ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿಗೆ ಎರಡೂ ಕಾಯಿದೆಗಳಲ್ಲೂ ಜೀವನಾಂಶಕ್ಕೆ ಅವಕಾಶ; ಹೈಕೋರ್ಟ್

By ಎಸ್‌ಎಸ್‌ಎಸ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 09; ಕೌಟುಂಬಿಕ ಕಲಹ ಪ್ರಕರಣದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಯಡಿ ಎರಡರಡಿಯೂ ಪತಿಯಿಂದ ಪತ್ನಿ ಜೀವನಾಂಶ ಪಡೆಯಲು ಅವಕಾಶವಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆದರೆ ಜೀವನಾಂಶ ಪ್ರಮಾಣವನ್ನು ನ್ಯಾಯಾಲಯ ಎರಡೂ ಕಾಯಿದೆಯಡಿ ಹೊಂದಾಣಿಕೆ ಮಾಡಬಹುದು ಎಂದು ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ದುಡಿಯುವ ಶಕ್ತಿ ಇರುವ ಪತಿಗೆ ಕಾಯಂ ಜೀವನಾಂಶ ಕೇಳುವಂತಿಲ್ಲ-ಹೈಕೋರ್ಟ್ದುಡಿಯುವ ಶಕ್ತಿ ಇರುವ ಪತಿಗೆ ಕಾಯಂ ಜೀವನಾಂಶ ಕೇಳುವಂತಿಲ್ಲ-ಹೈಕೋರ್ಟ್

ಹೈಕೋರ್ಟ್‌ ಏನು ಹೇಳಿದೆ: ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೀವನಾಂಶ ಪಡೆದರೂ ಅದಕ್ಕೆ ಹೆಚ್ಚುವರಿಯಾಗಿ ಹಿಂದೂ ವಿವಾಹ ಕಾಯ್ದೆ ಅಥವಾ ಹಿಂದು ದತ್ತು ಸ್ವಿಕಾರ ಕಾಯ್ದೆ ಅಥವಾ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 (ಸ್ವಂತವಾಗಿ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಹಾಯಕರಾದ ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಪರಿಹಾರ ಕಲ್ಪಿಸುವ ನಿಯಮ) ಅಡಿಯಲ್ಲೂ ಹೆಚ್ಚುವರಿಯಾಗಿ ಜೀವನಾಂಶ ಪಡೆಯಬಹುದಾಗಿದೆ ಎಂಬುದಾಗಿ 'ರಜನೇಶ್ ಮತ್ತು ನೇಹಾ' ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿ ತಿಂಗಳು ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ ಪ್ರತಿ ತಿಂಗಳು ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ

Wife Can Claim Maintenance Under Two Acts HC Ruled

ಅದರಂತೆ ಒಂದು ಕಾಯ್ದೆಯಡಿ ಜೀವನಾಂಶ ನೀಡಲಾಗಿದೆ ಎಂದು ಹೇಳಿ ಮತ್ತೊಂದು ಕಾಯ್ದೆಯಡಿ ಜೀವನಾಂಶ ನೀಡಲಾಗದು ಎಂದು ಹೇಳಲು ಸಾಧ್ಯವಾಗದು. ಎರಡೂ ಕಾಯ್ದೆಯಡಿ ಜೀವನಾಂಶವನ್ನು ಪ್ರಮಾಣವನ್ನು ಹೊಂದಾಣಿಕೆ ಮಾಡಬೇಕು ಎಂದು ಪತಿಯ ಅರ್ಜಿ ವಜಾಗೊಳಿಸಿದೆ.

ಡೈವೋರ್ಸ್ ಕೊಡಿ ಇಲ್ಲ, ಜೀವನಾಂಶ ವಾಪಾಸ್ ಮಾಡಿ: ಅಹ್ಮದಾಬಾದ್ ಕೋರ್ಟ್ಡೈವೋರ್ಸ್ ಕೊಡಿ ಇಲ್ಲ, ಜೀವನಾಂಶ ವಾಪಾಸ್ ಮಾಡಿ: ಅಹ್ಮದಾಬಾದ್ ಕೋರ್ಟ್

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2018ರಲ್ಲಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು. 2020ರ ಡಿ.11ಕ್ಕೆ ಪತ್ನಿಯು ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದರು. ನಂತರ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಪರಿಹಾರ ಪಾವತಿಸಲು ಪತಿಗೆ ನಿರ್ದೇಶಿಸಲು ಕೋರಿ ಪತ್ನಿ 2021ರ ಫೆ.22ರಂದು ಮೂಡಬಿದಿರೆ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ಅರ್ಜಿಯಲ್ಲಿ ಜೀವನಾಂಶ ನೀಡಲು ಪತಿಗೆ ಸೂಚಿಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ್ದ ಕೋರ್ಟ್, ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ದಕ್ಷಿಣ ಕನ್ನಡದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು.

ಹಾಗಾಗಿ, ತಮ್ಮ ವಿರುದ್ಧ ಕ್ರಿಮಿನಲ್ ದೂರು ರದ್ದು ಕೋರಿ ಪತಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ದೂರಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿ 2022ರ ಫೆ.1ರಂದು ಹೈಕೋರ್ಟ್ ಆದೇಶಿಸಿತ್ತು. ಈ ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿಯಿರುವಾಗಲೇ ವಿವಾಹ ಅನೂರ್ಜಿತಗೊಳಿಸಲು ಕೋರಿ ಪತಿಯು ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 13(1)(1-ಎ) ಅಡಿಯಲ್ಲಿ 2021ರ ಸೆ.2ರಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಸಂಬಂಧ ನ್ಯಾಯಾಲಯದ ಹಾಜರಾದ ಪತ್ನಿ, ಪತಿಯಿಂದ ಶಾಶ್ವತ ಜೀವನಾಂಶ ಕೊಡಿಸಲು ಕೋರಿದ್ದರು. ಆ ಮನವಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕೊಡಲಾಗಿರುವ ಮಾಸಿಕ 20 ಸಾವಿರ ರು. ಸೇರಿದಂತೆ 2022ರ ಸೆ.2ರಿಂದ ಅನ್ವಯವಾಗುವಂತೆ ಮಾಸಿಕ ಒಟ್ಟು 30 ಸಾವಿರ ರೂ. ಜೀವನಾಂಶ ಪಾವತಿಸಬೇಕು ಎಂದು ಪತಿಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

English summary
Wife can claim maintenance under two acts ruled High Court of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X