ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ಘೋಷಿಸಿದ ಬಿಎಸ್‌ವೈ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22 : ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಹಿಂದಿನ ಸರ್ಕಾರಗಳು ಮಂಟಪ ನಿರ್ಮಾಣಕ್ಕೆ ಅನುದಾನ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಶನಿವಾರ ಯಡಿಯೂರಪ್ಪ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಲು ಮತ್ತು ಸದ್ಯ ಕೆಲಸ ಆರಂಭಿಸಲು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ತಕ್ಷಣವೇ 20 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ.

ಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರುಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರು

12ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಜಗತ್ತಿನ ಮೊದಲನೆ ಪಾರ್ಲಿಮೆಂಟ್ 'ಅನುಭವ ಮಂಟಪ' ಕುರಿತು ವಿವರಿಸಿದಂತೆ ಮತ್ತು ಅವರ ಜೀವನದ ಬಗ್ಗೆ ಹಾಗೂ ಅವರು ಸಾರಿದ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಾದರಿಯಲ್ಲಿ ಒಂದು ವಿನೂತನ ಅನುಭವ ಮಂಟಪ ನಿರ್ಮಾಣ ಮಾಡುವ ಅವಶ್ಯಕತೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬಸವಣ್ಣನ ಭಕ್ತರಿಗೆ ಆಘಾತ: ಐಕ್ಯ ಮಂಟಪಕ್ಕೆ ಪ್ರವೇಶ ನಿರ್ಬಂಧಬಸವಣ್ಣನ ಭಕ್ತರಿಗೆ ಆಘಾತ: ಐಕ್ಯ ಮಂಟಪಕ್ಕೆ ಪ್ರವೇಶ ನಿರ್ಬಂಧ

Yediyurappa Allots Rs 50 Crore For Constructing Anubhava Mantapa

ವಿಶ್ವದ ಪ್ರಥಮ ಪ್ರಾರ್ಲಿಮೆಂಟ್ ಎನಿಸಿದ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ತೋರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆಗೊಂಡರೂ ಸರ್ಕಾರ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಿರಲಿಲ್ಲ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಸಿದ್ದರಾಮಯ್ಯ ಅಭಿಪ್ರಾಯಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಸಿದ್ದರಾಮಯ್ಯ ಅಭಿಪ್ರಾಯ

ಹಿರಿಯ ವಿದ್ವಾಂಸ ಗೊ. ರು. ಚನ್ನಬಸಪ್ಪ ನೇತೃತ್ವದ ಸಮಿತಿ ಅನುಭವ ಮಂಟಪ ನಿರ್ಮಾಣ ಮಾಡಲು ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ, ಸಿದ್ದರಾಮಯ್ಯ ತಮ್ಮ ಕೊನೆ ಬಜೆಟ್‌ನಲ್ಲಿ ಈ ಪ್ರಸ್ತಾಪ ಕೈ ಬಿಟ್ಟರು. ಕುಮಾರಸ್ವಾಮಿ ಅವರು ಸಹ 2 ಬಜೆಟ್‌ನಲ್ಲಿಯೂ ಇದನ್ನು ಪ್ರಸ್ತಾಪಿಸಿರಲಿಲ್ಲ.

English summary
B.S.Yediyurappa lead Karnataka government allots Rs 50 crore for constructing Anubhava Mantapa. Anubhava Mantapa construction long pending demand of lingayat community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X