• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು-ಕರಾವಳಿ ನಡುವೆ ಹೊಸ ರೈಲು ಘೋಷಣೆ

|

ಬೆಂಗಳೂರು, ಫೆಬ್ರವರಿ 11 : ಕರ್ನಾಟಕದ ಬೆಂಗಳೂರು-ಕರಾವಳಿ ನಡುವೆ ಹೊಸ ರೈಲನ್ನು ಘೋಷಣೆ ಮಾಡಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಯಶವಂತಪುರ-ಕಾರವಾರ-ವಾಸ್ಕೋ ನಡುವೆ ಈ ರೈಲು ಪ್ರತಿದಿನ ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೇಳಿದೆ. ಬೆಂಗಳೂರು ಮತ್ತು ಕರಾವಳಿಯನ್ನು ಈ ರೈಲು ಸಂಪರ್ಕಿಸಲಿದೆ.

ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

ರೈಲು ನಂಬರ್ 06587/06588 ರೈಲು ಪ್ರತಿ ದಿನ ರಾತ್ರಿ ಸಂಚರಿಸಲಿದೆ. ಈ ರೈಲು ಹಾಸನ-ಸುಬ್ರಮಣ್ಯ ರೋಡ್-ಪಡೀಲ್-ಉಡುಪಿ-ಕುಂದಾಪುರ-ಬೈಂದೂರು-ಭಟ್ಕಳ-ಮುರುಡೇಶ್ವರ-ಕುಮಟಾ-ಗೋಕರ್ಣ ರಸ್ತೆ-ಅಂಕೋಲಾ-ಕಾರವಾರ-ಮಡಗಾಂವ್ ಮೂಲಕ ವಾಸ್ಕೋಗೆ ತಲುಪಲಿದೆ.

ಕ್ಯಾಂಟೀನ್‌ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ

ಒಟ್ಟು 14 ಬೋಗಿಗಳನ್ನು ಹೊಂದಿರುವ ರೈಲು ಇದಾಗಿದೆ. 696 ಕಿ. ಮೀ. ದೂರವನ್ನು ಈ ರೈಲು ಕ್ರಮಿಸಲಿದೆ. ರೈಲಿಗೆ ವಿಶೇಷವಾದ ದರವನ್ನು ರೈಲ್ವೆ ಇಲಾಖೆ ನಿಗದಿ ಮಾಡಿದೆ. ಕರಾವಳಿ-ಬೆಂಗಳೂರು ಜನರಿಗೆ ಇದು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಹೊಸ ರೈಲನ್ನು ಘೋಷಣೆ ಮಾಡಿದ ಸುರೇಶ್ ಅಂಗಡಿಯವರಿಗೆ ಹಾಗೂ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

English summary
South western railway announced new daily overnight express special train between Yesvantpur and Vasco. Train will connect Karavali and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X