Get Updates
Get notified of breaking news, exclusive insights, and must-see stories!

Prajwal Revanna Case: ತಾಯಿ ಮೇಲೆ ಅತ್ಯಾಚಾರ ಎಸಗಿ, ನನ್ನ ಬಟ್ಟೆ ಬಿಚ್ಚಿಸುತ್ತಿದ್ದರು.. ಭಯಾನಕ ಸತ್ಯಗಳನ್ನು ಬಿಚ್ಚಿಟ್ಟ ಮಹಿಳೆ

ಹಾಸನ, ಮೇ. 13 : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ದಿನ ದಿನಕ್ಕೂ ಹೊಸ ಟ್ವಿಸ್ಟ್ ಪಡೆಯುತ್ತಲೇ ಇದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜ್ಯನಕ್ಕೆ ಒಳಗಾದ ಸಂತ್ರಸ್ತರು ಬಂದು ಎಸ್‌ಐಟಿ ಮುಂದೆ ತಮ್ಮ ಯಾತನೆ ಹೇಳುವುದು, ಹಲವು ಬಂಧನಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಮಹಿಳೆಯೊಬ್ಬರು ನನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿ, ತನ್ನ ಮೇಲೆ ಲೈಂಗಿಕ ದೌರ್ಜ್ಯನ ಎಸಗಿದ ಭಯಾನಕ ಘಟನೆಗಳನ್ನು ವಿವರಿಸಿದ್ದಾರೆ.

ಪಕ್ಷದಿಂದ ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಎಚ್‌ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಪ್ರಜ್ವಲ್ ರೇವಣ್ಣ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳ ಪ್ರಕಾರ, ಅವರು ಘಟನೆಗಳನ್ನು ವಿವರಿಸುವ ವಿವರವಾದ ಸಾಕ್ಷ್ಯವನ್ನು ನೀಡಿದ್ದಾರೆ.

Woman recounts Sexual Assault Harassment by Prajwal Revanna and HD Revanna

ತಂದೆ- ಮಗನಿಂದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ

2020 ಮತ್ತು 2021 ರ ನಡುವೆ, ಪ್ರಜ್ವಲ್ ರೇವಣ್ಣ ಅವರು ವೀಡಿಯೊ ಕರೆಗಳಿಗೆ ಉತ್ತರಿಸುವಂತೆ ಮಾಡಿದ್ದರು. ತನಗೆ ಮತ್ತು ತನ್ನ ತಾಯಿಗೆ ಅಪಾಯ ಮಾಡುವ ಬೆದರಿಕೆ ಹಾಕಿ ನನ್ನ ಬಟ್ಟೆಗಳನ್ನು ಬಿಚ್ಚುವಂತೆ ಮಾಡಿದ್ದಾರೆ ಎಂದು ಮಹಿಳೆ ವಿಶೇಷ ತನಿಖಾ ತಂಡದ ಮುಂದೆ ಆರೋಪಿಸಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

"ಅವನು (ಪ್ರಜ್ವಲ್) ನನಗೆ ಕರೆ ಮಾಡಿ ನನ್ನ ಬಟ್ಟೆಗಳನ್ನು ತೆಗೆಯುವಂತೆ ಹೇಳುತ್ತಿದ್ದನು. ಅವನು ನನ್ನ ತಾಯಿಯ ಮೊಬೈಲ್‌ಗೆ ಕರೆ ಮಾಡಿ ವೀಡಿಯೊ ಕರೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಿದ್ದನು. ನಾನು ನಿರಾಕರಿಸಿದಾಗ ನನಗೆ ಮತ್ತು ನನ್ನ ತಾಯಿಗೆ ಅಪಾಯ ಮಾಡುವುದಾಗಿ ಬೆದರಿಕೆ ಹಾಕಿದ್ದರೆ. ಘಟನೆಗಳ ಬಗ್ಗೆ ತಿಳಿದ ನಂತರ ನಮ್ಮ ಕುಟುಂಬವು ನಮಗೆ ಬೆಂಬಲ ನೀಡಿತು. ನಾವು ದೂರು ದಾಖಲಿಸಿದ್ದೇವೆ" ಎಂದು ತಿಳಿಸಿದ್ದಾರೆ.

"ನನ್ನ ತಾಯಿ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ. ನನ್ನ ತಾಯಿ ಮೇಲೆ ಎಚ್.ಡಿ ರೇವಣ್ಣ ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರಿಗೆ ಸಹಕಾರ ನೀಡದಿದ್ದರೆ, ತನ್ನ ಗಂಡನ ಕೆಲಸವನ್ನು ಕಸಿದುಕೊಳ್ಳುವುದಾಗಿಯೂ, ಅವನನ್ನು ನಿರುದ್ಯೋಗಿಯನ್ನಾಗಿ ಮಾಡುತ್ತೇನೆ ಮತ್ತು ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ನನ್ನ ತಾಯಿಗೆ ಬೆದರಿಕೆ ಹಾಕುತ್ತಿದ್ದನು. ನಾವು ದೂರು ದಾಖಲಿಸಿದ ನಂತರ ತನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ" ಎಂದು ಮಹಿಳೆ ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ.

Woman recounts Sexual Assault Harassment by Prajwal Revanna and HD Revanna

2020 ಮತ್ತು 2021 ರ ನಡುವೆ ಸಂಭವಿಸಿದ ನಿರಂತರ ಕಿರುಕುಳವು ತನ್ನ ಕುಟುಂಬಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ನಾವುಗಳು ನಮ್ಮ ಮೊಬೈಲ್ ನಂಬರ್‌ಗಳನ್ನು ಬದಲಿಸಬೇಕಾಯಿತು ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ತಮ್ಮ ಮನೆಯಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

"ಹೌದು, ರೇವಣ್ಣ ಅವರು ಹಣ್ಣು ಕೊಡುವ ನೆಪದಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುವುದು ನಿಜ. ಪ್ರಜ್ವಲ್ ನನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸದ್ಯಕ್ಕೆ ಈ ಘಟನೆಗಳ ಬಗ್ಗೆ ಕೇವಲ ಮೂರು ಜನರು ಹೊರಬಂದು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಇನ್ನೂ ಮೂರು ಕೆಲಸಗಾರರರು ಈ ಬಗ್ಗೆ ಮಾತಾಡಿಲ್ಲ. ಅವರು ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ" ಎಂದು ಮಹಿಳೆ ಹೇಳಿಕೊಂಡಿದ್ದಾರೆ.

"ಘಟನೆ ನಡೆದು ಎರಡು ವರ್ಷಗಳ ನಂತರ ತಮ್ಮ ಜಮೀನನ್ನು ಮಾರಾಟ ಮಾಡುವಂತೆ ಮಾಡಲಾಯಿತು. ನನ್ನ ತಾಯಿ ನಾಲ್ಕೈದು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಅವರಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಆಕೆ ನಮಗೆ ತಡರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಮಾತ್ರ ಕರೆ ಮಾಡುತ್ತಿದ್ದರು. ಆದರೂ ನಮ್ಮೊಂದಿಗೆ ಅಷ್ಟೇನೂ ಮಾತನಾಡುತ್ತಿರಲಿಲ್ಲ. ಅವರು ನನ್ನ ತಾಯಿಯನ್ನು ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದರು. ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದು ಮಹಿಳೆ ನೋವು ಹಂಚಿಕೊಂಡಿದ್ದಾರೆ. ತಮ್ಮ ತಾಯಿ ಮತ್ತು ತನಗೆ ನ್ಯಾಯ ಬೇಕು ಎಂದು ಮನವಿ ಮಾಡಿದ್ದಾರೆ.

33 ವರ್ಷದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಹಗರಣ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿ ಜಿದ್ದಾಜಿದ್ದಿಯಲ್ಲಿ ತೊಡಗಿವೆ. ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದಲ್ಲಿ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. ಇಲ್ಲಿಯವರೆಗೆ, ಎರಡು ಅತ್ಯಾಚಾರ ಮತ್ತು ಒಂದು ಅಪಹರಣ ಪ್ರಕರಣ ಸೇರಿದಂತೆ ಈ ವಿಷಯದಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+