ರಾಜಮೌಳಿಗೆ ಪದ್ಮಶ್ರೀ, ಸಿದ್ದರಾಮಯ್ಯಗೆ ಬಹಿರಂಗ ಪತ್ರ

By: ಶ್ರೀಧರ ಕೆದಿಲಾಯ, ಉಡುಪಿ
Subscribe to Oneindia Kannada

ಬಾಹುಬಲಿ ಚಲನಚಿತ್ರ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಹಲವರ ಹುಬ್ಬೇರಿಸಿದೆ. ಸ್ವತಃ ರಾಜಮೌಳಿ ಅವರೇ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದನ್ನು ಓದಿರಬಹುದು. ನನಗೆ ಅಚ್ಚರಿಯಾಗಿದ್ದೇನೆಂದರೆ ಎಲ್ಲಾ ಬಿಟ್ಟು 'ಬಾಹುಬಲಿ' ನಿರ್ದೇಶಕನ ಹಿಂದೆ ನಮ್ಮ ಘನ ಕರ್ನಾಟಕ ಸರ್ಕಾರ ಬಿದ್ದಿದ್ದೇಕೆ. ಶಿಫಾರಸು ಮಾಡಲು ಬೇರೆ ಪ್ರತಿಭೆಗಳು ಕರ್ನಾಟಕದಲ್ಲಿ ಕಾಣಿಸಲಿಲ್ಲವೇ?

"ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಓದಿದ್ದು ಆಂಧ್ರಪ್ರದೇಶದಲ್ಲಿ, ಕೆಲಸ ಮಾಡಿದ್ದು ತಮಿಳುನಾಡಿನಲ್ಲಿ, ವಾಸವಾಗಿರೋದು ತೆಲಂಗಾಣದಲ್ಲಿ. ನಾನು ಎಲ್ಲಾ ರಾಜ್ಯಗಳಿಗೆ ಸೇರಿದವ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಖ್ಯಾತ ನಿರ್ದೇಶಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ರಾಜಮೌಳಿ ಹೇಳಿಕೊಂಡಿದ್ದಾರೆ.[ಪದ್ಮ ಪ್ರಶಸ್ತಿಗಳ ಮೇಲೆ ತೂರಿಬಂದ ಟೀಕಾಸ್ತ್ರಗಳು]

ಆದರೆ, ಪ್ರಶಸ್ತಿ ಕೊಟ್ಟಿದ್ದರ ಬಗ್ಗೆ ನಮ್ಮ ತಕರಾರಿಲ್ಲ. ಕರ್ನಾಟಕದವರು ವಿಶಾಲಹೃದಯಿಗಳು. ಕರ್ನಾಟಕದಲ್ಲೂ ಅನೇಕ ಸಾಹಿತಿಗಳು, ಸಿನಿಮಾ ಕ್ಷೇತ್ರ ದಿಗ್ಗಜರ ಮನೆಮಾತು ಕನ್ನಡವಾಗಿರದೇ ಬೇರೆ ಭಾಷೆಯಾಗಿದೆ.

ಆದರೆ, ಪ್ರಶಸ್ತಿ ಪಡೆಯಲು ಅಥವಾ ನೀಡಲು ಇರುವ ಮಾನದಂಡ ಅವರ ಸಾಧನೆ ಎಂಬುದಾದರೆ, ರಾಜಮೌಳಿ ಅವರೇನು ಕನ್ನಡ ಚಿತ್ರರಂಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಎನ್ನುವುದಾದರೆ ರಾಜ್ಯ ಸರ್ಕಾರ ಅಥವಾ ಸಂಸ್ಕೃತಿ ಇಲಾಖೆಗಳಿಂದ ಶಿಫಾರಸು ಕಳಿಸುವುದರಲ್ಲಿ ಅರ್ಥವೇ ಇರುವುದಿಲ್ಲ.

ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ ರಾಜಮೌಳಿ

ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ ರಾಜಮೌಳಿ

"ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಓದಿದ್ದು ಆಂಧ್ರಪ್ರದೇಶದಲ್ಲಿ, ಕೆಲಸ ಮಾಡಿದ್ದು ತಮಿಳುನಾಡಿನಲ್ಲಿ, ವಾಸವಾಗಿರೋದು ತೆಲಂಗಾಣದಲ್ಲಿ. ನಾನು ಎಲ್ಲಾ ರಾಜ್ಯಗಳಿಗೆ ಸೇರಿದವ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಖ್ಯಾತ ನಿರ್ದೇಶಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್.ಎಸ್.ರಾಜಮೌಳಿ ಅವರು ಟ್ವಿಟ್ಟರ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪ್ರತಿಭೆಗಳಿಲ್ಲವೇ

ಕರ್ನಾಟಕದಲ್ಲಿ ಪ್ರತಿಭೆಗಳಿಲ್ಲವೇ

ವಿಷ್ಣುವರ್ಧನ್, ಅನಂತ್ ನಾಗ್ ಸೇರಿದಂತೆ ಅನೇಕ ನಟರಿದ್ದಾರೆ. ಎಂಟೆಂಟು ರಾಷ್ಟ್ರಪ್ರಶಸ್ತಿ ಕಳೆದ ಪಿ ಶೇಷಾದ್ರಿ, ಗಿರೀಶ್ ಕಾಸರವಳ್ಳಿಯಂಥ ನಿರ್ದೇಶಕರಿದ್ದಾರೆ. ಇವರ ಹೆಸರುಗಳನ್ನು ಶಿಫಾರಸ್ಸು ಮಾಡಿ ಹಠ ಹಿಡಿದು ಪ್ರಶಸ್ತಿ ಸಿಗುವಂತೆ ಮಾಡುವ ಛಾತಿ ನಮ್ಮ ಘನ ಸರ್ಕಾರದ ಅಧಿಕಾರಿಗಳಿಗೆ ಇಲ್ಲದ್ದಂತಾಗಿರುವುದು ದುರಂತವೇ ಸರಿ.

ಹೆಸರು ಶಿಫಾರಸು ಮಾಡಲು ಕಾರಣ ಏನು

ಹೆಸರು ಶಿಫಾರಸು ಮಾಡಲು ಕಾರಣ ಏನು

ಇಷ್ಟಾದರೂ ರಾಜಮೌಳಿ ಹೆಸರು ಶಿಫಾರಸು ಮಾಡಲು ಕಾರಣ ಏನು ಎಂಬುದು ತಿಳಿಯುತ್ತಲೇ ಇಲ್ಲ. ಅಕಸ್ಮಾತ್ ಇದೇ ಶಿಫಾರಸು ಏನಾದರೂ ಜೆಡಿಎಸ್ ಕುಮಾರಣ್ಣ ಮಾಡಿದ್ರೆ ಒಪ್ಪಬಹುದಾಗಿತ್ತು. ಅವರ ಮಗ ನಿಖಿಲ್ ಗೌಡ ಅವರ ಜಾಗ್ವಾರ್ ಚಿತ್ರಕ್ಕೆ ರಾಜಮೌಳಿ ಕುಟುಂಬದ ಕೊಡುಗೆ ಇದೆ. ಆದರೆ, ಸಿದ್ದರಾಮಯ್ಯ ಸರ್ಕಾರಕ್ಕೆ, ಕರ್ನಾಟಕಕ್ಕೆ ರಾಜಮೌಳಿ ಕೊಡುಗೆ ಏನು ಬಲ್ಲವರು ತಿಳಿಸಿ.

ಪದ್ಮ ಪ್ರಶಸ್ತಿ ವಿಜೇತರಲ್ಲಿ ಕನ್ನಡಿಗರು

ಪದ್ಮ ಪ್ರಶಸ್ತಿ ವಿಜೇತರಲ್ಲಿ ಕನ್ನಡಿಗರು

ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್, ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರಿಗೆ ಪ್ರಸಕ್ತ ಸಾಲಿನ ಪದ್ಮ ವಿಭೂಷಣ ನೀಡಲಾಗಿದ್ದರೆ 83 ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಡುವೆ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮಶ್ರೀ ಬದಲಿಗೆ ಪದ್ಮಭೂಷಣವಾದರೂ ಸಿಗಬೇಕಿತ್ತು ಎಂಬ ಕೂಗೆದ್ದಿದೆ. ಪದ್ಮಶ್ರೀ ಸಿಗಬಾರದಿತ್ತು ಎಂಬ ಇನ್ನೊಂದು ಗುಂಪು ಹೇಳುತ್ತಿದ್ದು ಚರ್ಚೆಗೆ ಸಾಮಾಜಿಕ ಜಾಲ ತಾಣಗಳು ವೇದಿಕೆ ಒದಗಿಸಿವೆ. [ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ]

ಸರಣಿ ಟ್ವೀಟ್ ಗಳ ಮೂಲಕ ಸ್ಪಷ್ಟನೆ ನೀಡಿದ ರಾಜಮೌಳಿ

ಸರಣಿ ಟ್ವೀಟ್ ಗಳ ಮೂಲಕ ಸ್ಪಷ್ಟನೆ ನೀಡಿದ ರಾಜಮೌಳಿ ನಾನು ಪ್ರಶಸ್ತಿ ಬಯಸಿರಲಿಲ್ಲ ಎಂದಿದ್ದಾರೆ. ರಜನಿ ಅವರಿಗೆ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As a Kannadiga I m unhappy with GoK for ignoring the talented directors Such as Girish Kasaravalli, P Sheshadri and others not recommending their names for Padma awards. why Rajamouli (though he is born in Raichur) who is more popular in Telugu Industry is preferred.
Please Wait while comments are loading...