ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಯಡಿಯೂರಪ್ಪ ಮನವಿ

ಬೆಂಗಳೂರು, ಮೇ 14 : ಸರ್ಕಾರ ಹಾಗೂ ಖಾಸಗಿ ವಲಯ ಜೊತೆ ಜೊತೆಯಾಗಿ ಸಾರ್ವಜನಿಕರಿಗೆ ಕೋವಿಡ್ - 19 ಹಾಗೂ ಇತರೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ನೀಡೋಣ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಗುರುವಾರ ಯಡಿಯೂರಪ್ಪ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ವೈದ್ಯರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಕೋವಿಡ್ - 19 ಸೋಂಕಿನ ಯಶಸ್ವಿ ನಿರ್ವಹಣೆಯಲ್ಲಿಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಾವು ನೀಡುವ ಸಹಕಾರ ಹಾಗೂ ಬೆಂಬಲಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ತಾವು ಎಲ್ಲಾ ಬಗೆಯ ವೈದ್ಯಕೀಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ತಮ್ಮ ಬದ್ಧತೆಯನ್ನು ನೆನಪಿಸುತ್ತಾ, ಸಾರ್ವಜನಿಕರಿಗೆ ಈ ಹಿಂದಿನಂತೆ ಎಲ್ಲಾ ಬಗೆಯ ಸೇವೆಗಳನ್ನು ತಕ್ಷಣ ಆರಂಭಿಸಬೇಕಾಗಿ ಈ ಮೂಲಕ ಕೋರುತ್ತೇನೆ ಎಂದು ತಿಳಿಸಿದ್ದಾರೆ.

Yediyurappa

ಕೋವಿಡ್ -19 ಪರೀಕ್ಷೆ, ಚಿಕಿತ್ಸೆ ಮುಂತಾದವುಗಳನ್ನು ಸರ್ಕಾರದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆದ್ಯತೆಯ ಮೇಲೆ ನೀಡಲಾಗುತ್ತಿದೆ. ತಾವುಗಳು ಶಂಕಿತ ಪ್ರಕರಣಗಳನ್ನು ನಿಗದಿತ ಮಾರ್ಗಸೂಚಿ ಅನ್ವಯ ಸರ್ಕಾರಕ್ಕೆ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಗಳು ಕೋವಿಡ್ - 19ರ ಕಾರಣಕ್ಕಾಗಿ ಸಾರ್ವಜನಿಕರಿಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಸೇವೆಯನ್ನು ತಿರಸ್ಕರಿಸಬಾರದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕೋವಿಡ್ - 19 ವಿರುದ್ಧದ ನಮ್ಮ ಹೋರಾಟದಲ್ಲಿ ನಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+