ಸಿದ್ದರಾಮಯ್ಯ VS ಸುಧಾಕರ್: ಗುರು ವಿರುದ್ಧವೇ ಶಿಷ್ಯ ತಿರುಗಿಬಿದ್ದಿದ್ದು ಏಕೆ?
ಬೆಂಗಳೂರು: ಅಂತೂ ಇಂತೂ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಕನ್ಫರ್ಮ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಪರದಾಡಿ ಪರದಾಡಿ ಕೊನೆಗೆ ಸಿಎಂ & ಡಿಸಿಎಂ ಯಾರು ಅನ್ನೋದನ್ನ ಕನ್ಫರ್ಮ್ ಮಾಡಿದೆ. ಆದರೆ ಪಕ್ಕಾ ಸುದ್ದಿ ಇದಲ್ಲ, ಯಾರ ಗಮನಕ್ಕೂ ಬಾರದೆ ತೆರೆಮರೆಗೆ ಸರಿದ ಗುರು-ಶಿಷ್ಯರ ಗದಾಯುದ್ಧದ ಕುರಿತು ಇಲ್ಲಿ ಒಂದಷ್ಟು ಚರ್ಚೆ ಮಾಡೋಣ. ಸಿದ್ದರಾಮಯ್ಯ VS ಸುಧಾಕರ್ ವಾರ್ ಬಗ್ಗೆ ಇಲ್ಲಿ ತಿಳಿಯೋಣ.
ಸಿದ್ದರಾಮಯ್ಯ 2013ರಲ್ಲಿ ಮೊದಲ ಬಾರಿಗೆ ಸಿಎಂ ಆದ ಸಂದರ್ಭದಲ್ಲಿ ತಮ್ಮ ಅತ್ಯಾಪ್ತ ಬಳಗದಲ್ಲಿ ಡಾ.ಕೆ. ಸುಧಾಕರ್ ಅವರಿಗೂ ಸ್ಥಾನ ನೀಡಿದ್ದರು. ಅದರಲ್ಲೂ ಮಾಜಿ ಸಚಿವ ಮತ್ತು ಮಾಜಿ ಶಾಸಕರಾದ ಸುಧಾಕರ್ ಅವರು ಸಿದ್ದರಾಮಯ್ಯಗೆ ಅದೆಷ್ಟು ಆಪ್ತರಾಗಿದ್ದರು ಅಂದ್ರೆ, ಸುಧಾಕರ್ ಸುಲಭವಾಗಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಬರುವಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮಹತ್ವದ್ದಾಗಿತ್ತು. ಅಷ್ಟರಮಟ್ಟಿಗೆ ಸುಧಾಕರ್ ಅವರ ಕ್ಷೇತ್ರ ಅಭಿವೃದ್ಧಿ ಆಗಿತ್ತು. ಆದ್ರೆ ಇದೀಗ ದಿಢೀರ್ ಸುಧಾಕರ್ ಅವರು ಸಿದ್ದು ವಿರುದ್ಧ ತಿರುಗಿಬಿದ್ದಿದ್ದು ಏಕೆ? ತಿಳಿಯೋಣ ಬನ್ನಿ.

ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ!
ನಿನ್ನೆ ಎಲ್ಲರಿಗೂ ಆಶ್ಚರ್ಯ ಕಾದಿತ್ತು ಅದೇನೆಂದ್ರೆ ಕೆ. ಸುಧಾಕರ್ ಮಾಡಿದ್ದ ಟ್ವೀಟ್ ಸಂಚಲನ ಸೃಷ್ಟಿಸಿತ್ತು. 2018ರಲ್ಲಿ ರಚನೆ ಆಗಿದ್ದ ಕುಮಾರಸ್ವಾಮಿ ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರ ಬಿದ್ದೋಗಲು ಸಿದ್ದರಾಮಯ್ಯ ಪಾಲು ಕೂಡ ಇತ್ತು ಎನ್ನುವಂತೆ ಪರೋಕ್ಷವಾಗಿ ಟ್ವೀಟ್ ಮಾಡಿದ್ದರು ಸುಧಾಕರ್. ಈ ಟ್ವೀಟ್‌ಗೆ ವಿರುದ್ಧವಾಗಿ ಎಂಟಿಬಿ ನಾಗರಾಜ್ ಟ್ವೀಟ್ ಮಾಡಿ ನೇರ ವಾಗ್ದಾಳಿ ನಡೆಸಿದ್ದರು. ಆದ್ರೆ ದಿಢೀರ್ ಕೆ.ಸುಧಾಕರ್ ಹೀಗೆ ಟ್ವೀಟ್ ಮಾಡಿದ್ಯಾಕೆ? ತಮ್ಮ ಒಂದು ಕಾಲದ ಮಾರ್ಗದರ್ಶಕ ಸಿದ್ದರಾಮಯ್ಯ ವಿರುದ್ಧ ಇಂತಹ ಮಾತು ಆಡಿದ್ದೇಕೆ?
ಸಿದ್ದರಾಮಯ್ಯ ಬಗ್ಗೆ ಸುಧಾಕರ್ ಹೇಳಿದ್ದು ಏನು?
ಅಷ್ಟಕ್ಕೂ ನಿನ್ನೆ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿದ್ದ ಸುಧಾಕರ್, '2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.' ಎಂದು ಗಂಭೀರ ಆರೋಪ ಮಾಡಿದ್ರು. ಅಲ್ಲದೆ ತಮ್ಮ ಟ್ವೀಟ್‌ನಲ್ಲಿ ಹಲವು ಸ್ಫೋಟಕ ವಿಚಾರ ಪ್ರಸ್ತಾಪಿಸಿದ್ದರು.
ಸರ್ಕಾರ ಬೀಳುವಲ್ಲಿ ಸಿದ್ದರಾಮಯ್ಯ ಪರೋಕ್ಷ ಪಾತ್ರ?
'2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು. ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ' ಎಂದಿದ್ದರು.

'ಸುಧಾಕರ್‌ಗೆ ಭ್ರಮೆ' ಅಂದ್ರಾ ಎಂಟಿಬಿ?
'ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ. ಮಾಜಿ ಸಚಿವರಾದ ಸುಧಾಕರ್ ಇಂದು ಮಾನ್ಯ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿರುವ ಮಾತು ಸತ್ಯಕ್ಕೆ ದೂರ, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು?' ಎಂದು ನಿನ್ನೆ ಎಂಟಿಬಿ ಪ್ರಶ್ನೆ ಮಾಡಿದ್ದರು.
ಇಷ್ಟಕ್ಕೇ ಸುಮ್ಮನಾಗದೆ ತಮ್ಮದೇ ಬಿಜೆಪಿ ಪಕ್ಷದ ಮತ್ತೊಬ್ಬ ನಾಯಕರ ಸುಧಾಕರ್ ವಿರುದ್ಧ ಮಾತಿನ ಬಾಣ ಬಿಟ್ಟಿದ್ದ ಎಂಟಿಬಿ ನಾಗರಾಜ್, 'ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು?' ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದರು. ಆದರೆ ಇಲ್ಲಿ ಕಾಡುತ್ತಿರುವ ಪ್ರಶ್ನೆ ಸುಧಾಕರ್ ಅವರು ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದು ಏಕೆ? ಎಂಬುದು. ಏನಿರಬಹುದು ಕಾರಣ? ಬನ್ನಿ ಮುಂದೆ ತಿಳಿಯೋಣ.
ಮಾಜಿ ಕಾಂಗ್ರೆಸ್ ನಾಯಕನ ಮಾತು!
ಹೌದು ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಕಿರಿಕ್ ಶುರುವಾದ ದಿನವೇ ಮಧ್ಯಪ್ರವೇಶ ಮಾಡಿ ಒಕ್ಕಲಿಗ ಸಿಎಂ ಬಗ್ಗೆ ಮಾತನಾಡಿದ್ದರು ಡಾ.ಕೆ. ಸುಧಾಕರ್. ಇನ್ನು ಮಾಜಿ ಕಾಂಗ್ರೆಸ್ಸಿಗ ಸುಧಾಕರ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ನಾಯಕ ಕಾಂಗ್ರೆಸ್‌ನ ಸಿಎಂ ಆಯ್ಕೆ ಬಗ್ಗೆ ಮಾತನಾಡಿದ್ದು ಖುದ್ದು ಬಿಜೆಪಿ ನಾಯಕರಿಗೂ ಇಷ್ಟವಾಗಿರಲಿಲ್ಲ ಅಂತಾ ಕಾಣುತ್ತೆ, ಇದರ ಜೊತೆ ಜೊತೆಗೆ ಕೆ. ಸುಧಾಕರ್ ಟ್ವೀಟ್‌ಗೆ ವಿರುದ್ಧ ಕಮೆಂಟ್ ಬಂದಿದ್ದವು. ಇದನ್ನೂ ಮೀರಿ ನಂತರ ಮತ್ತೊಮ್ಮೆ ನೇರವಾಗಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು ಸುಧಾಕರ್.
ಹಳಸಿ ಹೋಯ್ತಾ ಸಿದ್ದು-ಸುಧಾಕರ್ ಸಂಬಂಧ?
ಅಷ್ಟಕ್ಕೂ ಈಗ ಕಾಡುತ್ತಿರುವ ಪ್ರಶ್ನೆಯೇ ಅದು, ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದ ಸುಧಾಕರ್ ಅವರು ತಮ್ಮ ಮಾಜಿ ಮಾರ್ಗದರ್ಶಕರ ಮೇಲೆ ಮುನಿಸಿಕೊಂಡಿದ್ದಾರಾ? ಈ ಮುನಿಸು ಮೂಡಲು ಕಾರಣ ಏನು? ಸಿದ್ದರಾಮಯ್ಯ & ಸುಧಾಕರ್ ಸಂಬಂಧ ಹಳಸಿ ಹೋಯ್ತಾ? ಎಂಬ ಹಲವು ಪ್ರಶ್ನೆಗಳು ನೆಟ್ಟಿಗರನ್ನ, ಜನರನ್ನ ಕಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಅನ್ನೋದು ಕನ್ಫರ್ಮ್ ಆಗಿದೆ. ಮುಂದೆ ಏನೆಲ್ಲಾ ಬದಲಾವಣೆ ಆಗುತ್ತೋ, ಕಾದು ನೋಡಬೇಕು.
ಒಟ್ನಲ್ಲಿ 2013ರಲ್ಲಿ ಮೊದಲ ಬಾರಿಗೆ ಆಯ್ಕೆಯಾದ ನಂತರ ಸಿದ್ದರಾಮಯ್ಯ ಅವರ ಆತ್ಮೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಡಾ.ಕೆ. ಸುಧಾಕರ್ ಈಗ ಸಿದ್ದರಾಮಯ್ಯ ವಿರುದ್ಧ ವಾಗ್ಬಾಣ ಶುರು ಮಾಡಿದ್ದಾರೆ. ಇದು ಮುಂದೆ ಕೂಡ ಇದೇ ರೀತಿ ಇರುತ್ತಾ? ಇಲ್ಲ ಏನಾದರೂ ಚೇಂಜಸ್ ಆಗಬಹುದಾ? ಕಾದು ನೋಡಬೇಕು. ಆದರೆ ಹಿರಿಯರು ಹೇಳಿತ್ತಿದ್ದ ಒಂದು ಮಾತು ಮತ್ತೆ ಮತ್ತೆ ಸತ್ಯವಾಗುತ್ತಿದೆ, ಅದೇನಂದ್ರೆ ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಮತ್ತು ಯಾರೂ ಶಾಶ್ವತ ಶತ್ರುಗಳಲ್ಲ ಅಂತಾ.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications