BL Santosh: ಲಿಂಗಾಯತ, ಹಿಂದುಳಿದ ನಾಯಕತ್ವ ಮುಗಿಸಿದ ಸಂತೋಷ್‌ಗೆ ಚುನಾವಣೆ ಎದುರಿಸಲು ಭಯವೇಕೆ: ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದು, ಬಿಜೆಪಿಯ ಬಿಎಲ್ ಸಂತೋಷ್ ಅವರ ನಡೆಗಳ ಬಗ್ಗೆ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.
ಶುಕ್ರವಾರ ಮೈಸೂರಿನಲ್ಲಿ ನಡೆದ ಬಿಜೆಪಿಯ ಡಿಜಿಟಲ್ ಕಾರ್ಯಕರ್ತರ ಸಭೆಯಲ್ಲಿ ಹಳೇ ಮೈಸೂರು ಪ್ರದೇಶದಲ್ಲಿ ಬರುವ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲುವುದು ಮುಖ್ಯ. ಮುಂದಿನ ಸರ್ಕಾರದ ರಚನೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದರು. ಇದಕ್ಕೆ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.

ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ &" ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿಎಲ್ ಸಂತೋಷ್ ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ? ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಜನಬೆಂಬಲ ಪಡೆದು ಬರಲಿ ಎಂದು ಸವಾಲು ಹಾಕಿದೆ.
ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ &" ಹಿಂದುಳಿದ ನಾಯಕತ್ವವನ್ನು ಮುಗಿಸಿದ @blsanthosh ಎಂಬ ವ್ಯಕ್ತಿಗೆ ಚುನಾವಣೆ ಎದುರಿಸಲು ಭಯವೇಕೆ?
— Karnataka Congress (@INCKarnataka) April 22, 2023
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ.
ತಾಕತ್ತಿದ್ದರೆ ಚುನಾವಣೆಗೆ ಸ್ಪರ್ದಿಸಿ ಜನಬೆಂಬಲ ಪಡೆದು ಬರಲಿ.
ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ಜೋರಾದಂತೆ ಶುಕ್ರವಾರ ಮೈಸೂರಿನಲ್ಲಿ ಕರ್ನಾಟಕದ ಚುನಾವಣೆಯಲ್ಲಿ ಈಗ ಬಾಲ ಗೋಪಾಲರ ನೃತ್ಯ ನಡೆಯುತ್ತಿದೆ. ಏ.29ರ ನಂತರ ನಮ್ಮ ನಾಯಕ ನರೇಂದ್ರ ಮೋದಿ ಅವರು ರಂಗಪ್ರವೇಶ ಮಾಡಿದರೆ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಬಿಎಲ್ ಸಂತೋಷ್ ಅವರಿಗೆ ತಿರುಗೇಟು ನೀಡಿದೆ. ಈ ಹಿಂದೆಯೂ ಕೂಡ ಕಾಂಗ್ರೆಸ್ ಸಂತೋಷ್ ಅವರಿಗೆ ಚುನಾವಣೆಗೆ ನಿಂತು ತೋರಿಸುವಂತೆ ಸವಾಲು ಆಗಿತ್ತು. ಕಳೆದ ಏಪ್ರಿಲ್ 12ರಂದು ಕರ್ನಾಟಕ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿತ್ತು.
ಆಗಲೂ ಕಾಂಗ್ರೆಸ್, 'ಕನಕಪುರ & ವರುಣ ಕ್ಷೇತ್ರದಲ್ಲಿ ಬಿ. ಎಲ್ ಸಂತೋಷ್ & ಪ್ರಹ್ಲಾದ್ ಜೋಷಿ ಅವರನ್ನು ಸ್ಪರ್ಧೆಗೆ ಆಹ್ವಾನಿಸುತ್ತೇವೆ. ಪಂಥಾಹ್ವಾನ ಸ್ವೀಕರಿಸುವರೇ? ನಾಗಪುರದ ವಂಶದವರು ಇತರರನ್ನ ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ' ಎಂದು ವಾಗ್ದಾಳಿ ನಡೆಸಿತ್ತು.
'ಕೇಂದ್ರ ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ಬಿಎಲ್ ಸಂತೋಷ್ ಆಟಕ್ಕೆ ಬಿಎಸ್ ಯಡಿಯೂರಪ್ಪ ಬಲಿ. ನಾಗಪುರದ ಕರುಳು ಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಸಚಿವ ಪ್ರಹ್ಲಾದ್ ಜೋಶಿ ರಾಜ್ಯದ ಲಿಂಗಾಯತ ನಾಯಕರನ್ನು ಹೊಂಡಕ್ಕೆ ತಳ್ಳುವಲ್ಲಿ ಜಯಗಳಿಸಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ' ಎಂದು ಬಿಜೆಪಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು.












Click it and Unblock the Notifications