ವರ್ಷಾಂತ್ಯ ವಿಶೇಷ : ಫೆಬ್ರವರಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ

Posted By:
Subscribe to Oneindia Kannada

ರಾಜ್ಯಪಾಲರಿಂದ ಹಿಂದಿ ಭಾಷಣ : ಫೆಬ್ರವರಿ 02 : ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದರು. ಕನ್ನಡ ಸಂಘಟನೆಗಳ ವಿರೋಧದ ನಡುವೆಯೇ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು.

ಸಾಹಿತ್ಯ ಜಾತ್ರೆಗೆ ತೆರೆ : ಫೆಬ್ರವರಿ 3 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿದ್ದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು. 82ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಯಚೂರು ನಗರದಲ್ಲಿ ನಡೆಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರವೀಣ್‌ ತೊಗಾಡಿಯಾಗೆ ನಿಷೇಧ : ಫೆಬ್ರವರಿ 03 : ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆಬ್ರವರಿ 8ರಂದು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿತ್ತು. ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರಿಗೆ ಬೆಂಗಳೂರು ಪೊಲೀಸರು ನಿಷೇಧ ಹೇರಿದರು. ಪ್ರಚೋದನಾಕಾರಿ ಭಾಷಣ ಮಾಡಬಹುದು ಎಂಬ ಮಾಹಿತಿ ಹಿನ್ನಲೆಯಲ್ಲಿ ಬೆಂಗಳೂರು ನಗರ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿತ್ತು.

february

ರಾಘವೇಶ್ವರ ಶ್ರೀಗಳ ಅರ್ಜಿ ವಜಾ : ಫೆಬ್ರವರಿ 09 : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡು­ವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು. ನ್ಯಾಯಮೂರ್ತಿ ಆನಂದ ಭೈರಾರೆಡ್ಡಿ ಮತ್ತು ಎನ್‌. ಆನಂದ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಕುರಿತ ತೀರ್ಪನ್ನು ನೀಡಿತು.

raghaveshwara bharathi

ಯದುವಂಶದ ಉತ್ತರಾಧಿಕಾರಿ ಘೋಷಣೆ : ಫೆಬ್ರವರಿ 12 : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಉತ್ತರ ದೊರಕಿತು. ಯದುವೀರ ಗೋಪಾಲರಾಜೇ ಅರಸ್ ಅವರನ್ನು ಉತ್ತರಾಧಿಕಾರಿ ಎಂದು ರಾಣಿ ಪ್ರಮೋದಾ ದೇವಿ ಅವರು ಘೋಷಣೆ ಮಾಡಿದರು. ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಮೊಮ್ಮಗ ಯದುವೀರ ಅರಸ್ ಅವರನ್ನು ಉತ್ತರಾಧಿಕಾರಿಯಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಣಿ ಹೇಳಿದರು. [ಯದುವೀರ್ ಯದುವಂಶದ ಉತ್ತರಾಧಿಕಾರಿ]

ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ : ಫೆಬ್ರವರಿ 18 : ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದರು. ಯಲಹಂಕ ವಾಯುನೆಲೆಯಲ್ಲಿ 'ಏರೋ ಇಂಡಿಯಾ' ಪ್ರದರ್ಶನ ಉದ್ಘಾಟಿಸಿದ ಮೋದಿ, ನಿಮ್ಹಾನ್ಸ್‌, ಜಿಕೆವಿಕೆ ಹಾಗೂ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಜೆ ದೆಹಲಿಗೆ ವಾಪಸ್ ತೆರಳಿದರು.

ಶಿವಮೊಗ್ಗದಲ್ಲಿ ಕೋಮು ಗಲಭೆ : ಫೆಬ್ರವರಿ 20 : ಶಿವಮೊಗ್ಗ ನಗರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದು, ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪು ಘರ್ಷಣೆ ಆರಂಭವಾಯಿತು. ಕಿಡಿಗೇಡಿಗಳು ನಗರದ ಹಲವೆಡೆ ಬೈಕ್‌ಗಳಿಗೆ ಬೆಂಕಿ ಹಚ್ಚಿದರು.

ಮೈಸೂರಿನಲ್ಲಿ ದತ್ತು ಸ್ವೀಕಾರ ಸಮಾರಂಭ : ಫೆಬ್ರವರಿ 23 : ಯದುವೀರ ಗೋಪಾಲರಾಜ ಅರಸ್ ದತ್ತು ಸ್ವೀಕಾರದ ವಿಧಿ ವಿಧಾನಗಳು ಮೈಸೂರು ಅರಮನೆಯಲ್ಲಿ ಮುಕ್ತಾಯಗೊಂಡವು. ಫೆ.23ರ ಮಧ್ಯಾಹ್ನ 1.20ರಿಂದ 1.50ರ ಮಿಥುನ ಲಗ್ನದಲ್ಲಿ ದತ್ತು ಸ್ವೀಕಾರ ಸಮಾರಂಭ ನಡೆಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಮೊಮ್ಮಗ ಯದುವೀರ ಅರಸ್ ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಲಿದ್ದು, ಅವರನ್ನು ರಾಣಿ ಪ್ರಮೋದಾ ದೇವಿ ಅವರು ದತ್ತು ಸ್ವೀಕರಿಸಿದರು. [ದತ್ತು ಸ್ವೀಕಾರ ಹೇಗೆ ನಡೆಯಿತು]

yaduveer urs

ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ : ಫೆಬ್ರಬರಿ 26 : ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿ ಸತೀಶ್‌ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡಲಾಯಿತು. ಜಾರಕಿಹೊಳಿ ಅವರ ನಿರೀಕ್ಷೆಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡಿ, ಜಾರಕಿಹೊಳಿ ಅವರ ಬಳಿ ಇದ್ದ ಅಬಕಾರಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡರು. [ಜಾರಕಿಹೊಳಿ ಖಾತೆ ಬದಲಾಯಿಸಿದ ಸಿಎಂ]

ಜೆಡಿಎಸ್ ಕಚೇರಿಗೆ ಜಾಗ ಕೊಟ್ಟ ಬಿಬಿಎಂಪಿ : ಫೆಬ್ರವರಿ 27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೆಡಿಎಸ್ ಕಚೇರಿಗಾಗಿ ಜಾಗ ನೀಡಲು ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಿತು. ಶೇಷಾದ್ರಿಪುರಂನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಮುಂಭಾಗದಲ್ಲಿರುವ ಕೃಷ್ಣಾ ಪ್ಲೋರ್ ಮಿಲ್‌ನ 2 ಎಕರೆ ಜಾಗವನ್ನು ಕಚೇರಿ ನಿರ್ಮಾಣಕ್ಕಾಗಿ ಪಕ್ಷಕ್ಕೆ ನೀಡಲು ಒಪ್ಪಿಗೆ ಸಿಕ್ಕಿತು.

jds

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Year end special : What happened in Karnataka January 2015. Here is a list of notable events.
Please Wait while comments are loading...