Karnataka Hijab Row Timeline : ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದ: ಟೈಮ್‌ಲೈನ್ ಹೀಗಿದೆ

ಬೆಂಗಳೂರು ಮಾರ್ಚ್ 15: ಕರ್ನಾಟಕ ಹೈಕೋರ್ಟ್ ಮಂಗಳವಾರ ಹಿಜಾಬ್ ವಿವಾದದ ತೀರ್ಪು ಪ್ರಕಟಿಸಲಿದೆ. ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಮಂಗಳವಾರದಂದು ಸರಣಿ ಸಂಖ್ಯೆ 1 ಎಂದು ಪಟ್ಟಿ ಮಾಡಲಾಗಿದೆ. ಅರ್ಜಿದಾರರ ಪರ ಹಾಜರಾದ ವಕೀಲರ ಪ್ರಕಾರ ನ್ಯಾಯಾಲಯದಲ್ಲಿ ಬೆಳಗ್ಗೆ 10.30ರಿಂದ ವಿಚಾರಣೆ ನಡೆಯಲಿದ್ದು ನಂತರ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಲ್ಲಿ ಈ ವಿಷಯದ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಚರ್ಚೆಗೆ ಗ್ರಾಸವಾಗಿತ್ತು. ಕಾಲೇಜಿನ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದರೇ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಶಾಲಾ ಕಾಲೇಜುಗಳು ಸೂಚಿಸಿದ ಸಮವಸ್ತ್ರವನ್ನೇ ಧರಿಸಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಲು ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಬಗ್ಗೆ ಬೀದಿಗಿಳಿದು ಹೋರಾಟ ಮಾಡಿದರು.

ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ನಮ್ಮ ಸಂಪ್ರದಾಯ. ನಮ್ಮ ಸಂಪ್ರದಾಯವನ್ನು ನಮ್ಮ ಧರ್ಮವನ್ನು ನಾವು ಪಾಲಿಸುತ್ತೇವೆ. ಈ ಹಕ್ಕುನ್ನು ಕಿತ್ತಿಕೊಳ್ಳುವ ಸ್ವಾತಂತ್ರ್ಯ ಯಾರಿಗೂ ಇಲ್ಲೆ ಎಂದು ವಾದಿಸಿ ಅವರೂ ಬೀದಿಗಿಳಿದು ಪ್ರತಿಭಟನೆ ಮಾಡಿದರು. ಹಿಂದೂ ಮುಸ್ಲೀಂ ವಿದ್ಯಾರ್ಥಿಗಳು ಎರಡೂ ವಿಚಾರಕ್ಕೆ ರಾಜ್ಯವ್ಯಾಪ್ತಿ ಪ್ರತಿಭಟನೆ ಮಾಡಿ 144 ಜಾರಿಗೆ ಕಾರಣವಾಯಿತು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಇಂದು ತೀರ್ಪು ಹೊರಬೀಳುವ ಸಾಧ್ಯತೆ ಇದೆ. ರಾಷ್ಟ್ರ ಈ ತೀರ್ಪಿಗಾಗಿ ಕಾಯುತ್ತಿದೆ. ಸಮಸ್ಯೆಯ ಟೈಮ್‌ಲೈನ್ ಇಲ್ಲಿದೆ.

2022ರ ಜನವರಿ 1: ಉಡುಪಿಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರಿ ಪಿಯು ಕಾಲೇಜು ನಿರ್ಬಂಧ.

Will Hijab Be Banned in Karnataka Schools and Colleges? A Timeline of the Case

ಜನವರಿ 6: ಆರು ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್‌ನ ನಿಯಮವನ್ನು ವಿರೋಧಿಸುತ್ತಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಬಗ್ಗೆ ದೂರುತ್ತಾರೆ ಮತ್ತು ಶೀಘ್ರದಲ್ಲೇ ಇದು ರಾಷ್ಟ್ರೀಯ ವಿಷಯವಾಗಿದೆ.

ಜನವರಿ 19: ಸಮಸ್ಯೆ ತೀವ್ರಗೊಂಡಂತೆ, ಕಾಲೇಜು ಆಡಳಿತವು ವಿದ್ಯಾರ್ಥಿಗಳಿಗೆ ಹಿಜಾಬ್ ಮತ್ತು ಬುರ್ಖಾ ಧರಿಸಲು ಅವಕಾಶ ನೀಡಲು ನಿರ್ಧರಿಸಿತು. ಶಿಕ್ಷಕರು ತರಗತಿಯೊಳಗೆ ಹುಡುಗಿಯರು ಹಿಜಾಬ್ ಅನ್ನು ಧರಿಸುವುದನ್ನು ನಿರ್ಬಂಧಿಸಿದರು.

ಜನವರಿ 25: ಕರ್ನಾಟಕ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ತಜ್ಞರ ಸಮಿತಿಯನ್ನು ರಚಿಸಿತು. ಸಮಿತಿಯ ಶಿಫಾರಸುಗಳು ಹೊರಬರುವವರೆಗೆ ಕಾಲೇಜು ನಿಗದಿಪಡಿಸಿದ ಡ್ರೆಸ್ ಕೋಡ್ ಅನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಒತ್ತಾಯಿಸಿತು.

ಜನವರಿ 31: ಹಿಜಾಬ್ ಧರಿಸಿ ತರಗತಿಗೆ ಆಗಮಸಿರುವುದನ್ನು ಹಿಂದೂ ವಿದ್ಯಾರ್ಥಿಗಳು ಒಪ್ಪಲಿಲ್ಲ. ಈ ಸಮಸ್ಯೆ ಕರ್ನಾಟಕ ಹೈಕೋರ್ಟ್‌ಗೆ ತಲುಪಿತು ಮತ್ತು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಯಿತು ಮತ್ತು ಭಾರತೀಯ ಸಂವಿಧಾನವು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಅರ್ಜಿದಾರರು ವಾದಿಸುತ್ತಾರೆ.

ಫೆಬ್ರವರಿ 1: ಶಿವಮೊಗ್ಗ, ವಿಜಯಪುರ ಸೇರಿದಂತೆ ಕರ್ನಾಟಕದ ಇತರ ಭಾಗಗಳಿಗೂ ಈ ಸಮಸ್ಯೆ ಹಬ್ಬಿತ್ತು.

ಫೆಬ್ರವರಿ 5: ಶಾಲಾ-ಕಾಲೇಜುಗಳಲ್ಲಿ ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. "ಕರ್ನಾಟಕ ಶಿಕ್ಷಣ ಕಾಯಿದೆ-1983 ರ 133 (2) ರ ಪ್ರಕಾರ ಏಕರೂಪದ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿತು. ಖಾಸಗಿ ಶಾಲಾ ಆಡಳಿತವು ತಮ್ಮ ಇಚ್ಛೆಯ ಸಮವಸ್ತ್ರವನ್ನು ಆಯ್ಕೆ ಮಾಡಬಹುದು" ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಫೆಬ್ರವರಿ 10: ವಿಷಯ ಬಗೆಹರಿಯುವವರೆಗೆ ಜನರನ್ನು ಪ್ರಚೋದಿಸುವ ಹಿಜಾಬ್ ಅಥವಾ ಕೇಸರಿ ಸ್ಕಾರ್ಫ್‌ಗಳಂತಹ ಯಾವುದೇ ಬಟ್ಟೆಯನ್ನು ಧರಿಸದಂತೆ ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳಿಗೆ ಆದೇಶ ನೀಡಿದೆ.

ಫೆಬ್ರವರಿ 10: ವಿದ್ಯಾರ್ಥಿಗಳ ಹಿಜಾಬ್ ಪರ-ವಿರೋಧದ ಪ್ರತಿಭಟನೆಗಳಿಂದಾಗಿ ಕರ್ನಾಟಕ ಸರ್ಕಾರವು 11 ಮತ್ತು 12 ನೇ ತರಗತಿಗಳಿಗೆ ಶಾಲೆಗಳನ್ನು ಮತ್ತು ಫೆಬ್ರವರಿ 12 ರಿಂದ ಫೆಬ್ರವರಿ 16 ರವರೆಗೆ ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಿದೆ.

ಫೆಬ್ರವರಿ 11: ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಬಟ್ಟೆಗಳನ್ನು ಧರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠಕ್ಕೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್ ಅವರು, ಹೈಕೋರ್ಟ್ ಆದೇಶವು "ಸಂವಿಧಾನದ 25 ನೇ ವಿಧಿ ಅಡಿಯಲ್ಲಿ ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕನ್ನು ಅಮಾನತುಗೊಳಿಸಿದೆ" ಮತ್ತು ಅರ್ಜಿಯನ್ನು ಪಟ್ಟಿ ಮಾಡಲು ಕಾರಣವಾಯಿತು ಎಂದು ಹೇಳಿದರು.

ಫೆಬ್ರವರಿ 18: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದರ ಬಳಕೆಯನ್ನು ತಡೆಯುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಭಾರತೀಯ ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ವಾದಿಸಿತು.

ಫೆಬ್ರವರಿ 25: ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆ ಎಂಬ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕೆಲವು ಮುಸ್ಲಿಂ ಹುಡುಗಿಯರು ಸಲ್ಲಿಸಿದ ಅರ್ಜಿಗಳ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ.

ಮಾರ್ಚ್ 15: ಕರ್ನಾಟಕ ಹೈಕೋರ್ಟ್‌ ಇಂದು ಬೆಳಿಗ್ಗೆ 10.30ಕ್ಕೆ ತನ್ನ ತೀರ್ಪಿನಲ್ಲಿ ಹಿಜಾಬ್ ನಿರ್ಬಂಧ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+