ವರ್ಷಾಂತ್ಯ ವಿಶೇಷ : ಜುಲೈನಲ್ಲಿ ಕಾಡಿದ ಲೋಕಾಯುಕ್ತ ಹಗರಣ

ಲೋಕಾಯುಕ್ತ ಹಗರಣದ ತನಿಖೆಗೆ ತಡೆ : ಜುಲೈ 01 : ಲೋಕಾಯುಕ್ತದಲ್ಲಿನ ಹಣದ ಬೇಡಿಕೆ ಪ್ರಕರಣದ ಕುರಿತು ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ನಡೆಸುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತು. ತನಿಖೆಗೆ ತಡೆ ನೀಡುವಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಕೋರ್ಟ್ ಮೆಟ್ಟಿಲೇರಿದ್ದರು.

ಬಿಬಿಎಂಪಿ ಚುನಾವಣೆ ಮುಂದೂಡಿಕೆ : ಜುಲೈ 03 : ಸುಪ್ರೀಂಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು 8 ವಾರಗಳ ಕಾಲಮುಂದೂಡಿತು. 2015ರ ಅಕ್ಟೋಬರ್ 5ರೊಳಗೆ ಚುನಾವಣೆಯನ್ನು ನಡೆಸುವಂತೆ ಕೋರ್ಟ್ ಸೂಚನೆ ನೀಡಿತು. ವಾರ್ಡ್ ಮತ್ತು ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಸೂಚನೆ ನೀಡಿತು. [ವರ್ಷಾಂತ್ಯ ವಿಶೇಷ : 2015ರ ಏಪ್ರಿಲ್ ಹಿನ್ನೋಟ]

july 2015

ವೈದ್ಯರಿಗೆ ವೇತನ ಹೆಚ್ಚಳ : ಜುಲೈ 07 : ಸರ್ಕಾರಿ ಆಸ್ಪತ್ರೆಗಳ ವೈದ್ಯರ ವೇತನವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಆದರೆ, ಆಯುರ್ವೇದ ವೈದ್ಯರ ವೇತನವನ್ನು ಹೆಚ್ಚಳ ಮಾಡಿಲ್ಲ. ಬೆಳಗಾವಿಯಲ್ಲಿನ ಮುಂಗಾರು ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ವೈದ್ಯರ ಸೇವೆ ಹೆಚ್ಚಳ ಮಾಡಿರುವ ಕುರಿತು ಮಾಹಿತಿ ನೀಡಿದರು.

ಮುನಿಸಿಕೊಂಡು ಬಂದ ರೆಬಲ್ ಸ್ಟಾರ್ : ಜುಲೈ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಿರುವ ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಬೆಳಗಾವಿಯಲ್ಲಿನ ಅಧಿವೇಶನ ಮುಗಿಯುವ ಮೊದಲೇ ಬೆಂಗಳೂರಿನಗೆ ವಾಪಸ್ ಆಗಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ರಾಜಕೀಯ, ಪ್ರಮುಖ ನೇಮಕದ ವಿಚಾರಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅಂಬರೀಶ್ ಮುನಿಸಿಕೊಂಡಿದ್ದಾರೆ.

ambareesh

ಬಿಬಿಎಂಪಿಯನ್ನು 5 ಭಾಗವಾಗಿ ಮಾಡಿ : ಜುಲೈ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜನೆ ಮಾಡಬೇಕು ಎಂದು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿತು. ಬಿಬಿಎಂಪಿ ವಿಭಜನೆ ಕುರಿತು ವರದಿ ನೀಡಲು ಸರ್ಕಾರ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿಯನ್ನು ರಚನೆ ಮಾಡಿತ್ತು. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]

ಲೋಕಾ ಹಗರಣದಲ್ಲಿ ಮೊದಲ ಬಂಧನ : ಜುಲೈ 22 : ಲೋಕಾಯುಕ್ತದಲ್ಲಿ ನಡೆದ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಶೋಕ್ ಕುಮಾರ್ ಎಂಬುವವರನ್ನು ಬಂಧಿಸಿತು. ಅಶೋಕ್ ಕುಮಾರ್ ಅವರು ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರ ಆಪ್ತ ಸ್ನೇಹಿತರು. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಲೋಕಾ ಹಗರಣ ಇಬ್ಬರ ಬಂಧನ : ಜುಲೈ 23 : ಲೋಕಾಯುಕ್ತದಲ್ಲಿನ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇಬ್ಬರನ್ನು ಬಂಧಿಸಿತು. ಶ್ರೀನಿವಾಸಗೌಡ ಮತ್ತು ಶಂಕರಗೌಡ ಅವರನ್ನು ಬಂಧಿಸಿದ ಎಸ್‌ಐಟಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಿತು. ಶ್ರೀನಿವಾಸ ಗೌಡ ಅವರು ಪತ್ರಕರ್ತರಾಗಿದ್ದು ಕೆಲವು ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ದೃಶ್ಯ ಮಾಧ್ಯಮದ ಸಂಸ್ಥೆಗೆ ರಾಜೀನಾಮೆ ನೀಡಿದ್ದರು.

ಲೋಕಾಯುಕ್ತ ಜಂಟಿ ಆಯುಕ್ತ ಬಂಧನ : ಜುಲೈ 25 : ಲೋಕಾಯುಕ್ತದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್ ಅವರನ್ನು ಬಂಧಿಸಿತು. ಲೋಕಾಯುಕ್ತದ ಹಗರಣ ಬೆಳಕಿಗೆ ಬಂದ ನಂತರ ಸಯ್ಯದ್ ರಿಯಾಜ್ ಅವರು ಸುದೀರ್ಘ ರಜೆಯ ಮೇಲೆ ತೆರಳಿದ್ದರು.

aswin rao

ಅಶ್ವಿನ್ ರಾವ್ ಬಂಧನ : ಜುಲೈ 27 : ಲೋಕಾಯುಕ್ತ ಹಗರಣದ ತನಿಖೆಯ ಮಹತ್ವದ ಘಟ್ಟವೆಂಬಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಎಸ್ಐಟಿ ಬಂಧಿಸಿತು. ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಾಬೂರಾಮ್ ಅವರ ನೇತೃತ್ವದ ಎಸ್‌ಐಟಿ ತಂಡ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಅಶ್ವಿನ್ ರಾವ್ ಅವರ ನಿವಾಸದಲ್ಲಿ ಅವರನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿತು.[ಅಶ್ವಿನ್ ರಾವ್ ಬಂಧನ, ಮುಂದೇನು?]

ಮಂಡ್ಯದಲ್ಲಿ ಪ್ರತ್ಯಕ್ಷವಾದ ರಮ್ಯಾ : ಜುಲೈ 28 : ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು, ಜಿಲ್ಲೆಗೆ ದಿಢೀರ್ ಭೇಟಿ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಜಿಲ್ಲಾ ಕಾಂಗ್ರೆಸ್ ಮುಖಂಡರಿಗೂ ಮಾಹಿತಿ ನೀಡದೆ ಗಾಣದಹೊಸೂರು, ಹೊನ್ನನಾಯಕನಹಳ್ಳಿ ಮುಂತಾದ ಹಳ್ಳಿಗಳಿಗೆ ಭೇಟಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+