ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಮುಚ್ಚಿ ಹಾಕಲು 7 ಕಾರಣ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರಿನಲ್ಲಿ ಸಿಡಿ ಪ್ರಕರಣದ ಬಗ್ಗೆ ಕರ್ನಾಟಕ ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಈ ಪ್ರಕಟಣೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ "ಸಿಡಿ"ಮದ್ದು!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸರ್ಕಾರಕ್ಕೆ ಮುಖಭಂಗ ಅನುಭವಿಸಬೇಕಾಗುತ್ತದೆ. ಅಲ್ಲದೇ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿರುವ ಪ್ರಕರಣ ಮುಚ್ಚಿ ಹಾಕುವುದರ ಹಿಂದೆಯೂ ಸಾಕಷ್ಟು ಕಾರಣಗಳಿದೆ. ಸಿಡಿ ಪ್ರಕರಣ ಮುಚ್ಚಿ ಹಾಕುವುದರ ಹಿಂದಿನ ಮರ್ಮವೇನು. ಸರ್ಕಾರದ ನಡೆಯ ಹಿಂದಿನ ಕಾರಣಗಳೇನು ಎಂಬುದರ ಬಗ್ಗೆ ಕಾಂಗ್ರೆಸ್ ಏಳು ಕಾರಣಗಳನ್ನು ಕೊಟ್ಟಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಮುಖ್ಯಮಂತ್ರಿ ಬಿಎಸ್ ವೈ ಭ್ರಷ್ಟ ಎಂಬ ಹೇಳಿಕೆ

ಮುಖ್ಯಮಂತ್ರಿ ಬಿಎಸ್ ವೈ ಭ್ರಷ್ಟ ಎಂಬ ಹೇಳಿಕೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿಡಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಬ್ಬ ಭ್ರಷ್ಟ ಎಂದು ಹೇಳಲಾಗಿದೆ. ಉದ್ಯೋಗಕ್ಕಾಗಿ ವಂಚನೆ, ಲೈಂಗಿಕ ದೌರ್ಜನ್ಯ, ಸರ್ಕಾರಿ ಕಚೇರಿಗಳ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸಬೇಕಾಗುತ್ತದೆ.

ವಿಡಿಯೋದಲ್ಲಿ ಬೆಳಗಾವಿ ಪ್ರತ್ಯೇಕತೆ ಪ್ರಸ್ತಾಪ

ವಿಡಿಯೋದಲ್ಲಿ ಬೆಳಗಾವಿ ಪ್ರತ್ಯೇಕತೆ ಪ್ರಸ್ತಾಪ

ಬೆಳಗಾವಿ ಪ್ರತ್ಯೇಕ ರಾಜ್ಯ ಎಂದು ರಾಜ್ಯ ವಿರೋಧಿ ಹೇಳಿಕೆ ನೀಡಿರುವ ಆರೋಪ ಎದುರಿಸಬೇಕಾಗುತ್ತದೆ. ಬೆಳಗಾವಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಆರೋಪಿಸಲಾಗುತ್ತದೆ. ಅಲ್ಲದೇ, ರಮೇಶ್ ಜಾರಕಿಹೊಳಿ ಮೇಲೆ ಇರುವ ಸಂವಿಧಾನಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಾಗುತ್ತದೆ.

ಮಾಧ್ಯಮಗಳ ಬಗ್ಗೆ ಅವಹೇಳನ ಮಾಡಿರುವ ಆರೋಪ

ಮಾಧ್ಯಮಗಳ ಬಗ್ಗೆ ಅವಹೇಳನ ಮಾಡಿರುವ ಆರೋಪ

ರಾಜ್ಯ ಸರ್ಕಾರ, ಅಧಿಕಾರ ದುರುಪಯೋಗ ಮತ್ತು ಗಡಿನಾಡು ಬೆಳಗಾವಿ ವಿಷಯಗಳಿಗಷ್ಟೇ ವಿಡಿಯೋದಲ್ಲಿನ ಹೇಳಿಕೆಗಳು ಸೀಮಿತವಾಗಿರಲಿಲ್ಲ. ಅದರ ಹೊರತಾಗಿ ಮಾಧ್ಯಮಗಳ ವಿರುದ್ಧವೂ ಅವಹೇಳನಕಾರಿ ಆಗಿ ಮಾತನಾಡಲಾಗಿದೆ. ಅಲ್ಲದೇ, ಮಹಿಳೆಯರ ಬಗ್ಗೆ ಅವಹೇಳನ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ದೂಷಿಸಿದೆ.

Recommended Video

ಜಾರಕಿಹೊಳಿ ಸಿಡಿ ಕೇಸ್ ನಾಲ್ವರು ಅರೆಸ್ಟ್ !! | Oneindia Kannada
ಸಿಬಿಐಗೆ ಸಿಡಿ ಪ್ರಕರಣವನ್ನು ವಹಿಸುವಂತೆ ಆಗ್ರಹ

ಸಿಬಿಐಗೆ ಸಿಡಿ ಪ್ರಕರಣವನ್ನು ವಹಿಸುವಂತೆ ಆಗ್ರಹ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದ ವಿಶೇಷ ತನಿಖಾ ತಂಡವು ವಿಚಾರಣೆ ನಡೆಸುತ್ತಿದೆ. ಆದರೆ ಈ ಎಸ್ಐಟಿ ತಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಆಪ್ತರಾಗಿರುವ ಅಧಿಕಾರಿಗಳೂ ಇದ್ದಾರೆ. ಹೀಗಾಗಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಾದವೂ ಕೇಳಿ ಬರುತ್ತಿದೆ.

English summary
Why Karnataka Govt Trying To Close The Ex-Minister Ramesh Jarkiholi CD Case, Here Congress Give 7 Reasons For This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X