'ವಿಶ್ವ ಆಹಾರ ದಿನ': ಹಸಿವು ಮುಕ್ತ ಸಮಾಜಕ್ಕೆ ಕೇಂದ್ರ ಬೆಂಬಲಿಸಲಿಲ್ಲ: 'ಅನ್ನಭಾಗ್ಯ' ಯೋಜನೆ ಸ್ಮರಿಸಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 16: ಇಂದು ಸೋಮವಾರ ಅಕ್ಟೋಬರ್ 16 'ವಿಶ್ವ ಆಹಾರ ದಿನ'. ಇದರ ಅಂಗವಾಗಿ ಹಸಿವುಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಬದ್ಧತೆ ಹೊಂದಿದೆ. ಅದಕ್ಕೆ ಅನ್ನಭಾಗ್ಯ ಯೋಜನೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ವಿಶ್ವ ಆಹಾರ ದಿನ ಪ್ರಯುಕ್ತ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಹಸಿವಿನ ಸಂಕಷ್ಟ, ಆಹಾರ ಹಕ್ಕು, ಬಡತನ-ಹಸಿವುಗಳನ್ನು ನೆನಪಿಸಿಕೊಂಡಿರುವ ಅವರು ರಾಜ್ಯಕ್ಕೆ ಈ ವಿಚಾರದಲ್ಲಿ ತಾವು ನೀಡಿರುವ ಕೊಡೆಗಳಲ ಮಹತ್ವವನ್ನು ರಾಜ್ಯದ ಜನತೆ ಜೊತೆಗೆ ಹಂಚಿಕೊಂಡಿದ್ದಾರೆ.

ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನ ತಲುಪಿರುವ ಈ ಸಂಕಷ್ಟದ ಹೊತ್ತಲ್ಲಿ, ನಾಡಿನ ಜನರ ಆಹಾರದ ಹಕ್ಕಿನ ಬಗ್ಗೆ ಗಂಭೀರವಾಗಿ ಯೋಚಿಸುವುದು ಅಗತ್ಯವಾಗಿದೆ. ಬಡತನವನ್ನು ಮುಚ್ಚಿಡುವ ಪ್ರಯತ್ನಗಳಿಗಿಂತ ಬಡತನ, ಹಸಿವುಗಳನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಸರ್ಕಾರಗಳು ಕಾರ್ಯ ಪ್ರವೃತ್ತವಾಗಬೇಕಿದೆ.
ಇಂದು ವಿಶ್ವ ಆಹಾರ ದಿನ. ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನ ತಲುಪಿರುವ ಈ ಸಂಕಷ್ಟದ ಹೊತ್ತಲ್ಲಿ, ನಾಡಿನ ಜನರ ಆಹಾರದ ಹಕ್ಕಿನ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಬಡತನವನ್ನು ಮುಚ್ಚಿಡುವ ಪ್ರಯತ್ನಗಳಿಗಿಂತ ಬಡತನ, ಹಸಿವುಗಳನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಸರ್ಕಾರಗಳು ಕಾರ್ಯಪ್ರವೃತ್ತವಾಗಬೇಕಿದೆ. ಬಡಜನರ ಹಸಿವನ್ನು… pic.twitter.com/FJWYKMNP2k
— CM of Karnataka (@CMofKarnataka) October 16, 2023
ಹಸಿವು ನಿವಾರಣೆಗೆ ಅನ್ನಭಾಗ್ಯ ಯೋಜನೆ: ಹೆಮ್ಮೆ
ಬಡ ಜನರ ಹಸಿವನ್ನು ಅರ್ಥೈಸಿಕೊಂಡು, ಅದನ್ನು ನಿವಾರಿಸಲು ಯೋಜನೆಯೊಂದನ್ನು ಜಾರಿಗೆ ಕೊಟ್ಟು ದೇಶಕ್ಕೆ ಮಾದರಿಯಾದದ್ದು ನಮ್ಮ ಸರ್ಕಾರ ಎಂಬ ಹೆಮ್ಮೆಯಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಬದ್ಧತೆ. ಇದಕ್ಕೆ ಅನ್ನಭಾಗ್ಯ ಯೋಜನೆ ಸಾಕ್ಷಿ ಎಂದು ಈ ಮೂಲಕ ಅವರು ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 'ಅನ್ನಭಾಗ್ಯ' ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ನಾಡಿನ ಜನತೆಗೆ ಆಹಾರ ಭದ್ರತೆ ಒದಗಿಸುವ ಸದಾಶಯದೊಂದಿಗೆ ಹತ್ತು ವರ್ಷಗಳ ಹಿಂದೆ 2013 ಜುಲೈ 1ರಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಬಿಪಿಎಲ್ ಕಾರ್ಡುದಾರ ಕುಟುಂಬದ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ನೀಡಲು ಆರಂಭಿಸಿದೆವು. ಯೋಜನೆಗೆ ವ್ಯಕ್ತವಾದ ಅಭೂತಪೂರ್ವ ಸ್ಪಂದನೆ ಕಂಡು ಕೆಲವು ಸಮಯದ ನಂತರ ಇದನ್ನು 7 ಕೆ.ಜಿ ಗೆ ಹೆಚ್ಚಿಸಲಾಯಿತು ಎಂದು ತಿಳಿಸಿದರು.

ಮುಂಗಾರು ಮಳೆ ಆಧರಿಸಿಯೇ ವ್ಯವಸಾಯ
ರಾಜಸ್ಥಾನದ ನಂತರ ಅತೀ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ ಮುಂಗಾರು ಮಳೆಯನ್ನು ಆಧರಿಯೇ ಕೃಷಿ ಮಾಡಲಾಗುತ್ತದೆ. ಮುಂಗಾರು ಮಳೆ ಕೊರತೆ ಕಂಡುಬಂದ ಸಂದರ್ಭದಲ್ಲಿ ಸಹಜವಾಗಿಯೇ ಕೃಷಿ ಸಂಬಂಧಿತ ಉದ್ಯೋಗಗಳು ನಷ್ಟದ ಹಾದಿಗೆ ಜಾರುತ್ತವೆ.
ಆಗ ಗ್ರಾಮೀಣ ಕರ್ನಾಟಕದ ಜನರು ಬೇರೆ ರಾಜ್ಯಗಳಿಗೆ ಗುಳೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನು ತಪ್ಪಿಸಲು ಒಂದು ಶಾಶ್ವತ ಪರಿಹಾರದ ಅಗತ್ಯವನ್ನು ಮನಗಂಡು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಉಚಿತ ಆಹಾರ ಧಾನ್ಯ ನೀಡುವ ವಾಗ್ದಾನ ನೀಡಿದ್ದೆವು.
ಹಸಿವು ಮುಕ್ತ ಸಮಾಜಕ್ಕೆ ಕೇಂದ್ರ ಬೆಂಬಲಿಸಲಿಲ್ಲ
ಅಧಿಕಾರಕ್ಕೆ ಬಂದ ನಂತರ ಅದರ ಈಡೇರಿಕೆಗೆ ಆದೇಶವನ್ನೂ ಹೊರಡಿಸಲಾಯಿತು. ಆದರೆ ಆಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುವ ಮೂಲಕ ಬಡತನವನ್ನು ಹಂಗಿಸುವ ಕೆಲಸ ಮಾಡಿತೇ ಹೊರತು, ಹಸಿವು ಮುಕ್ತ ಸಮಾಜ ಕಟ್ಟುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಲಿಲ್ಲ.
ಕೇಂದ್ರ ಸರ್ಕಾರ ಹೆಚ್ಚುವರಿಗೆ ಅಕ್ಕಿ ನೀಡಲು ನಿರಾಕರಿಸಿದರೂ ವಚನ ಪಾಲನೆಯ ಬದ್ಧತೆಯೊಂದಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲು ನಾವು ನಡೆಸಿದ ನಿರಂತರ ಪ್ರಯತ್ನ ಭಾಗಶಃ ಫಲ ನೀಡಿದೆ. ಬರ ಪೀಡಿತ ತಾಲೂಕುಗಳಿಗೆ 10 ಕೆಜಿ ಆಹಾರ ಧಾನ್ಯ ವಿತರಿಸಲು ಕ್ರಮ ವಹಿಸಲಾಗಿದ್ದು, ಇಂದು ನಮ್ಮ ಈ ಯೋಜನೆ 5.71 ಕೋಟಿ ಬಡಜನರ ಹಸಿವು ನೀಗಿಸುತ್ತಾ, ವಿಶ್ವ ಆಹಾರ ದಿನದ ಆಚರಣೆಯನ್ನು ಅರ್ಥಪೂರ್ಣವಾಗಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.












Click it and Unblock the Notifications