ಯಶವಂತಪುರ–ವಾಸ್ಕೊ ದ ಗಾಮಾ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರೇ ಗಮನಿಸಿ, ಇಲ್ಲಿ ಹೊಸ ನಿಲುಗಡೆ
ಬೆಂಗಳೂರು, ನವೆಂಬರ್ 03: ಕರ್ನಾಟಕದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪ್ರಯಾಣಿಕರ ಅನುಕೂಲತೆ ಹೆಚ್ಚಿಸುವ ಉದ್ದೇಶದಿಂದ ಯಶವಂತಪುರ-ವಾಸ್ಕೊ ದ ಗಾಮಾ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17309) ಪ್ರಯಾಣದ ಮಧ್ಯೆ ಹೊಸ ನಿಲ್ದಾಣಕ್ಕೆ ನಿಲುಗಡೆ ನೀಡಲಾಗಿದೆ. ಈ ಬಗ್ಗೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಯಶವಂತಪುರ-ವಾಸ್ಕೊ ದ ಗಾಮಾ ಎಕ್ಸ್‌ಪ್ರೆಸ್ ರೈಲು ತನ್ನ ಮಾರ್ಗದಲ್ಲಿ ಈವರೆಗೆ ನಿಲುಗಡೆ ನೀಡದೇ ಇದ್ದ ಶಿವಾನಿ ರೈಲು ನಿಲ್ದಾಣದಲ್ಲಿ ಸಹ ಇನ್ಮುಂದೆ ಹೆಚ್ಚುವರಿ ನಿಲುಗಡೆ ನೀಡಲಿದೆ. ಸ್ವತಃ ಈ ಸೌಲಭ್ಯ ಲಭ್ಯವೆಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಹೊಸ ನಿಲುಗಡೆಯು ಭಾನುವಾರ (ನವೆಂಬರ್ 2, 2025) ಸಂಜೆ 4.30 ಗಂಟೆಗೆ ಕೇಂದ್ರ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ನೀಡಿದ ಗ್ರೀನ್ ಸಿಗ್ನಲ್ ಬಳಿಕ ಚಾಲ್ತಿಗೆ ಬಂದಿದೆ. ಸಚಿವರು ಶಿವಾನಿ ರೈಲು ನಿಲ್ದಾಣದಲ್ಲಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಿಲುಗಡೆಯನ್ನು ಅಧಿಕೃತಗೊಳಿಸಿದರು.

ಈ ನಿಲುಗಡೆಯು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು, ಸಾಪ್ರ್ಟ್ ವೇರ್ ವೃತ್ತಿಪರರು, ವಿದ್ಯಾರ್ಥಿಗಳು ಹಾಗೂ ರೈತರು ಶಿವಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ವಾಸ್ಕೊ ಡ ಗಾಮಾ ಮುಂತಾದವು ಪ್ರಮುಖ ನಗರಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಶಿವಾನಿ ನಿಲ್ದಾಣವು ಇದೀಗ ಕರ್ನಾಟಕದ ಪ್ರಮುಖ ಸಾರಿಗೆ ಕೇಂದ್ರವಾಗುವ ನಿರೀಕ್ಷೆಯಿದೆ, ಸುತ್ತಮುತ್ತಲಿನ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಅಗ್ಗದ ಮತ್ತು ವೇಗವಾದ ಪ್ರಯಾಣ ಸೌಕರ್ಯ ಒದಗಿಸಲಾಗಿದೆ.
ಈ ಹೊಸ ನಿಲುಗಡೆಯು ಮಧ್ಯ ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ದಾರಿ ತೆರೆಯಲಿದೆ. ವ್ಯಾಪಾರ ಮತ್ತು ಜೀವನೋಪಾಯಕ್ಕಾಗಿ ಹೊಸ ಅವಕಾಶಗಳ ನಿರ್ಮಾಣ ನಿರೀಕ್ಷೆ ಇದೆ. ಸ್ಥಳೀಯ ಉದ್ಯಮಗಳಿಗೆ ಸಹ ಬೆಂಬಲ ಸಿಗಲಿದೆ. ಶಿಕ್ಷಣ, ಆರೋಗ್ಯ ಮತ್ತು ಇತರ ಮೂಲಭೂತ ಸೇವೆಗಳಿಗೆ ಸುಲಭ ಪ್ರವೇಶ ಸಿಗುವ ಮೂಲಕ ಶಿವಾನಿ ಪ್ರದೇಶದ ಜನತೆಗೆ ಇದು ಬಹುಮುಖ ಪ್ರಯೋಜನಕಾರಿ ಆಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಪಶ್ಚಿಮ ಪ್ರದೇಶವು ದೇಶದ ಅಭಿವೃದ್ಧಿ ಮತ್ತು ಜನಸೇವೆಗೆ ಬದ್ಧವಾಗಿದೆ. ಉತ್ತಮ ಸಂಪರ್ಕ ವ್ಯವಸ್ಥೆಯು ಹೊಸ ಅವಕಾಶಗಳನ್ನು ನೀಡುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂದೇಶವಾಗಿದೆ. ಈ ಹಿನ್ನೆಲೆ, ಶಿವಾನಿ ನಿಲ್ದಾಣದ ಹೊಸ ನಿಲುಗಡೆ ಸೌಲಭ್ಯವು ಪ್ರಯಾಣಿಕರಿಗೆ ಮತ್ತಷ್ಟು ಸುಗಮ ಸ್ನೇಹಪರ ಅನುಭವವನ್ನು ನೀಡಲಿದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗಿದೆ.
ವಾಸ್ಕೊ ದ ಗಾಮಾ ರೈಲು ಮಾರ್ಗ, ನಿಲುಗಡೆ
ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬಿರೂರು, ಶಿರಾ, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಆಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲಂ, ಸಾಂವರ್ಡೆಮ್ ಮತ್ತು ಮಡಗಾಂವ್ ನಿಲುಗಡೆ ನೀಡುತ್ತ ಈ ಮಾರ್ಗವಾಗಿ ವಾಸ್ಕೋಡಗಾಮಾ ತಲುಪುತ್ತಿತ್ತು. ಇದೀಗ ಶಿವನಿಗೂ ಒಂದು ಹೆಚ್ಚುವರಿ ನಿಲುಗಡೆ ನೀಡಲಿದೆ.












Click it and Unblock the Notifications