Property: ಕರ್ನಾಟಕದಲ್ಲಿ ₹2,000 ಕೋಟಿಗೂ ಅಧಿಕ ವೆಚ್ಚದ ಹೆದ್ದಾರಿ ಯೋಜನೆಗಳು: ಈ ಭಾಗಳಲ್ಲಿ ಆಸ್ತಿ ಬೆಲೆ ಗಗನಕ್ಕೆ

Property: ರಾಜ್ಯದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಆಗುತ್ತಿದೆ. ಹಾಗೆಯೇ ಇದೀಗ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಕದಲ್ಲಿ ಬಹುದೊಡ್ಡ ಮೊತ್ತದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹಾಗಾದ್ರೆ ಯಾವ್ಯಾವ ಭಾಗದಲ್ಲಿ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅದರಲ್ಲೂ ಸಾಮಾನ್ಯ ರಸ್ತೆಗಳ ಪಕ್ಕದಲ್ಲಿನ ಆಸ್ತಿ ಬೆಲೆಗಳು ಗಗನಕೇರಿರುತ್ತವೆ. ಇನ್ನೂ ಹೆದ್ದಾರಿ ಪಕ್ಕದ ಆಸ್ತಿಗಳ ಬೆಲೆ ಕೇಳಬೇಕಾ.. ಆ ಭಾಗದಲ್ಲಿನ ರೈತರು ಕೊಟ್ಯಾಧೀಶ್ವರರು ಆಗುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಇದೀಗ ಕರ್ನಾಟಕದಲ್ಲಿ 2,000 ಕೋಟಿ ರೂಪಾಯಿ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಈ ಭಾಗಗಳ ರೈತರಿಗೆ ಬಂಪರ್ ಲಾಟರಿ ಹೊಡೆಯುವುದಂತೂ ಗ್ಯಾರಂಟಿ.

Will Karnataka s 2 000 Cr Highway Projects Increase Property Prices Along These Routes

ಏನೆಲ್ಲಾ ಪ್ರಯೋಜನೆಗಳಿವೆ?: ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ ಈ ಭಾಗದಲ್ಲಿ ಆಸ್ತಿ ಬೆಲೆಗಳು ಗಗನಕ್ಕೇರಿವೆ. ಮತ್ತೊಂದೆಡೆ ಇದೀಗ ಕೆಲವೇ ತಿಂಗಳುಗಳಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕೂಡ ಉದ್ಘಾನೆ ಆಗಲಿದೆ. ಇದಕ್ಕೂ ಮುನ್ನ ಈ ಭಾಗದಲ್ಲಿನ ಆಸ್ತಿ ಬೆಲೆಗಳು ಗಗನಕ್ಕೇರಿವೆ. ಇನ್ನೂ ಉದ್ಘಾಟನೆ ಆದರೆ, ಊಹಿಸಲಾರದಷ್ಟು ಭೂಮಿ ಬೆಲೆ ಹೆಚ್ಚಾಗುವುದರಲ್ಲಿ ಆಶ್ಚರ್ಯವಿಲ್ಲ. ಇದೀಗ ರಾಜ್ಯದಲ್ಲಿ 2,000 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ ಹೊಸದಾಗಿ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ರಾಜ್ಯದ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡಲಿವೆ. ಅಲ್ಲದೆ, ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಗಳು ಸೃಷ್ಟಿ ಆಗಲಿವೆ.

ರಾಷ್ಟೀಯ ಹೆದ್ದಾರಿಗಳು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಆದರೆ, ಸಾರಿಗೆ ಸಂಪರ್ಕ ಹೆಚ್ಚಾಗುತ್ತದೆ. ಸರಕು ಸಾಗಾಣಿಕೆ ಸಹ ಸುಲಭ ಆಗಲಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿ ಆದಂತಾಗಲಿದೆ. ಅಲ್ಲದೆ, ಸಮಯ ಕೂಡ ಉಳಿತಾಯ ಆದಂತಾಗಲಿದೆ.

ನಿತಿನ್‌ ಗಡ್ಕರಿ ಅವರು ಕರ್ನಾಟದಲ್ಲಿ 2,041 ಕೋಟಿ ರೂಪಾಯಿ ವೆಚ್ಚದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಅವರು ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. 88 ಕಿಲೋ ಮೀಟರ್ ವ್ಯಾಪ್ತಿಯ ಈ ಹೆದ್ದಾರಿ ಯೋಜನೆಗಳು ಶಿವಮೊಗ್ಗ, ಕಲಬುರಗಿ, ರಾಯಚೂರು, ಬೀದರ್ ಮತ್ತು ಕರಾವಳಿ ಕರ್ನಾಟಕ ಭಾಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಹಕಾರಿಯಾಗಲಿವೆ.

ರಸ್ತೆ ಮೇಲ್ಸೇತುವೆ, ಶಹಾಬಾದ್, ಮತ್ತು ಕಾಗಿನಾ ನದಿ ಸೇತುವೆ, NH-50: ಕಲಬುರಗಿ ಮತ್ತು ರಾಯಚೂರು ನಡುವಿನ ಪಿಂಚ್ ಪಾಯಿಂಟ್‌ಗಳನ್ನು ಕಡಿಮೆ ಮಾಡುವುದರಿಂದ, ರಸ್ತೆ ಓವರ್ ಬ್ರಿಡ್ಜ್ ಮತ್ತು ಸೇತುವೆ ಉತ್ತರ ಕರ್ನಾಟಕದ ಪ್ರಮುಖ ಮಾರ್ಗಗಳಲ್ಲಿ ವಿಳಂಬ ಮತ್ತು ಅಡಚಣೆಗಳನ್ನು ಕಡಿಮೆ ಮಾಡಲಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ಶಿರಾಡಿ ಘಾಟ್ NH-75ರ ರಸ್ತೆಗಳು ಸರಿ ಆದ್ರೆ ಕೇರಳದ ಜೊತೆ ವ್ಯಾಪಾರ ಇನ್ನೂ ಸುಧಾರಿಸಲಿದೆ. ಇದರಿಂದ ಸಮುದ್ರದ ಕಡೆಯಿಂದ ಒಳನಾಡಿನ ಜಿಲ್ಲೆಗಳಿಗೆ ಕೈಗಾರಿಕಾ ಸಾಮಗ್ರಿಗಳು, ಸೇರಿದಂತೆ ಇನ್ನಿತರ ವಸ್ತುಗಳ ಸಾಗಾಣಿಕೆ ಸುಲಭ ಆಗುತ್ತದೆ.

ಬೀದರ್-ಹುಮನಾಬಾದ್ ಅಗಲೀಕರಣ, NH-367: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಂದ 47 ಕಿಲೋ ಮೀಟರ್‌ಗಳ ರಸ್ತೆಯ ಅಗಳಿಗೊಳಿಸಲಾಗುತ್ತದೆ. ಇದು ಪ್ರಾದೇಶಿಕವಾಗಿ ಮತ್ತು ಹಕುರು ಕೈಗಾರಿಕಾ ಸಾರಿಗೆ ಉದ್ದೇಶಗಳಿಗಾಗಿ ಸಾರಿಗೆಯಲ್ಲಿ ಸುಧಾರಣೆಯನ್ನು ತರಲು ಸಹಾಯಕ ಆಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದಾಗಿ ಕೊಲ್ಲೂರು ಮೂಕಾಂಬಿಕಾ ಮತ್ತು ಸಿಗಂದೂರು ಚೌಡೇಶ್ವರಿ ದೇವಸ್ಥಾನಗಳಂತಹ ಧಾರ್ಮಿಕ ಸ್ಥಳಗಳಿಗೆ ಹೋಗಲು ಸುಲಭ ಆಗುತ್ತದೆ. ಪ್ರವಾಸೋದ್ಯಮ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದಾಗಿ, ಸ್ಥಳೀಯ ವ್ಯಾಪಾರ, ಹೋಟೆಲ್‌ ಉದ್ಯಮ ಮತ್ತು ಸಾರಿಗೆ ಉದ್ಯಮಗಳಿಗೆ ಆದಾಯ ಹೆಚ್ಚಾಗುತ್ತದೆ, ಮತ್ತು ಹಳ್ಳಿಗಳ ಆರ್ಥಿಕತೆಗೂ ತುಂಬಾ ಸಹಾಕಾರಿಯಾಗಲಿದೆ.

ಈ ಯೋಜನೆಗಳು ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೀದರ್‌ನಂತಹ ಹಳ್ಳಿಗಳನ್ನು ಬೆಂಗಳೂರು ಮತ್ತು ಮೈಸೂರಿನಂತಹ ದೊಡ್ಡ ನಗರಗಳೊಂದಿಗೆ ಸಂಪರ್ಕ ಸಾಧಿಸುತ್ತವೆ. ಇದರಿಂದ ರಾಜ್ಯದ ಎಲ್ಲಾ ಕಡೆಗಳಲ್ಲೂ ಅಭಿವೃದ್ಧಿ ಆಗುತ್ತದೆ ಮತ್ತು ಆರ್ಥಿಕ ಅಭಿವೃದ್ಧಿ ಆಗಲಿದೆ.

ಎರಡನೇ ಮತ್ತು ಮೂರನೇ ಹಂತದ ಪಟ್ಟಣಗಳಿಗೆ ಉತ್ತಮ ರಸ್ತೆ ಸಂಪರ್ಕ ಸಿಕ್ಕರೆ, ಆರ್ಥಿಕ ಚಟುವಟಿಕೆಗಳು ಹಂಚಿಹೋಗಲು ಸಹಾಯ ಆಗುತ್ತೆ. ಇದರಿಂದಾಗಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಮತ್ತು ರಾಜ್ಯದ ಬೇರೆ ಭಾಗದ ಜನರಿಗೂ ಅಭಿವೃದ್ಧಿ ಕಾಣಲು ಅವಕಾಶ ಸಿಕ್ಕಾಂತಾಗುತ್ತದೆ.

ಈ ಎಲ್ಲಾ ಯೋಜನೆಗಳನ್ನು ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ. ಇದರ ಮುಖ್ಯ ಗುರಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು. ಇದು ಹಳ್ಳಿ ಮತ್ತು ನಗರಗಳ ನಡುವೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ಬಗ್ಗೆ ಮಾರ್ಗಗಳನ್ನು ತೋರುತ್ತದೆ.

ಈ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕನಸಿನ ಫಲ. ದಕ್ಷಿಣ ಭಾರತದ ಅಭಿವೃದ್ಧಿಗೆ, ಅದರಲ್ಲೂ ಕರ್ನಾಟಕದಲ್ಲಿ ಉತ್ತಮ ರಸ್ತೆಗಳನ್ನು ಮಾಡುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದಿಂದ ಈ ಯೋಜನೆಗಳು ಶುರುವಾಗಿವೆ. ಇದು ಆ ಭಾಗದ ಜನರಿಗೆ ಸಹಾಯ ಮಾಡಲು ರಾಜಕೀಯವಾಗಿ ಕೈಗೊಂಡಿರುವ ನಿರ್ಧಾರವಾಗಿದೆ. ಇದು ಮುಂದೆ ತುಂಬಾ ದಿನಗಳವರೆಗೆ ಉಪಯೋಗವಾಗುವ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಹಾಗೂ ಕಳಸವಳ್ಳಿ ಗ್ರಾಮಗಳ ನಡುವೆ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ 2.44 ಕಿ.ಮೀ. ಉದ್ದದ ಕೇಬಲ್‌ ಸೇತುವೆಯನ್ನು ನಿತಿನ್‌ ಗಡ್ಕರಿ ಅವರು ಉದ್ಘಾನೆ ಮಾಡಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಚಾಲನೆ ನೀಡಿದರು.

ಪ್ರಮುಖ ಯೋಜನೆಗಳ ಪ್ರಯೋಜನೆಗಳು

* ಶರಾವತಿ ಸೇತುವೆ, ಶಿವಮೊಗ್ಗ: ಶರಾವತಿ ಸೇತುವೆಯು ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕದ ನಡುವಿನ ಪ್ರಮುಖ ರಸ್ತೆಯಾಗಿದ್ದು, ಸರಕುಗಳು ಮತ್ತು ವಾಹನ ಸಂಚಾರ ಸುಗಮಗೊಳಿಸುತ್ತದೆ.

* ರಸ್ತೆ ಮೇಲ್ಸೇತುವೆ (ROB), ಶಹಾಬಾದ್, ಮತ್ತು ಕಾಗಿನಾ ನದಿ ಸೇತುವೆ, NH-50: ಉತ್ತರ ಕರ್ನಾಟಕದ ಪ್ರಮುಖ ಮಾರ್ಗಗಳಲ್ಲಿ ವಿಳಂಬ ಮತ್ತು ಅಡಚಣೆಗಳನ್ನು ಕಡಿಮೆ ಮಾಡುತ್ತದೆ.

* ಬೀದರ್-ಹುಮನಾಬಾದ್ ಅಗಲೀಕರಣ, NH-367: ಮಶಿರಾಡಿ ಘಾಟ್‌ನಿಂದ ಮಂಗಳೂರು-ಬೆಂಗಳೂರು ಕಾರಿಡಾರ್‌ನ ಪ್ರಮುಖ ಮಾರ್ಗದ ಪುನಃಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.

* ಶಿರಾಡಿ ಘಾಟ್ ಪುನಃಸ್ಥಾಪನೆ, NH-75: ರಾಡಿ ಘಾಟ್‌ನಿಂದ ಮಂಗಳೂರು-ಬೆಂಗಳೂರು ಕಾರಿಡಾರ್‌ನ ಪ್ರಮುಖ ಮಾರ್ಗದ ಪುನಃಸ್ಥಾಪನೆ.

* ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಕೇರಳದ ಜೊತೆ ವ್ಯಾಪಾರ ಇನ್ನೂ ಸುಧಾರಿಸಲಿದೆ. ಇದರಿಂದ ಸಮುದ್ರದ ಕಡೆಯಿಂದ ಒಳನಾಡಿನ ಜಿಲ್ಲೆಗಳಿಗೆ ಕೈಗಾರಿಕಾ ಸಾಮಗ್ರಿಗಳು, ಸೇರಿದಂತೆ ಇನ್ನಿತರ ವಸ್ತುಗಳ ಸಾಗಾಣಿಕೆ ಸುಲಭ ಆಗುತ್ತದೆ.

ಒಟ್ಟಿನಲ್ಲಿ ಇವೆಲ್ಲಾ ಯೋಜನೆಗಳಿಂದ ಆಸ್ತಿದಾರರಿಗೆ ತುಂಬಾ ಅನುಕೂಲ ಆದಂತಾಗಲಿದೆ. ಅದರಲ್ಲೂ ಹೆದ್ದಾರು ಪಕ್ಕದಲ್ಲಿನ ರೈತರು ಕೋಟ್ಯಾಧಿಪತಿಗಳು ಆಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+