• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಿದ್ಧರಾಮಯ್ಯನವರೇ ನಿಮ್ಮ ದುರಹಂಕಾರ ಅಡಗಿಲ್ಲ ಏಕೆ?'

By Mahesh
|
   'ಸಿದ್ಧರಾಮಯ್ಯನವರೇ ನಿಮ್ಮ ದುರಹಂಕಾರ ಅಡಗಿಲ್ಲ ಏಕೆ? | Oneindia Kannada

   ಬೆಂಗಳೂರು, ಜೂನ್ 11: 'ಶಾಸಕರ ಖರೀದಿಗೆ 150 ಕೋಟಿ ರು ಆಫರ್ ನೀಡಲು ಯಡಿಯೂರಪ್ಪ ಮುಂದಾಗಿದ್ದರು' ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರು ಪತ್ರಿಕ ಪ್ರಕಟಣೆ ಹೊರಡಿಸಿ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

   ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಪಕ್ಷ ಹೀನಾಯ ಸೋಲು ಅನುಭವಿಸಿದರು ನಿಮ್ಮ ದುರಹಾಂಕರ ಅಡಗಿಲ್ಲವಲ್ಲ ಏಕೆ? ಸಿದ್ಧರಾಮಯ್ಯನವರೇ ಚಾಮುಂಡೇಶ್ವರಿ ಜನತೆ ನಿಮಗೆ ಮತ್ತು ನಿಮ್ಮ ದುರಾಹಂಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ.

   ಬಿಜೆಪಿ ಸೇರ್ತಾರಾ ಕಾಂಗ್ರೆಸ್ ಅತೃಪ್ತರು? ಬಿಎಸ್ ವೈ ಎಸೆದ ಹೊಸ ಬಾಂಬ್!

   ರಾಜ್ಯದ ಚುನಾವಣೆ ಇತಿಹಾಸದಲ್ಲೇ ಒಬ್ಬ ಹಾಲಿ ಮುಖ್ಯಮಂತ್ರಿ 36 ಸಾವಿರಕ್ಕೂ ಹೆಚ್ಚು ಮತಗಳ

   ಅಂತರದಿಂದ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದೀರಿ. ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿಯಿಂದಲೇ ಬಾದಾಮಿಗೆ ಹೋಗಿ ಅಲ್ಲಿಯೂ ಕೂಡ ಅತ್ಯಲ್ಪ 1600 ಮತಗಳಿಂದ ಪ್ರಯಾಸದ ಗೆಲುವು ಸಾಧಿಸಿದ್ದು ದೊಡ್ಡ ಸಾಧನೆ ಏನಲ್ಲ.

   ಪ್ರಜಾಪ್ರಭುತ್ವದಲ್ಲಿ ಜನತೆಗೆ ಮಾಡಿದ ಅಪಮಾನ

   ಪ್ರಜಾಪ್ರಭುತ್ವದಲ್ಲಿ ಜನತೆಗೆ ಮಾಡಿದ ಅಪಮಾನ

   ಚಾಮುಂಡೇಶ್ವರಿಯ ಜನ ಹಣ ಮತ್ತು ಇತರೆ ಆಮಿಷಗಳಿಗೆ ಒಳಗಾಗಿ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಿ ನನ್ನನ್ನು ಸೋಲಿಸಿದರು ಎಂಬ ಹೇಳಿಕೆ ಪ್ರಜಾಪ್ರಭುತ್ವದಲ್ಲಿ ಜನತೆಗೆ ಮಾಡಿದ ಅಪಮಾನ. ಜನತೆಯಿಂದ ಗೆದ್ದು ಬಂದು ಧೀರ್ಘ ಕಾಲ ಅಧಿಕಾರ ಅನುಭವಿಸಿ ಸೋತಾಗ ಈ ರೀತಿಯ ಹೇಳಿಕೆ ಪ್ರಜಾಪ್ರಭುತ್ವದಲ್ಲಿ ನಿಮಗಿರುವ ಅಪನಂಬಿಕೆಯನ್ನು ಎತ್ತಿ ತೋರಿಸುತ್ತದೆ.

   ಜನತೆ ನಿಮಗೆ ತಕ್ಕ ಪಾಠ ಕಲಿಸಿದೆ

   ಜನತೆ ನಿಮಗೆ ತಕ್ಕ ಪಾಠ ಕಲಿಸಿದೆ

   ಬಾದಾಮಿಯ ಜನಕ್ಕೆ ನಿಮ್ಮ ಈ ದುರಾಹಂಕಾರ ಪ್ರವೃತ್ತಿ ಮತ್ತು ಪ್ರಜಾಪ್ರಭುತ್ವದಲ್ಲಿ ಇರುವ ಅಪನಂಬಿಕೆ ಗೊತ್ತಿರದೆ ನಿಮ್ಮನ್ನು ಗೆಲ್ಲಿಸಿದ್ದಾರೆ. ನೀವು ಹೋದ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದು 5 ವರ್ಷ ಆಡಳಿತ ನಡೆಸಿದ್ದೀರಿ, ಜನತೆ ನಿಮಗೆ ತಕ್ಕ ಪಾಠ ಕಲಿಸಿ ನಿಮ್ಮ ಪಕ್ಷವನ್ನು 78 ಸ್ಥಾನಗಳಿಗೆ ಇಳಿಸಿದ್ದಾರೆ, 40 ಸ್ಥಾನ ಗೆದ್ದಿದ್ದ ನಾವು 104 ಸ್ಥಾನಗಳಿಗೆ ಜನ ಏರಿಸಿದ್ದಾರೆ. ಜನರ ಒಲವು ನಮ್ಮ ಕಡೆಯಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

   ಯಾವ ಶಾಸಕರಿಗೂ ಹಣದ ಆಮಿಷ ಒಡ್ಡಿಲ್ಲ

   ಯಾವ ಶಾಸಕರಿಗೂ ಹಣದ ಆಮಿಷ ಒಡ್ಡಿಲ್ಲ

   ಈಗಲೂ ಕೂಡ 104 ಸ್ಥಾನ ಗೆದ್ದಿದ್ದರೂ ಅಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡಲು ಅಣಿಯಾಗಿದ್ದೇವೆ ಮತ್ತು ನಮ್ಮ ಜವಾಬ್ದಾರಿಯನ್ನು ಅತ್ಯಂತ ಆತ್ಮ ಸ್ಥೈರ್ಯದಿಂದ ಪ್ರಬಲವಾಗಿ ನಿರ್ವಹಿಸುತ್ತೇವೆ. ನೀವು ಹೇಳಿದ ಪ್ರಕಾರ ನಮ್ಮ ಪಕ್ಷ ಯಾವುದೇ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿಲ್ಲ. ಆದರೆ,'ನಿಮ್ಮ ಆತ್ಮ ಸಾಕ್ಷಿ ಮತ್ತು ಜನತೆಯ ಅಭಿಮತಕ್ಕೆ ಅನುಗುಣವಾಗಿ ನನ್ನನ್ನು ಬೆಂಬಲಿಸಿ ಎಂದು ಕೇಳಿದ್ದೆ'. ನೀವು ಹೇಳಿದ ಪ್ರಕಾರ ಯಾವ ಶಾಸಕರಿಗೂ 50 ಅಥವಾ 100 ಕೋಟಿ ಆಮಿಷ ಒಡ್ಡಿಲ್ಲ. ನಿರಾಧಾರವಾಗಿ ಹೇಳಿಕೆ ಕೊಡುವುದು ನಿಮ್ಮ ಬಾಲಿಶತನ ತೋರಿಸುತ್ತದೆ.

   ಇದು ನಿಮ್ಮ ಯಾವ ಸ್ವಾಭಿಮಾನದ ಸಂಕೇತ?

   ಇದು ನಿಮ್ಮ ಯಾವ ಸ್ವಾಭಿಮಾನದ ಸಂಕೇತ?

   ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್‍ನ ಜವಬ್ದಾರಿ ನಾಯಕನಾಗಿ ಈ ರೀತಿಯ ಹೇಳಿಕೆ ಕೊಡುವುದು ನಿಮ್ಮ ಘನತೆಗೆ ತಕ್ಕದಲ್ಲ, ನೀವು ಮಾತ್ತೆತ್ತಿದರೆ ದೊಡ್ಡ ಸ್ವಾಭಿಮಾನಿ ನಾಯಕನೆಂದು ಹೇಳಿಕೊಳ್ಳುತ್ತೀರಿ. ನೀವು ಮತ್ತು ನಿಮ್ಮ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್‍ನ ಅದರಲ್ಲೂ ಹೆಚ್.ಡಿ ದೇವೇಗೌಡ ಮತ್ತು ಹೆಚ್.ಡಿ ಕುಮಾರಸ್ವಾಮಿ ಅವರ ಅಡಿಆಳಾಗಿ ಮಾಡಿ ಜನತೆಯ ಅಭಿಮತಕ್ಕೆ ವಿರುದ್ಧವಾಗಿ ಸರ್ಕಾರ ರಚಿಸಿದ್ದೀರಿ. ಇದು ನಿಮ್ಮ ಯಾವ ಸ್ವಾಭಿಮಾನದ ಸಂಕೇತ?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former CM BS Yeddyurappa today(June 11) lambasts former CM Siddaramaiah and declines all allegations made against him. Yeddyurappa challenged Siddaramaiah to show proof about offering Rs 150 Cr to MLAs.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more