Year Ender 2025: ಪ್ರಾಪರ್ಟಿ ವಿಷಯದಲ್ಲಿ 2025ನೇ ಸಾಲಿನಲ್ಲಿ ಆಗಿರುವ 6 ಪ್ರಮುಖ ಬದಲಾವಣೆಗಳು!
Year Ender 2025: ಕರ್ನಾಟಕ ಸರ್ಕಾರವು 2025ನೇ ಸಾಲಿನಲ್ಲಿ ಪ್ರಾಪರ್ಟಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳಿಂದ ಪ್ರಾಪರ್ಟಿ ಹೊಂದಿರುವವರಿಗೆ ಹಾಗೂ ಪ್ರಾಪರ್ಟಿ ಖರೀದಿ ಮಾಡಬೇಕು ಎಂದು ಕಾಯುತ್ತಿರುವ ಲಕ್ಷಾಂತರ ಜನ ಕನ್ನಡಿಗರಿಗೆ ಅನುಕೂಲವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅನ್ವಯವಾಗುವಂತೆ ಪ್ರಾಪರ್ಟಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ. ಅದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ ಕಾಂಗ್ರೆಸ್ ಸರ್ಕಾರವು 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ಎಂದು ಘೋಷಿಸಿದೆ. ನಮ್ಮ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ಭೂಮಿ ಗ್ಯಾರಂಟಿ ರಾಜ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಸರ್ಕಾರ ಹೇಳಿದೆ. ಹಾಗಾದರೆ ಸರ್ಕಾರ ಆಸ್ತಿ - ಭೂಮಿ ವಿಚಾರದಲ್ಲಿ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳೇನು ಎಂದು ನೋಡೋಣ.

ಬಿ - ಖಾತಾದಿಂದ ಎ ಖಾತಾ: ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಆಸ್ತಿದಾರರು ಬಿ ಖಾತಾದಿಂದ ಎ ಖಾತಾಗೆ ತಮ್ಮ ಪ್ರಾಪರ್ಟಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕಾಯುತ್ತಿದ್ದರು. ಈ ರೀತಿ ಲಕ್ಷಾಂತರ ಜನ ಎದುರು ನೋಡುತ್ತಿದ್ದ ಬಿ ಖಾತಾದಿಂದ ಎ ಖಾತಾ ಪ್ರಕ್ರಿಯೆಯು ಈ ವರ್ಷ ಅಧಿಕೃತವಾಗಿ ಜಾರಿಗೆ ಬಂದಿದೆ. ನವೆಂಬರ್ 1, 2025 ರಿಂದ, ಬಿ-ಖಾತಾ ಆಸ್ತಿಗಳು (ವಿಶೇಷವಾಗಿ ಸೆಪ್ಟೆಂಬರ್ 30, 2024 ಕ್ಕಿಂತ ಮೊದಲು ಇರುವವು) ಎ-ಖಾತಾ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಅರ್ಹ ಎಂದು ಸರ್ಕಾರ ಘೋಷಿಸಿದೆ.
ಇ - ಖಾತಾ: ಇನ್ನು ಈ ವರ್ಷ ಜಾರಿಗೆ ತಂದ ಮತ್ತೊಂದು ಪ್ರಮುಖ ಮತ್ತು ಆಸ್ತಿಗೆ ಸಂಬಂಧಿಸಿದ ಬದಲಾವಣೆ ಎಂದರೆ ಆಸ್ತಿಗಳಿಗೆ ಇ - ಖಾತಾ ನೀಡುವುದು.ಹಳೆಯ ಕಾಗದದ ಖಾತಾ ದಾಖಲೆಗಳನ್ನು ಬದಲಾಯಿಸುವ ಮೂಲಕ ಕಟ್ಟಡ ಯೋಜನೆ ಅನುಮೋದನೆಗಳು, ತೆರಿಗೆ ಪಾವತಿಗಳು ಮತ್ತು ಕಾನೂನು ವಹಿವಾಟುಗಳಿಗಾಗಿ ಜುಲೈ 1, 2025 ರಿಂದ ಎಲ್ಲಾ ಆಸ್ತಿಗಳಿಗೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇದರಿಂದ ಆಸ್ತಿ ಮಾರಾಟದ ಸಮಯದಲ್ಲಿ ಆಗುತ್ತಿದ್ದ ಮೋಸ ತಪ್ಪಿದ್ದು, ತೆರಿಗೆ ವಂಚನೆಗೂ ಬ್ರೇಕ್ ಬಿದ್ದಂತೆ ಆಗಿದೆ.
ಇ - ಸ್ವತ್ತು: ಕರ್ನಾಟಕ ಸರ್ಕಾರವು ಕೇವಲ ನಗರ ಪ್ರದೇಶದ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲ ಗ್ರಾಮೀಣ ಭಾಗದ ಆಸ್ತಿದಾರರಿಗೂ ಗುಡ್ನ್ಯೂಸ್ ಕೊಟ್ಟಿದೆ. ರಾಜ್ಯದ ಗ್ರಾಮೀಣ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಇ-ಸ್ವತ್ತು 2.0 ಪರಿಚಯಿಸಿದೆ. ಇದು 97 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲಿದೆ.
ಇ-ಡಿಜಿಟಲ್ ಸ್ಟ್ಯಾಂಪ್: ಆಸ್ತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇದೀಗ ಇ- ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ಪರಿಚಯಿಸಿದೆ. ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಈ ಹಿಂದೆಲ್ಲ ಇ- ಸ್ಟ್ಯಾಂಪ್ ಬಳಕೆ ಮಾಡಲಾಗುತ್ತಿತ್ತು. ಇನ್ಮುಂದೆ ಇದರ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ವ್ಯವಸ್ಥೆ ಪರಿಚಯಿಸಲಾಗಿದೆ. ಇದು ಆಸ್ತಿಗಳ ರಿಜಿಸ್ಟ್ರೇಷನ್ನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಾಜ್ಯ ಕಂದಾಯ ಇಲಾಖೆ ಹೇಳಿದೆ.
ನೋಂದಣಿ ಶುಲ್ಕ ಹೆಚ್ಚಳ: ಕರ್ನಾಟಕ ಸರ್ಕಾರವು ಪ್ರಾಪರ್ಟಿ ವಿಚಾರದಲ್ಲಿ ಕೇವಲ ಗುಡ್ನ್ಯೂಸ್ ಮಾತ್ರವಲ್ಲ. ಕೆಲವೊಂದು ಶಾಕ್ಗಳನ್ನೂ ಕೊಟ್ಟಿದೆ. ಆಗಸ್ಟ್ 31, 2025 ರಿಂದ ಆಸ್ತಿ ನೋಂದಣಿ ಶುಲ್ಕಗಳು 1% ರಿಂದ 2% ಕ್ಕೆ (ಒಟ್ಟು ವಹಿವಾಟು ವೆಚ್ಚಗಳು ಸುಮಾರು 7.6%) ಹೆಚ್ಚಳವೂ ಆಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications