ಖಾತೆ ಮರುಹಂಚಿಕೆ ಬಳಿಕ ಯಾರ ಬಳಿ ಯಾವ ಖಾತೆ ಉಳಿದಿದೆ?
ಬೆಂಗಳೂರು, ಫೆಬ್ರವರಿ 10: ನೂತನ ಸಚಿವರಿಗೆ ಇಂದು ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಕೆಲವು ಪ್ರಭಾವಿ ಖಾತೆಗಳು ಇಂದು ಹಂಚಿಕೆ ಆಗಿವೆ.
ಹತ್ತು ಹೊಸ ಸಚಿವರಿಗೆ ಹತ್ತು ಖಾತೆಗಳನ್ನು ಹಂಚಿಕೆ ಮಾಡಿದ ನಂತರ ಇಷ್ಟು ದಿನ ಎರಡೆರಡು-ಮೂರು ಮೂರು ಖಾತೆಗಳನ್ನು ಅನುಭವಿಸುತ್ತಿದ್ದ ಕೆಲವರಿಗೆ ನಿರಾಸೆಯಾಗಿದೆ. ಅಥವಾ ಜವಾಬ್ದಾರಿ ಕಡಿಮೆ ಆಗಿದೆ ಎನ್ನಲೂ ಬಹುದಾಗಿದೆ.
ಖಾತೆ ಹಂಚಿಕೆ ಬಳಿಕ ಯಾವ ಸಚಿವರ ಬಳಿ ಯಾವ ಖಾತೆ ಇದೆ. ಯಾವ ಸಚಿವರ ಬಳಿ ಈಗಲೂ ಎರಡೆರಡು ಖಾತೆ ಅಥವಾ ಅದಕ್ಕಿಂತಲೂ ಹೆಚ್ಚು ಖಾತೆಗಳಿವೆ ಎಂಬುವ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಸಿಎಂ ಯಡಿಯೂರಪ್ಪ: ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಗುಪ್ತಚರ ಇಲಾಖೆ, ಯೋಜನೆ ಮತ್ತು ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ.
ಡಿಸಿಎಂ ಗೋವಿಂದ ಕಾರಜೋಳ- ಲೋಕೋಪಯೋಗಿ, ಹೆಚ್ಚುವರಿ ಖಾತೆ ಸಮಾಜ ಕಲ್ಯಾಣ ಇಲಾಖೆ
ಡಿಸಿಎಂ ಅಶ್ವತ್ಥನಾರಾಯಣ- ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ. ಹೆಚ್ಚುವರಿ ಖಾತೆಗಳು ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ.
ಡಿಸಿಎಂ ಲಕ್ಷ್ಮಣ ಸವದಿ- ಸಾರಿಗೆ ಇಲಾಖೆ
ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್
ಆರ್.ಅಶೋಕ್ - ಕಂದಾಯ ಇಲಾಖೆ
ಜಗದೀಶ್ ಶೆಟ್ಟರ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ. ಹೆಚ್ಚುವರಿ ಖಾತೆ ಸಾರ್ವಜನಿಕ ಉದ್ಯಮ ಇಲಾಖೆ.
ಬಿ.ಶ್ರೀರಾಮುಲು - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ. ಹೆಚ್ಚುವರಿ ಖಾತೆ ಹಿಂದುಳಿದ ವರ್ಗ ಅಭಿವೃದ್ಧಿ ಇಲಾಖೆ.
ಎಸ್.ಸುರೇಶ್ ಕುಮಾರ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ.
ವಿ.ಸೋಮಣ್ಣ - ವಸತಿ ಸಚಿವ
ಸಿ.ಟಿ.ರವಿ - ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಹೆಚ್ಚುವರಿ ಖಾತೆ ಕ್ರೀಡೆ ಮತ್ತು ಯುವಜನ.
ಬಸವರಾಜ ಬೊಮ್ಮಾಯಿ - ಗೃಹ ಇಲಾಖೆ. ಹೆಚ್ಚುವರಿ ಖಾತೆ ಕೃಷಿ ಇಲಾಖೆ.
ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ, ಮೀನುಗಾರಿಗೆ ಮತ್ತು ಬಂದರು.












Click it and Unblock the Notifications