ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿಲ್ಲ : ಬಿಎಸ್‌ವೈ

Posted By: ಕುಮುಟಾ ಪ್ರತಿನಿಧಿ
Subscribe to Oneindia Kannada
   ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿಲ್ಲ- BSY | Oneindia Kannada

   ಕಾರವಾರ, ನವೆಂಬರ್ 15 : 'ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಮೊದಲನೇ ಆರೋಪಿ. ಮುಖ್ಯಮಂತ್ರಿಗಳು ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು' ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

   ಹಾಲಾಡಿ ನಮ್ಮ ಅಭ್ಯರ್ಥಿ : ವಿರೋಧಿಗಳಿಗೆ ಬಿಎಸ್ವೈ ತಿರುಗೇಟು

   ಮಂಗಳವಾರ ಮುರುಡೇಶ್ವರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಸಿದ್ದರಾಮಯ್ಯರಿಂದ ಹಲವಾರು ಹಗರಣಗಳು ನಡೆದಿದೆ. ಗಣಪತಿ ಪ್ರಕರಣದಲ್ಲಿ ಜಾರ್ಜ್ ಆರೋಪಿಯಾಗಿದ್ದರೂ ಕೂಡ ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆ ಪಡೆಯುತ್ತಿಲ್ಲ' ಎಂದು ಆರೋಪಿಸಿದರು.

   ಭಟ್ಕಳ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕ್ಷೇತ್ರ: ಯಡಿಯೂರಪ್ಪ

   'ಪರಿವರ್ತನಾ ಯಾತ್ರೆಯಲ್ಲಿ ನಾವು ಯಾವುದೇ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿಲ್ಲ. ಈಗಾಗಲೇ ಭಟ್ಕಳದಲ್ಲಿ ಪರಿವರ್ತನಾ ಯಾತ್ರೆ ಯಶಸ್ವಿಯಾಗಿದೆ. ಜನರಿಂದ ಒಳ್ಳೆಯ ಅಭಿಪ್ರಾಗಳು ಬಂದಿದ್ದು, ಬೆಂಬಲ ಕೂಡ ಸಿಕ್ಕಿದೆ' ಎಂದರು.

   ಹಾಲಾಡಿ ನಮ್ಮ ಅಭ್ಯರ್ಥಿ : ವಿರೋಧಿಗಳಿಗೆ ಬಿಎಸ್ವೈ ತಿರುಗೇಟು

   'ಸುರ್ವರ್ಣ ವಿಧಾನಸೌಧ ವರ್ಷದಲ್ಲಿ 365 ದಿನವೂ ಚಟುವಟಿಕೆಯಿಂದ ಇರುವಂತೆ ಮಾಡಬೇಕು. ಹೀಗಾದಾಗ ಮಾತ್ರ ಅಧಿವೇಶನದಲ್ಲಿ ಶಾಸಕರು, ಸಚಿವರು ಗೈರಾಗುವುದು ಕಡಿಮೆಯಾಗುತ್ತದೆ' ಎಂದು ಹೇಳಿದರು.

   'ಸಿದ್ದರಾಮಯ್ಯ ಮಠಕ್ಕೆ ಹೋಗಿದ್ದರೆ ಅದು ಅಪವಿತ್ರ ಆಗುತ್ತಿತ್ತು'

   ಕಾಂಗ್ರೆಸ್ ಜನರ ಹಣ ಲೂಟಿ ಮಾಡುತ್ತಿದೆ

   ಕಾಂಗ್ರೆಸ್ ಜನರ ಹಣ ಲೂಟಿ ಮಾಡುತ್ತಿದೆ

   ಕುಮಟಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, 'ನರೇಂದ್ರ ಮೋದಿಯವರ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನವನ್ನು ನೀಡಿದ್ದರೂ ಅದನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ ಕಾಂಗ್ರೆಸ್ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ' ಎಂದು ಆರೋಪಿಸಿದರು.

   ಬಿಜೆಪಿ ಅಭಿವೃದ್ಧಿ ಪರವಾಗಿದೆ

   ಬಿಜೆಪಿ ಅಭಿವೃದ್ಧಿ ಪರವಾಗಿದೆ

   'ಬಿಜೆಪಿ ಯಾವಾಗಲೂ ಅಭಿವೃದ್ಧಿ ಪರ ನಿಲ್ಲುತ್ತದೆ. ಜನದನಿಗೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಸಂಸತ್ ಸದಸ್ಯರಾದ, ಯುವನಾಯಕ ಅನಂತ್ ಕುಮಾರ್ ಹೆಗಡೆಯವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿದೆ' ಎಂದರು.

   419 ಕೋಟಿ ಅನುದಾನ ನೀಡಿದೆ

   419 ಕೋಟಿ ಅನುದಾನ ನೀಡಿದೆ

   'ಜನಧನ್ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು 1.1 ಕೋಟಿ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಭಾರತ ಅನ್ವಯ, ಕೇಂದ್ರ ಸರ್ಕಾರ ರಾಜ್ಯಕ್ಕೆ 419.5 ಕೋಟಿ ನೀಡಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ' ಎಂದರು.

   ವ್ಯಾಪಕ ವಿರೋಧವಿದೆ

   ವ್ಯಾಪಕ ವಿರೋಧವಿದೆ

   'ಕಸ್ತೂರಿರಂಗನ್ ವರದಿ ಜಾರಿಗೆ ವ್ಯಾಪಕ ವಿರೋಧವಿದೆ. ಸ್ಥಳೀಯರ ಕಾಳಜಿಯನ್ನು ಅರ್ಥಮಾಡಿಕೊಂಡು ಮುಂದೆ ಸಾಗಬೇಕಿದೆ' ಎಂದು ಯಡಿಯೂರಪ್ಪ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka BJP president B.S.Yeddyurappa addressed Nava Karnataka parivarthana yatra in Kumuta, Uttara Kannada.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ