ಬಿಜೆಪಿ ಹಾಗೂ ಟಿಡಿಪಿ ಬಿರುಕು, ಕರ್ನಾಟಕದ ಮೇಲೆ ಪರಿಣಾಮವೇನು?

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 12 : ಆಂಧ್ರಪ್ರದೇಶದಲ್ಲಿ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಇದು ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ? ಕರ್ನಾಟಕದ ಬಳ್ಳಾರಿ, ಕೋಲಾರ, ಕಲಬುರಗಿ ಹಾಗೂ ಬೀದರ್ ನಲ್ಲಿ ತೆಲುಗು ಭಾಷಿಗರ ಸಂಖ್ಯೆ ಹೆಚ್ಚಿದೆ. ಇದಲ್ಲದೆ, ಬೆಂಗಳೂರಿನಲ್ಲೂ ತೆಲುಗು ಭಾಷಿಗರ ಮತಗಳು ಕೆಲ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದೆ. ಹೀಗಾಗಿ, ಮತ ವಿಭಜನೆ ತಡೆಗಟ್ಟಲು ಬಿಜೆಪಿ ಯತ್ನಿಸುತ್ತಿದೆ.

ರಾಜ್ಯ, ಭಾಷೆ ವಿಷಯಕ್ಕೆ ಬಂದರೆ ಅಧಿಕಾರವನ್ನು ಲೆಕ್ಕಿಸದೆ ಹೋರಾಟಕ್ಕೆ ಇಳಿಯಲು ಆಂಧ್ರಪ್ರದೇಶದ ಜನತೆ ಮುಂದಾಗಿದ್ದಾರೆ. ವಿಶೇಷ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಭರವಸೆಯನ್ನು ಮೋದಿ ಸರ್ಕಾರ ನೀಡಿತ್ತು.

ಎನ್ ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಗುಡ್ ಬೈ

 Will BJP-TDP spat play out on Telugu voters in Karnataka?

ಅದರೆ, ಇದಕ್ಕೆ ಒಪ್ಪದ ತೆಲುಗು ದೇಶಂ ಪಾರ್ಟಿ ತನ್ನ ಸಚಿವರನ್ನು ಕೇಂದ್ರ ಸಂಪುಟದಿಂದ ಹೊರಕ್ಕೆ ಕರೆಸಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಳಂಬ ಮಾಡಿದರೆ, ಇದರ ಪರಿಣಾಮ ಆಂಧ್ರದ ಮೇಲಷ್ಟೇ ಅಲ್ಲ, ಕರ್ನಾಟಕದ ಮೇಲೂ ಆಗಲಿದೆ. ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡ ರಾಜ್ಯವಾಗಿರುವ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ, ಶತಾಯಗತಾಯ ಯತ್ನಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Will the BJP-TDP in Andhra Pradesh play out in the Karnataka Assembly Elections 2018? There is a sizeable chunk of Telugu voters in places such as Bellary, Kolar, Kalaburgi and Bidar and the BJP would not want the spat to impact the voting pattern.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ