Vegetable Price: ಗಗನ ಮುಟ್ಟಿದ ತರಕಾರಿ ದರ, ಮೀನು, ಚಿಕನ್‌ಗಿಂತ ಬೀನ್ಸ್ ದುಬಾರಿ
ಬೆಂಗಳೂರು, ಏಪ್ರಿಲ್ 29: ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೀರಿಲ್ಲದೇ ಬಿಸಿಲಿನ ಝಳದಿಂದ ತರಕಾರಿ ಇಳುವರಿ ಕುಂಠಿತಗೊಂಡಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ತರಕಾರಿಗಳ ದರವೂ ಹೆಚ್ಚಾಗುತ್ತಿದೆ. ಬೀನ್ಸ್, ಬದನೆ ಕಾಯಿ, ಕ್ಯಾಪ್ಸಿಕಂ, ಸೇರಿದಂತೆ ಹಲವು ತರಕಾರಿಗಳ ದರ ಗಗನಕ್ಕೇರಿದೆ. ತರಕಾರಿಗಿಂತ ಮೀನು, ಕೋಳಿ ಮಾಂಸದ ಬೆಲೆಯೇ ಕಡಿಮೆ ಎನ್ನುವಂತಾಗಿದೆ.
ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರಟ್, ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಾಂತ್ಯದಲ್ಲಿ ತರಕಾರಿಗಳ ದರದಲ್ಲಿ ಏರಿಕೆ ಉಂಟಾಗಿದೆ. ಸದ್ಯ ಬೆಂಗಳೂರು ಮಾರುಕಟ್ಟೆಗೆ ಕೋಲಾರ, ರಾಮನಗರ, ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರದಿಂದ ತರಕಾರಿಗಳು ಬರುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ.

ಬಿಸಿಲಿನಿಂದ ತರಕಾರಿ ಹಾಗೂ ಸೊಪ್ಪುಗಳು ಬೇಗ ಒಣಗುತ್ತದೆ. ಬಾಡಿ ಹೋಗುತ್ತದೆ. ಬೆಳಗ್ಗೆ ಫ್ರೆಶ್ ಆಗಿ ತಂದ ಸೊಪ್ಪು ಎಷ್ಟೇ ನೀರು ಸಿಂಪಡಿಸಿದರೂ ಕೂಡ ಅರ್ಧ ದಿನಕ್ಕೆ ಪೂರ್ತಿ ಒಣಗುತ್ತದೆ. ತರಕಾರಿಗಳು ಕೂಡ ಹೆಚ್ಚು ದಿನ ವ್ಯಾಪಾರಕ್ಕೆ ಬರುತ್ತಿಲ್ಲ. ಇತ್ತ ದರ ಹೆಚ್ಚಳ ಒಂದು ಕಡೆಯಾದರೆ, ಒಣಗಿದ ಸೊಪ್ಪು, ತರಕಾರಿಗಳನ್ನು ಗ್ರಾಹಕರು ಕೊಳ್ಳುತ್ತಿಲಲ್ಲ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದ್ದು, ಅನೇಕರು ತರಕಾರಿ ವ್ಯಾಪಾರಕ್ಕೆ ತಾತ್ಕಲಿಕ ಬ್ರೇಕ್ ಹಾಕಿದ್ದಾರೆ. ಇದರಿಂದ ವ್ಯಾಪಾರ ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ತರಕಾರಿ ಬೆಲೆ ಏರಿಕೆಯಾಗುತ್ತಿದೆ.
ಮಾರುಕಟ್ಟೆಯಲ್ಲಿ ಸದ್ಯದ ತರಕಾರಿ ದರವೇನು..?( ನಗರಗಳಿಗನುಗುಣವಾಗಿ ದರರಲ್ಲಿ ಏರಿಳಿತಗಳಿರುತ್ತದೆ)
ಬೀನ್ಸ್- 200 ರೂಪಾಯಿ
ನಾಟಿ ಬೀನ್ಸ್-140 ರೂಪಾಯಿ
ಊಟಿ ಕ್ಯಾರಟ್-100 ರೂಪಾಯಿ
ನಾಟಿ ಕ್ಯಾರಟ್- 40 ರೂಪಾಯಿ
ಮೂಲಂಗಿ-60 ರೂಪಾಯಿ
ಈರುಳ್ಳಿ - 40 ರೂಪಾಯಿ
ಬೀಟ್‌ರೂಟ್- 80 ರೂಪಾಯಿ
ಬೆಂಡೆಕಾಯಿ - 80 ರೂಪಾಯಿ
ನವಿಲುಕೋಸು - 80 ರೂಪಾಯಿ
ಹೀರೆಕಾಯಿ -80 ರೂಪಾಯಿ
ಟೊಮೇಟೊ -40 ರೂಪಾಯಿ
ಆಲೂಗಡ್ಡೆ- 50 ರೂಪಾಯಿ
ಮೆಣಸಿನಕಾಯಿ-80 ರೂಪಾಯಿ
ಕ್ಯಾಪ್ಸಿಕಂ-80 ರೂಪಾಯಿ












Click it and Unblock the Notifications