ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರ್ನಾಟಕದಲ್ಲಿ ಚುನಾವಣೆ ಗೆಲ್ಲೋದು ಐಟಿ ದಾಳಿಗೆ ಆದೇಶ ಕೊಟ್ಟಂಗಲ್ಲ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಉತ್ತರಪ್ರದೇಶದಲ್ಲಿ ಚುನಾವಣೆ ಗೆದ್ದಂತೆ ಅಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾಗೆ ಸವಾಲು ಎಸೆದಿದ್ದಾರೆ.

ಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳುಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳು

ನಾವೇನು ಮಕ್ಕಳಲ್ಲ. ನಲವತ್ತು ವರ್ಷಗಳಿಂದ ರಾಜಕೀಯದಲ್ಲಿ ಇದೀವಿ. ಅಮಿತ್ ಷಾ ಅದ್ಭುತ ತಂತ್ರಗಾರ ಆಗಿದ್ದರೆ ಪಂಜಾಬ್, ಗೋವಾ, ಮಣಿಪುರದಲ್ಲಿ ಯಾಕೆ ವಿಫಲರಾಗುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ. ಆಳಂದದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ ನಂತರ ಅವರು ಮಾತನಾಡಿದರು.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

Siddaramaiah

ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದು ಅಂದರೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿಗೆ ಆದೇಶ ನೀಡಿದ ಹಾಗಲ್ಲ. ಇದು ಬಸವಣ್ಣನ ನಾಡು. ಇಲ್ಲಿ ಅವರ ವಿಭಜನೆ ರಾಜಕೀಯ ಕೆಲಸ ಮಾಡಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಕುತೂಹಲ ಕೆರಳಿಸಿದ ಅಮಿತ್ ಶಾ ಆದಿಚುಂಚನಗಿರಿ ಭೇಟಿ !ಕುತೂಹಲ ಕೆರಳಿಸಿದ ಅಮಿತ್ ಶಾ ಆದಿಚುಂಚನಗಿರಿ ಭೇಟಿ !

ಯಡಿಯೂರಪ್ಪ ಅವರ 'ಮಿಷನ್ ನೂರೈವತ್ತು' ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಜೈಲಿಗೆ ಹೋಗಿದ್ದವರನ್ನು ಜನ ಯಾಕೆ ಆರಿಸುತ್ತಾರೆ? ಉಚಿತವಾಗಿ ಅಕ್ಕಿ ನೀದಿದ, ಸಾಲ ಮನ್ನಾ ಮಾಡಿದ ಹಾಗೂ ಕಳೆದ ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಿದ ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.

Amit sha

ಉಚಿತ ಊಟ, ಶಿಕ್ಷಣ ಮತ್ತಿತರ ಅನುಕೂಲಗಳನ್ನು ಮಾಡಿದ ಸರಕಾರಕ್ಕೆ ಜನರು ದ್ರೋಹ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ

English summary
Winning elections in Karnataka is not like ordering IT raids on some Congress leaders. This is the land of Basavanna, his divisive politics will not work in Karnataka, the Chief Minister Siddaramaiah said at Alanda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X