ ಎಂಬ ಯುವಕನನ್ನು ಹಗ್ಗದ ಸಹಾಯದಿಂದ ಯಶಸ್ವಿಯಾಗಿ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.

English summary
The young man was rescued by the firefighters in Savandurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X