ಗೌರಿ ಲಂಕೇಶ್ ಹತ್ಯೆ : ಪಿಸ್ತೂಲ್ ಖರೀದಿ ಮಾಡಿದ್ದು ಎಲ್ಲಿಂದ?

Posted By: ವಿಕಾಸ್ ನಂಜಪ್ಪ
Subscribe to Oneindia Kannada
   Gauri Lankesh Case : SIT Investigation To Arms Dealers | Oneindia Kannada

   ಬೆಂಗಳೂರು, ಸೆಪ್ಟೆಂಬರ್ 15 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಶಸ್ತ್ರಾಸ್ತ್ರ ಡೀಲರ್‌ಗಳ ವಿಚಾರಣೆ ನಡೆಸಿದ್ದಾರೆ. ಹತ್ಯೆ ಮಾಡಲು ಬಳಸಿರುವ ಪಿಸ್ತೂಲ್‌ಗಳನ್ನು ಡೀಲರ್‌ಗಳಿಂದ ಖರೀದಿ ಮಾಡಿರಬಹುದೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

   ಗೌರಿ ಲಂಕೇಶ್ ಹತ್ಯೆ ಪ್ರಕರಣ: ರೌಡಿ ಶೀಟರ್ ಕುಣಿಗಲ್ ಗಿರಿ ವಿಚಾರಣೆ

   ಕುಣಿಗಲ್ ಗಿರಿ ಮತ್ತು ಆತನ ಸಹಚರರು ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ನಗರದಲ್ಲಿ ನಡೆಯುವ ಶಸ್ತ್ರಾಸ್ತ್ರ ಖರೀದಿ ಬಗ್ಗೆ ಆತನಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಗೆ ಒಂದೇ ಮಾದರಿ ಪಿಸ್ತೂಲ್ ಬಳಸಲಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

   With no leads in Gauri Lankesh murder case, cops look to arms dealers

   ಗೌರಿ ಲಂಕೇಶ್ ಹತ್ಯೆ ಮಾಡಿರುವ ವ್ಯಕ್ತಿ ಸ್ಥಳೀಯನಲ್ಲ. ಆದರೆ, ಸ್ಥಳೀಯರ ನೆರವು ಪಡೆದು ಆತ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಹತ್ಯೆ ಮಾಡಿದ ವ್ಯಕ್ತಿ 3 ಸಲ ಸ್ಥಳಕ್ಕೆ ಭೇಟಿ ನೀಡಿದ್ದ ಎಂದು ಪತ್ತೆ ಹಚ್ಚಿದ್ದಾರೆ. ಸಂಜೆ 7.30ಕ್ಕೆ ಆತ ಕೊನೆಯ ಬಾರಿ ಆತ ಗೌರಿ ಲಂಕೇಶ್ ಮನೆ ಸಮೀಪ ಸಂಚರಿಸಿದ್ದ.

   ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?

   ಎಸ್‌ಐಟಿ ಬೆಳಗಾವಿ ಪೊಲೀಸರನ್ನು ಸಂಪರ್ಕ ಮಾಡಿದ್ದು ಶಸ್ತ್ರಾಸ್ತ್ರ ಡೀಲರ್‌ಗಳನ್ನು ವಿಚಾರಣೆ ನಡೆಸಲು ಅನುಮತಿ ಕೇಳಿದೆ. ಹತ್ಯೆ ಕುರಿತು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಸೆ.5ರಂದು ಬೆಂಗಳೂರಿನ ಆರ್.ಆರ್.ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The police have started questioning an arms smuggler in connection with the Gauri Lankesh murder case. The police are checking for leads from the arms dealer to find out the trail behind the procurement of the pistol that was used in the murder.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ