ಬ್ರಹ್ಮನ ಮುಂದೆ ಮನ್ಮಥನ ಕಾಮಕೇಳಿ ಏನೂ ಇಲ್ಲ: ಯೋಗೇಶ್ ಮಾಸ್ಟರ್

Posted By:
Subscribe to Oneindia Kannada

ಹಿಂದೂ ಧಾರ್ಮಿಕ ಭಾವನೆಯನ್ನು ಕೆರಳಿಸುವಲ್ಲಿ ಅದೇನೋ ಆನಂದ ಅನುಭವಿಸುವ ಲೇಖಕ ಯೋಗೇಶ್ ಮಾಸ್ಟರ್, ಮತ್ತೊಂದು ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಹಿಂದೂಗಳು ದೇವರೆಂದೇ ಪೂಜಿಸುವ ಶ್ರೀಕೃಷ್ಣ ದೇವರಲ್ಲ, ಅವನೊಬ್ಬ ಅಸುರ. ಸೃಷ್ಟಿಕರ್ತ ಬ್ರಹ್ಮ ಮಹಾನ್ ಅತ್ಯಾಚಾರಿಯಾಗಿದ್ದ ಎಂದು ಇತ್ತೀಚೆಗೆ ಬಿಡುಗಡೆಯಾದ ತನ್ನ 'ಪುರಾಣದ ರೂಪಕಗಳು' ಪುಸ್ತಕದಲ್ಲಿ ಬರೆದಿದ್ದಾರೆ. (ಚಾಮುಂಡೇಶ್ವರಿ ಅಭಿಸಾರಿಕೆ: ಯೋಗೇಶ್)

ಹಿಂದೂ ದೇವಾನುದೇವತೆಗಳ ಜೊತೆ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನೂ ಬಿಡದ ಯೋಗೇಶ್ ಮಾಸ್ಟರ್, ಗಾಂಧೀಜಿ ವೈಷ್ಣವ ಧರ್ಮದ ಪ್ರಚಾರಕ ಎಂದು ಕೃತಿಯಲ್ಲಿ ಜರಿದಿದ್ದಾರೆ.

ಪ್ರಭು ಶ್ರೀರಾಮಚಂದ್ರ ಮರ್ಯಾದ ಪುರೋಷತ್ತಮನಾಗಿರಲಿಲ್ಲ, ರಾಮರಾಜ್ಯ ಕೂಡಾ ಇರಲಿಲ್ಲ. ಶ್ರೀರಾಮನೊಬ್ಬ ಕುಡಿದ ದಾಸ್ಯಕ್ಕೆ ಒಳಗಾದ ಮಹಾನ್ ಕ್ರೂರಿಯೆಂದು ಯೋಗೇಶ್ ಮಾಸ್ಟರ್ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. (ಹಿಂದೂ ದೇವತೆಗಳ ಅವಹೇಳನ ಮಾಡದಿದ್ರೆ ತಿಂದಿದ್ದು ಕರಗಲ್ವಾ)

ಶನಿವಾರ (ಜ 23) ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಯೋಗೇಶ್ ಮಾಸ್ಟರ್ ಅವರ 'ಹರೆಯದ ಹರವು' ಸೇರಿದಂತೆ ಎಂಟು ಕೃತಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಬಿಡುಗಡೆಗೊಳಿಸಿದರು. (ಢುಂಢಿ ಲೇಖಕ ಯೋಗೇಶ್ ಮಾಸ್ಟರ್ ಯಾರು)

ಅದರಲ್ಲಿ ಪುರಾಣದ ರೂಪಕಗಳು ಕೃತಿಯೂ ಒಂದು. ಈ ಪುಸ್ತಕದಲ್ಲಿ ಯೋಗೇಶ್, ಹಿಂದೂ ದೇವಾನುದೇವತೆಗಳ ಬಗ್ಗೆ ಮನಬಂದಂತೆ ಟೀಕಿಸಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ ಅವರು ಪುರೋಹಿತಶಾಹಿಯ ವಿಚಾರದಲ್ಲಿ ಹೇಳಿದ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಅವರನ್ನು ಹಿಂದೂ ಧರ್ಮ ಪ್ರಚಾರಕರೆಂದೇ ಬಿಂಬಿಸಲಾಗುತ್ತಿದೆ. ವಿವೇಕಾನಂದರು ಆಡಿದ ಮಾತು ಬೇರೆಯವರ ಬಾಯಿಯಿಂದ ಬಂದಿದ್ದರೆ ಅದು ದೊಡ್ಡ ಕಲಹಕ್ಕೆ ನಾಂದಿಯಾಗುತ್ತಿತ್ತು - ದಿನೇಶ್ ಅಮೀನ್ ಮಟ್ಟು

ಶ್ರೀಕೃಷ್ಣ

ಶ್ರೀಕೃಷ್ಣ

ಶ್ರೀಕೃಷ್ಣನ ಮಾವ ಕಂಸ, ಕಂಸ ಒಬ್ಬ ಅಸುರ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಕಂಸ ಮಾವ ಆದ ಮೇಲೆ ಅವನ ರಕ್ತ ಶ್ರೀಕೃಷ್ಣನಿಗೆ ಬರಲೇ ಬೇಕಲ್ಲವೇ? ಆದುದರಿಂದ ಕೃಷ್ಣ ದೇವರು ಆಗಲು ಹೇಗೆ ಸಾಧ್ಯ, ಹಾಗಾಗಿ ಅವನೂ ಕೂಡಾ ಅಸುರ ಸಂತಾನದವನು ಎಂದು ಯೋಗೇಶ್ ಮಾಸ್ಟರ್ ತನ್ನ ಕೃತಿಯಲ್ಲಿ ಬರೆದಿದ್ದಾರೆ.

ಶ್ರೀರಾಮಚಂದ್ರ ಮಹಾನ್ ಕುಡುಕ

ಶ್ರೀರಾಮಚಂದ್ರ ಮಹಾನ್ ಕುಡುಕ

ಪ್ರಭು ಶ್ರೀರಾಮಚಂದ್ರ ಕುಡಿತದ ದಾಸ್ಯಕ್ಕೆ ಒಳಗಾಗಿದ್ದ, ಜೊತೆಗೆ ಮಹಾನ್ ಕ್ರೂರಿಯಾಗಿದ್ದ. ಈತನ ಕಾಟ ತಾಳಲಾರದೇ ಸೀತಾದೇವಿ ಮತ್ತು ಸಹೋದರ ಲಕ್ಷಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದು ತ್ರೇತಾಯುಗದ ಘಟನೆಗಳಿಗೆ 'ಐ ವಿಟ್ನೆಸ್' ಆಗಿದ್ದ ರೀತಿಯಲ್ಲಿ ಯೋಗೇಶ್ ಮಾಸ್ಟರ್ ಪುಸ್ತಕದಲ್ಲಿ ಬರೆದಿದ್ದಾರೆ.

ಬ್ರಹ್ಮನ ಮುಂದೆ ಮನ್ಮಥ ಏನೂ ಅಲ್ಲ

ಬ್ರಹ್ಮನ ಮುಂದೆ ಮನ್ಮಥ ಏನೂ ಅಲ್ಲ

ವಿದ್ಯಾದೇವತೆ ಸರಸ್ವತಿಯನ್ನೂ ಬ್ರಹ್ಮ ಬಿಡಲಿಲ್ಲ. ಶಿವನ ಮದುವೆಗೆ ಹಾಜರಾಗಿದ್ದಾಗ ಪಾರ್ವತಿಯ`ಮೇಲೂ ಮೋಹಗೊಂಡಿದ್ದ. ಬ್ರಹ್ಮನ ಮುಂದೆ ಮನ್ಮಥನ ಕಾಮಕೇಳಿ ಏನೂ ಇಲ್ಲ - ಯೋಗೇಶ್ ಮಾಸ್ಟರ್.

ಟಿಪ್ಪು ಮಹಾನ್

ಟಿಪ್ಪು ಮಹಾನ್

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ಪರಾಕ್ರಮಿ, ಕರ್ನಾಟಕದ ಅನರ್ಘ್ಯ ರತ್ನ, ಅತ್ಯುತ್ತಮವಾದ ಸೇನೆಯನ್ನು ಹೊಂದಿದ್ದ ಟಿಪ್ಪುಸುಲ್ತಾನ್ ಒಬ್ಬ ವೀರ ಸೇನಾನಿ - ಯೋಗೇಶ್ ಮಾಸ್ಟರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada writer Yogish Master's who is consistently controversial while he cajoles Hindu Gods has done it again. Sri Ramachandra, SriKrishna and M K Gandhi and more ! ridiculed in his latest works released recently.
Please Wait while comments are loading...