ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ವಿರುದ್ಧ ಯಡಿಯೂರಪ್ಪ ತಂತ್ರ

Recommended Video

      ಬಿಜೆಪಿ ಹೊಳಪು ಕುಂದದಂತೆ ಮಾಡಲು ಯಡಿಯೂರಪ್ಪ ಪ್ಲ್ಯಾನ್ | Oneindia Kannada

      ಬೆಂಗಳೂರು, ಜೂನ್ 06: ಲೋಕಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಗ್ರಾಮ ವಾಸ್ತವ್ಯದ ಮೂಲಕ ವಾಪಸ್ ಪಡೆಯುವ ಯೋಚನೆಯಲ್ಲಿರುವ ಕುಮಾರಸ್ವಾಮಿಗೆ ಯಡಿಯೂರಪ್ಪ ಅವರು ಸರಿಯಾದ ಪ್ರತಿಸವಾಲು ಎಸೆಯಲು ಸಜ್ಜಾಗಿದ್ದಾರೆ.

      2006ರಲ್ಲಿ ಅರ್ಧ ರಾತ್ರಿ ಅಧಿಕಾರ ಹಿಡಿದಿದ್ದ ಕುಮಾರಸ್ವಾಮಿ ಅವರಿಗೆ ಭಾರಿ ಜನಪ್ರಿಯತೆ ತಂದು ಕೊಟ್ಟಿದ್ದು ಅವರ ಗ್ರಾಮ್ಯ ವಾಸ್ತವ್ಯ, ಈಗ ಲೋಕಸಭೆ ಚುನಾವಣೆಯಲ್ಲಿ ಸೋತು ಮುಳುಗುತ್ತಿರುವ ಹಡಗಿನಂತೆ ಭಾಸವಾಗುತ್ತಿರುವ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿ ಅವರ ವರ್ಚಸ್ಸನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತೆ ಗ್ರಾಮ್ಯ ವಾಸ್ತವ್ಯಕ್ಕೆ ತೆರಳುತ್ತಿದ್ದಾರೆ.

      ಆದರೆ ಕುಮಾರಸ್ವಾಮಿ ಅವರ ಬದ್ಧ ಎದುರಾಳಿ 2006ರ ಕುಮಾರಸ್ವಾಮಿ ಅವರ ಅಧಿಕಾರ ಮಿತ್ರ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಅವರ ಮುಳುಗುತ್ತಿರುವ ಹಡಗು ಮತ್ತೆ ತೇಲುವುದನ್ನು ಹೇಗಾದರೂ ತಪ್ಪಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಹೀಗಾಗಿಯೇ ಅವರು ಕುಮಾರಸ್ವಾಮಿ ಅವರ ಗ್ರಾಮ್ಯ ವಾಸ್ತವ್ಯಕ್ಕೆ ವಿರುದ್ಧವಾಗಿ ಬರ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.

      ಬಿಜೆಪಿತ ಖ್ಯಾತಿ ಕುಂದದಂತೆ ತಡೆಯುವ ಪ್ರಯತ್ನ

      ಬಿಜೆಪಿತ ಖ್ಯಾತಿ ಕುಂದದಂತೆ ತಡೆಯುವ ಪ್ರಯತ್ನ

      ಬರ ಈಗಾಗಲೇ ರಾಜ್ಯವನ್ನು ಕಂಗೆಡಿಸಿದೆ, ಇದು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿ ಬರ ಪ್ರವಾಸ ಮಾಡುವ ಮೂಲಕ, ಬಿಜೆಪಿ ಗೆಲುವಿನ ಅಲೆಯಲ್ಲಿ ಮೈಮರೆತಿಲ್ಲ ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಲಿದ್ದಾರೆ. ಅದರ ಮೂಲಕ ಖ್ಯಾತಿಯ ಉತ್ತುಂಗದಲ್ಲಿರುವ ಬಿಜೆಪಿಯ ಹೊಳಪು ಕುಂದದಂದೆ ಮಾಡುವ ಯತ್ನವೂ ಇದರಲ್ಲಿ ಅಡಕವಾಗಿದೆ.

      ಗ್ರಾಮ್ಯ ವಾಸ್ತವ್ಯ ಟೀಕಿಸಿರುವ ಯಡಿಯೂರಪ್ಪ

      ಗ್ರಾಮ್ಯ ವಾಸ್ತವ್ಯ ಟೀಕಿಸಿರುವ ಯಡಿಯೂರಪ್ಪ

      ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಈಗಾಗಲೇ ಕುಮಾರಸ್ವಾಮಿ ಅವರ ಗ್ರಾಮ್ಯ ವಾಸ್ತವ್ಯವನ್ನು ಟೀಕಿಸಿದೆ. ಕುಮಾರಸ್ವಾಮಿ ಅವರು ವಿಧಾನಸೌಧದಲ್ಲೇ ಪಟ್ಟಾಗಿ ಕೂತು ಕೆಲಸ ಮಾಡಿದರೆ ಸಾಕು ಎಂದು ಬಿಜೆಪಿ ಹೇಳುತ್ತಿದೆ. ಆದರೆ ಗ್ರಾಮ್ಯ ವಾಸ್ತವ್ಯ ಕುಮಾರಸ್ವಾಮಿಯ ರಾಜಕೀಯ ಖ್ಯಾತಿಯನ್ನು ಹೆಚ್ಚು ಮಾಡುತ್ತದೆ ಎಂಬ ಅಳುಕು ಬಿಜೆಪಿಯವರಿಗಿದ್ದೇ ಇದೆ. ಹಾಗಾಗಿಯೇ ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರು ಬರ ಪ್ರವಾಸ ಕೈಗೊಂಡಿದ್ದಾರೆ.

      ಎಚ್‌ಡಿಕೆ ಮುಂಚೆ ಯಡಿಯೂರಪ್ಪ ಪ್ರವಾಸ

      ಎಚ್‌ಡಿಕೆ ಮುಂಚೆ ಯಡಿಯೂರಪ್ಪ ಪ್ರವಾಸ

      ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರು ಗ್ರಾಮ್ಯ ವಾಸ್ತವ್ಯ ಪ್ರಾರಂಭವ ಮಾಡುವ ಮುಂಚೆಯೇ ಬರ ಪ್ರವಾಸ ಪ್ರಾರಂಭ ಮಾಡುತ್ತಿದ್ದು, ಈ ಪ್ರವಾಸವು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದೆ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಪ್ರಾರಂಭಿಸುವ ಗುರ್ಮಿಟ್‌ಕಲ್‌ ಗೂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.

      ಸಿದ್ದರಾಮಯ್ಯ ಕ್ಷೇತ್ರಕ್ಕೆ ಯಡಿಯೂರಪ್ಪ ಭೇಟಿ

      ಸಿದ್ದರಾಮಯ್ಯ ಕ್ಷೇತ್ರಕ್ಕೆ ಯಡಿಯೂರಪ್ಪ ಭೇಟಿ

      ಸಿದ್ದರಾಮಯ್ಯ ಅವರು ಗೆದ್ದಿರುವ ಕ್ಷೇತ್ರವಾದ ಬಾದಾಮಿ, ಹುನಗುಂದ, ಕೊಪ್ಪಳ, ಲಿಂಗಸಗೂರು, ಗುರ್ಮಿಟ್‌ಕಲ್ ಮುಂತಾದ ಕಡೆಗಳಿಗೆ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಅವರ ರಾಜ್ಯ ಬರ ಪ್ರವಾಸ ನಾಳೆ (ಜೂನ್ 7) ರಿಂದ ಪ್ರಾರಂಭವಾಗಲಿದೆ. ಪ್ರವಾಸ ಮೂರು ದಿನಗಳ ಕಾಲ ನಡೆಯಲಿದೆ.

      ಜನಪರ ರಾಜಕಾರಣಕ್ಕೆ ಉದಾಹರಣೆ

      ಜನಪರ ರಾಜಕಾರಣಕ್ಕೆ ಉದಾಹರಣೆ

      ರಾಜ್ಯದ ದೃಷ್ಟಿಯಿಂದ ಈ ಬೆಳವಣಿಗೆ ಗಮನಿಸುದಾದರೆ, ಪರಸ್ಪರ ಕಚ್ಚಾಟ, ಕಾಲೆಳೆತ, ಅಸಹನೆ, ಕುರ್ಚಿ ಎಳೆಯುವ ಹೀನ ಪ್ರಯತ್ನಗಳನ್ನೇ ನೋಡುತ್ತಿದ್ದ ಜನರಿಗೆ ಕೆಲ ಸಮಯವಾದರೂ ಜನ ಪರ ರಾಜಕಾರಣ ನೋಡುವಂತಾಗಿದೆ. ಆಡಳಿತ ಪಕ್ಷದ ಮುಖಂಡ ಸಿಎಂ ಕುಮಾರಸ್ವಾಮಿ ಅವರು ಜನರ ಬಳಿ ತಲುಪುವ ಯತ್ನ ಮಾಡುತ್ತಿದ್ದರೆ, ವಿರೋಧ ಪಕ್ಷದ ನಾಯಕ ಸಹ ಅದಕ್ಕೆ ಪ್ರತಿಯಾಗಿ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ಯತ್ನ ಮಾಡುತ್ತಿದ್ದಾರೆ. ಇದು ಉತ್ತಮ ಜನಪರ ರಾಜಕೀಯ ಎಂದು ಕರೆಯಬಹುದಾದ ಘಟನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+