ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಯೋಗ ದಿನ- ಜೂನ್ 21ರಂದು ಶಾಲೆಗಳಿಗೆ ಅರ್ಧ ರಜೆ ಘೋಷಣೆ

|
Google Oneindia Kannada News

ಬೆಂಗಳೂರು, ಜೂನ್ 20: ಜೂನ್ 21ರಂದು 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗ ದಿನಾಚರಣೆಯನ್ನು ಶಾಲೆಗಳಲ್ಲೂ ಆಚರಿಸಲು ಸೂಚಿಸಿರುವುದಿಂದಾಗಿ ನಾಳೆ (ಜೂನ್ 21) ಮಂಗಳವಾರ ಅರ್ಧ ದಿನ ರಾಜ್ಯಾದ್ಯಂತ ಶಾಲೆಗಳಿಗೆ ರಜೆಯನ್ನು ಘೋಷಿಸುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ದಿನಾಂಕ 21.06.22ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲೂ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರುಗಳು, ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತಿಳಿಸಲಾಗಿರುತ್ತದೆ.

ಅರ್ಧ ದಿನ ಶಾಲೆಗೆ ರಜೆ:

ರಾಜ್ಯದ ಎಲ್ಲಾ ಶಾಲೆಗಳು ದಿನಾಂಕ 21.06.22 ಮಂಗಳವಾರದಂದು ಅಂತರಾಷ್ಟ್ರೀಯ ಯೋಗದಿನದಂದು ಅರ್ಧದಿನ ಶಾಲೆಯನ್ನು ನಡೆಸಲು ತಿಳಿಸಿದೆ. (ಶನಿವಾರದ ವೇಳಾಪಟ್ಟಿಯಂತೆ) ಹಾಗೂ ಸದರಿ ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ ಯೋಗಾಸನಗಳ ಅಭ್ಯಾಸವನ್ನು ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದೆ.

Yoga Day: Karnataka Schools Half Day Holiday on June 21

ಇನ್ನು ಜೂನ್ 21ಕ್ಕೆ ಅರ್ಧದಿನ ಶಾಲೆಗಳಿಗೆ ರಜೆಯನ್ನು ಘೋಷಿಸಿರುವುದರಿಂದ ಆ ದಿನದ ಬದಲು ಜೂನ್ 25ರಂದು ಶನಿವಾರ ಪೂರ್ಣಪ್ರಮಾಣದ ಶಾಲೆಯನ್ನು ನಡೆಸಲು ಶಿಕ್ಷಣ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Yoga Day: Karnataka Schools Half Day Holiday on June 21

ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಮೋದಿ

ಮೋದಿ ಪ್ರಧಾನಿಯಾದ ಬಳಿಕ ನಿರಂತರವಾಗಿ ಅಂತರಾಷ್ಟ್ರೀಯ ಯೋಗದಿನವನ್ನು ಜೂನ್ 21 ರಂದು ಆಚರಿಸಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾರೆ. ಮಂಗಳವಾರ ಮೋದಿಯೂ ಯೋಗವನ್ನು ಮಾಡುವುದರಿಂದ ಶಾಲಾ ಮಕ್ಕಳು ಯೋಗವನ್ನು ಮಾಡಿ ಯೋಗ ಮಹತ್ವವನ್ನು ತಿಳಿಯಲಿದ್ದಾರೆ. ಶಾಲೆಯ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು ಯೋಗಪಟುಗಳು ಭಾಗವಹಿಸುವುದರಿಂದ ಮಕ್ಕಳಿಗೆ ಯೋಗ ಶಿಕ್ಷಣ ಮತ್ತು ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಎಷ್ಟು ಮುಖ್ಯ ಎನ್ನುವುದು ತಿಳಿಸಲು ಯೋಗ ದಿನಾಚರಣೆ ಬಹಳ ಮುಖ್ಯವಾದದ್ದಾಗಿದೆ.

Recommended Video

ಮೈಸೂರಿನಲ್ಲಿ ಡಿಜಿಟಲ್‌ ಯೋಗ ಕೇಂದ್ರ ಉದ್ಘಾಟಿಸಿದ‌ ಮೋದಿ | OneIndia Kannada

English summary
8th International Yoga Day is being celebrated on June 21st. The Department of Education has issued half day holiday for schools across the state on Tuesday (June 21) for the purpose of celebrating Yoga Day in school. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X