ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಸ್ಮೃತಿ ಆಧಾರದ ಸಮಾಜ ನಿರ್ಮಾಣದ ಪ್ರಯತ್ನ ನಡೆದಿತ್ತು

|
Google Oneindia Kannada News

ಬೆಂಗಳೂರು, ಜೂನ್ 04 : 'ಸಂವಿಧಾನವನ್ನು ಮನ:ಪೂರ್ವಕವಾಗಿ ಒಪ್ಪದೆ ಇದ್ದ ಹಿಂದೂ ಧರ್ಮದೊಳಗಿದ್ದ ಒಂದು ವರ್ಗ ಮನುಸ್ಮೃತಿ ಆಧಾರದಲ್ಲಿ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವುದು ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿಯೇ ಅವರು ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್, ಭಾರತದ ಸಂವಿಧಾನ, ಹಿಂದೂ ಧರ್ಮ, ಮೀಸಲಾತಿ ಮುಂತಾದ ವಿಚಾರಗಳ ಕುರಿತು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. 'ಬಾಯಿ ಬಡಾಯಿ ಮೂಲಕ ದಲಿತರ ಉದ್ದಾರ ಆಗುವುದಿಲ್ಲ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅಂಬೇಡ್ಕರ್ 'ನೀಲಿ' ಪ್ರತಿಮೆ ಈಗ ಪಂಜರದಲ್ಲಿ!ಅಂಬೇಡ್ಕರ್ 'ನೀಲಿ' ಪ್ರತಿಮೆ ಈಗ ಪಂಜರದಲ್ಲಿ!

'ಬಿಜೆಪಿ ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ. ಇದನ್ನು ಬೇಕಾದರೆ ಸವಾಲಾಗಿ ಸ್ವೀಕರಿಸಲಿ' ಎಂದು ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ ಸವಾಲು ಹಾಕಿದ್ದಾರೆ.

ರಾಜಕೀಯಕ್ಕಿಂತಲೂ ಅಂಬೇಡ್ಕರ್ ವಿಚಾರಧಾರೆ ಮುಖ್ಯ : ಜಾರಕಿಹೊಳಿರಾಜಕೀಯಕ್ಕಿಂತಲೂ ಅಂಬೇಡ್ಕರ್ ವಿಚಾರಧಾರೆ ಮುಖ್ಯ : ಜಾರಕಿಹೊಳಿ

'ಸ್ವತಂತ್ರ ಭಾರತದಲ್ಲಿ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಾ ಬಂದಿರುವುದು ಕಾಂಗ್ರೆಸ್. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನೂರಾರು ದಲಿತ ನಾಯಕರಿಗೆ ರಾಜಕೀಯ ಅವಕಾಶವನ್ನು ಕಲ್ಪಿಸಿ ಬೆಳೆಸಿದ್ದು ಕೂಡಾ ಕಾಂಗ್ರೆಸ್ ಪಕ್ಷ' ಎಂದು ಬಣ್ಣಿಸಿದ್ದಾರೆ.....

ಸ್ಮಶಾನದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಲು ವಿರೋಧಸ್ಮಶಾನದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಲು ವಿರೋಧ

ಈಗ ಎಲ್ಲರ ಬಾಯಿಯಲ್ಲಿಯೂ ಅವರದ್ದೆ ಜಪ

ಹಲವಾರು ದಶಕಗಳ ನಿರ್ಲಕ್ಷ್ಯದ ನಂತರ ಇತ್ತೀಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಎಲ್ಲರ ಪ್ರೀತಿ-ಅಭಿಮಾನ ಉಕ್ಕಿ ಹರಿಯತೊಡಗಿದೆ. ಈಗ ಎಲ್ಲರ ಬಾಯಿಯಲ್ಲಿಯೂ ಅವರದ್ದೇ ಹೆಸರಿನ ಜಪ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಅಂಬೇಡ್ಕರ್ ಬಯಸಿದ್ದೇನು?

ಸಿದ್ದರಾಮಯ್ಯ ಅವರು, 'ಹಿಂದೂ ಧರ್ಮದ ಸುಧಾರಣೆಯಾಗದೆ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ಸು ಕಾಣಲಾರದು ಎಂದು ಅವರು ಹೇಳುತ್ತಿದ್ದರು. ಹಿಂದೂ ಧರ್ಮವನ್ನು ಅದಕ್ಕೆ ಅಂಟಿಕೊಂಡ ರೋಗಗಳಾದ ಜಾತೀಯತೆ, ಮೂಢನಂಬಿಕೆ, ಕಂದಾಚಾರಗಳಿಂದ ಬಿಡುಗಡೆಗೊಳಿಸಬೇಕೆಂದು ಅಂಬೇಡ್ಕರ್ ಪ್ರಾಮಾಣಿಕವಾಗಿ ಬಯಸಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.

ಬೌದ್ಧ ಧರ್ಮಕ್ಕೆ ಸ್ಥಳಾಂತರಗೊಂಡರು

'ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ' ಎನ್ನುವ ಐತಿಹಾಸಿಕ ಹೇಳಿಕೆ ನೀಡಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಅಂಬೇಡ್ಕರರು ತಾವೇ ರಚಿಸಿರುವ ಸಂವಿಧಾನದ ಬುನಾದಿ ಮೇಲೆ ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಲು ಬಯಸಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸಂವಿಧಾನದ ಬಗ್ಗೆ ಗೌರವ ಇಲ್ಲ

ಮಾಜಿ ಸಿಎಂ ಸಿದ್ದರಾಮಯ್ಯ ಅವರು, 'ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಈಗಲೂ ಹಿಂದೂ ಧರ್ಮದೊಳಗಿರುವ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅದು ಸಾರುವ ಆಶಯಗಳಲ್ಲಿ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯದ ಸಿದ್ಧಾಂತ, ಜಾತಿನಾಶ, ಅಸ್ಪೃಶ್ಯತೆಯ ನಿರ್ಮೂಲನೆ ಯಾವುದೂ ಅವರಿಗೆ ಬೇಕಾಗಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಗೌರವದಿಂದ ನಡೆಸಿಕೊಂಡಿದೆ

'ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಈ ಗೌರವ ಮತ್ತು ನಂಬಿಕೆಯ ಕಾರಣದಿಂದಾಗಿಯೇ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರು ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿದ್ದರು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

English summary
Why Dr.B.R. Ambedkar quit Hinduis. Karnataka former Chief Minister Siddaramaiah tweet about Dr.B.R. Ambedkar and constitution of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X