Year End 2024: ಕಾಂಗ್ರೆಸ್ ಬಲ ಹೆಚ್ಚಿಸಿದ 4 ಕ್ಷೇತ್ರಗಳ ಉಪ ಚುನಾವಣೆ
ಬೆಂಗಳೂರು, ಡಿಸೆಂಬರ್ 05: ನೋಡು ನೋಡುತ್ತಲೇ ನಾವೆಲ್ಲ ಈ 2024 ವರ್ಷವನ್ನು ಪೂರೈಸಿದ್ದೇವೆ. ಕೆಲವೇ ದಿನಗಳಲ್ಲಿ 2025 ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಲಿದೆ. ವರ್ಷಾಂತ್ಯಕ್ಕೆ ಬೆಳಗಾವಿಯಲ್ಲಿ ಚಲಿಗಾಲ ಅಧಿವೇಶನ ನಡೆಯಲಿದೆ. ಈ ವರ್ಷ ರಾಜಕೀಯವಾಗಿ ಅದರಲ್ಲೂ ಉಪ ಚುನಾವಣೆ ಮಟ್ಟಿಗೆ ಏನೆಲ್ಲ ಬೆಳವಣಿಗೆ ನಡೆದವು. 2024ರ ಉಪ ಚುನಾವಣೆ ಗೆಲುವು ಸೋಲಿನ ಲೆಕ್ಕಾಚಾರ, ಕಾಂಗ್ರೆಸ್‌ಗೆ ವರದಾನವಾದ ಈ ವರ್ಷದ ಉಪಚುನಾವಣೆಯ ಒಂದು ಹಿನ್ನೋಟ ಇಲ್ಲಿದೆ.
ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮಟ್ಟಿಗೆ ಈ ವರ್ಷ 2024ರಲ್ಲಿ ಎದುರಾದ ನಾಲ್ಕು ಉಪಚುನಾವಣೆಗಳು ಬಲ ತಂದುಕೊಟ್ಟಿವೆ. ವಿಪಕ್ಷಗಳಿಗೆ ಈ ವರ್ಷ ಕಹಿ ಅನುಭವ ನೀಡಿದೆ. ಹಲವು ಆರೋಪಗಳಿಗೆ ತುತ್ತಾದ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ವಿಪಕ್ಷಗಳು ಅಬ್ಬರಿಸಿದ್ದವು. ಹೀಗಿದ್ದರೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.

ಇದೇ ವರ್ಷ ಮೇ ತಿಂಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ನವೆಂಬರ್ ತಿಂಗಳಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಾಲ್ಕು ಉಪ ಚುನಾವಣೆಗಳು ನಡೆದವು.
ಸುರಪುರ ಕ್ಷೇತ್ರ: ವರ್ಷದ ಮೊದಲ ಉಪ ಚುನಾವಣೆ
ಸುರಪುರ ಉಪ ಚುನಾವಣೆ ಈ ವರ್ಷದ ಮೊದಲ ಉಪ ಚುನಾವಣೆ ಆಗಿದೆ. 2024 ಫೆಬ್ರವರಿಯಲ್ಲಿ ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಯಿತು. ಮೇ ತಿಂಗಳಲ್ಲಿ ಸುರಪುರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ್ ನಾಯಕ್ ಅವರು ಬಿಜೆಪಿಯ ರಾಜುಗೌಡ ವಿರುದ್ಧ ಭರ್ಜರಿ 1,13,559 ಮತ ಪಡೆದರು. ಸುಮಾರು 25 ಸಾವಿರ ಮತಗಳ ಅಂತದಲ್ಲಿ ಇಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು.
ನವೆಂಬರ್‌ನಲ್ಲಿ ಉಪ ಚುನಾವಣೆ
ನವೆಂಬರ್‌ನಲ್ಲಿ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಯಿತು. ಇಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳಾದ ಸಿಪಿ ಯೋಗೇಶ್ವರ (ಚನ್ನಪಟ್ಟಣ), ಯಾಸಿರ್ ಖಾನ್ ಪಠಾಣ್ (ಹಾವೇರಿ) ಮತ್ತು ಅನ್ನಪೂರ್ಣ (ಸಂಡೂರು) ಅವರು ಬಿಜೆಪಿ ನಾಯಕರ ವಿರುದ್ಧ ಬಹುಮತ ಪಡೆ ವಿಜಯ ಪತಾಕೆ ಹಾರಿಸಿದರು.
ಈ ಉಪ ಚುನಾವಣೆಗಳಲ್ಲಿ ಸದರಿ ವರ್ಷ ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯವಿರುದ್ಧ ಕ್ಷೇತ್ರಗಳು ಕೈತಪ್ಪಿದವು. ಇತ್ತ ಭ್ರಷ್ಟಾಚಾರ, ಅಕ್ರಮ, ಅಧಿಕಾರಿಗಳ ಸಾವು, ಹಗರಣಗಳ ಆರೋಪ ಹೊತ್ತಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಉಪ ಚುನಾವಣೆಯ ಬಲ ತಂದುಕೊಟ್ಟಿದೆ.
ಸ್ವತಃ ಮುಡಾ ಕೇಸಿನಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಪಕ್ಕಾ ಎನ್ನುವಂತಿದ್ದ ರಾಜಕೀಯ ಸ್ಥಿತಿ ಬದಲಾಗಿತು. ಕಳೆದ 2023ರಲ್ಲಿ ಪ್ರಚಂಡ ಬಹುಮತ ಪಡೆದು ಬೃಹತ್ ಪಕ್ಷವಾಗಿದ್ದ ಕಾಂಗ್ರೆಸ್ ಲಕ್ ಈ ವರ್ಷವು ಮುಂದುವರಿದಿದೆ. ಮುಂದಿನ ವರ್ಷ ಕೆಲವೇ ದಿನಗಳಲ್ಲಿ ಬರಲಿದೆ.
2025ರಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳು ಎದುರಾಗಲಿವೆ. ಹೊಸ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಕಮಾಲ್ ಮಾಡಲಿದೆಯೇ ಎಂದು ಕಾದು ನೋಡಬೇಕು.
ಲೋಕಸಭೆ ಚುನಾವಣೆಯಲ್ಲೂ ಕ್ಷೇತ್ರ ವಿಸ್ತರಣೆ
ಇದಷ್ಟೇ ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸಹ ಎರಡಂಕಿ ಗಡಿ ತಲುಪಿದ ಕಾಂಗ್ರೆಸ್ ಒಟ್ಟು 28 ಲೋಕಸಭಾ ಚುನಾವಣೆ ಕ್ಷೇತ್ರಗಳಲ್ಲಿ 09 ಸೀಟು ಗೆದ್ದುಕೊಂಡಿತು. 17 ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ, ಎರಡು ಸ್ಥಾನಗಳಿಗೆ ಜೆಡಿಎಸ್ ತೃಪ್ತಿಪಟ್ಟುಕೊಂಡಿತು. ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಈ ವರ್ಷ ಲಕ್ಕಿ ವರ್ಷ ಎನ್ನಬಹುದು. ಎದುರಾದ ಚುನಾವಣೆಗಳಲ್ಲಿ ಭರ್ಜರಿ ಜಯ, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ. ಇತ್ತ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ, ಕುಟುಂಬ ರಾಜಕೀಯಕ್ಕೆ ಇದೇ ವರ್ಷವೇ ಜನರು ಬುದ್ಧಿ ಕಲಿಸಿದ ಘಟನೆಗಳು ನಡೆದವು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications