ಬಿಟಿಎಂ ಲೇಔಟ್ : ಗೃಹ ಸಚಿವರ ವಿರುದ್ಧ ಯಾರಿಗೆ ಗೆಲುವು?

Posted By: Gururaj
Subscribe to Oneindia Kannada
   ರಾಮಲಿಂಗಾ ರೆಡ್ಡಿ ಬೆಂಗಳೂರಿನ ಬಿ ಟಿ ಎಂ ಕ್ಷೇತ್ರದಿಂದ ಸ್ಪರ್ಧೆ | Oneindia Kannada

   ಬೆಂಗಳೂರು, ಫೆಬ್ರವರಿ 12 : ಬೆಂಗಳೂರು ನಗರದ ಪ್ರಮುಖ ವಿಧಾನಸಭಾ ಕ್ಷೇತ್ರ ಬಿಟಿಎಂ ಲೇಔಟ್. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಷೇತ್ರದ ಶಾಸಕರು. 3ನೇ ಬಾರಿ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

   ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದಾರೆ ರಾಮಲಿಂಗಾ ರೆಡ್ಡಿ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಅವರು, ಕ್ಷೇತ್ರ ಪುನರ್ ವಿಂಗಡನೆ ಬಳಿಕ ಬಿಟಿಎಂ ಲೇಔಟ್ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಅಲ್ಲಿಯೂ ಎರಡು ಬಾರಿ ಗೆದ್ದಿದ್ದಾರೆ.

   ಚಾಮರಾಜಪೇಟೆಯಲ್ಲಿ ಜಮೀರ್ ಸೋಲಿಸಲು ಗೌಡರ ತಂತ್ರವೇನು?

   ರೆಡ್ಡಿ, ಒಕ್ಕಲಿಗರು, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದ ಮತದಾರರು ಕ್ಷೇತ್ರದಲ್ಲಿದ್ದಾರೆ. ರಾಮಲಿಂಗಾ ರೆಡ್ಡಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಪೈಪೋಟಿ ನೀಡುವವರು ಯಾರು? ಎಂಬುದು ಸದ್ಯದ ಪ್ರಶ್ನೆ.

   2013ರ ಚುನಾವಣೆಯಲ್ಲಿ ರಾಮಲಿಂಗಾ ರೆಡ್ಡಿ ಅವರು 69,712 ಮತ ಪಡೆದು ಜಯಗಳಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಎನ್.ಸುಧಾಕರ್ 20,664 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಜೆ.ರಮೇಶ್ ರೆಡ್ಡಿ 6,346 ಮತ ಪಡೆದಿದ್ದರು.

   ರಾಮಲಿಂಗಾ ರೆಡ್ಡಿಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಜಯನಗರ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯುವುದು ಖಚಿತವಾಗಿದೆ. ಆದ್ದರಿಂದ, ರಾಮಲಿಂಗಾ ರೆಡ್ಡಿ ಅವರು ಪಕ್ಕದ ಕ್ಷೇತ್ರದತ್ತಲೂ ಹೆಚ್ಚು ಗಮನಹರಿಸಬೇಕಾಗಿದೆ.

   ಸೋಲಿಸುವುದು ಸುಲಭವಲ್ಲ

   ಸೋಲಿಸುವುದು ಸುಲಭವಲ್ಲ

   ಬಿಟಿಎಂ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಬಿಜೆಪಿ ಮತ್ತು ಜೆಡಿಎಸ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ರಾಮಲಿಂಗಾ ರೆಡ್ಡಿ ಅವರು ಸಹ ಭಾರೀ ಪ್ರಭಾವ ಹೊಂದಿದ್ದಾರೆ. ಮಹತ್ವದ ಗೃಹ ಖಾತೆಯ ಹೊಣೆ ಹೊತ್ತುಕೊಂಡಿದ್ದಾರೆ. ಆದ್ದರಿಂದ, ಅವರನ್ನು ಸೋಲಿಸುವುದು ಸುಲಭದ ಮಾತಲ್ಲ.

   ಶಾಂತ ಸ್ವಭಾವದ ರಾಜಕಾರಣಿ

   ಶಾಂತ ಸ್ವಭಾವದ ರಾಜಕಾರಣಿ

   ರಾಮಲಿಂಗಾ ರೆಡ್ಡಿ ಅವರು ಶಾಂತ ಸ್ವಭಾವದ ರಾಜಕಾರಣಿ. ಕ್ಷೇತ್ರದಲ್ಲಿ ಉತ್ತಮ ಜನ ಸಂಪರ್ಕ ಹೊಂದಿದ್ದಾರೆ. ಬಲಿಷ್ಠ ಕಾರ್ಯಕರ್ತರ ಪಡೆ ಅವರ ಜೊತೆ ಇದೆ. ಹಾಲಿ ಪ್ರಭಾವಿ ಸಚಿವರು ಎಂಬುದು ಚುನಾವಣೆಯಲ್ಲಿ ಸಹಕಾರಿಯಾಗಲಿದೆ.

   ಬಿಜೆಪಿ ಅಭ್ಯರ್ಥಿ ಯಾರು?

   ಬಿಜೆಪಿ ಅಭ್ಯರ್ಥಿ ಯಾರು?

   ಬಿಜೆಪಿ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದಾರೆ. ಸುಬ್ಬಾರೆಡ್ಡಿ ಅವರ ಪುತ್ರ ವಿವೇಕ್ ರೆಡ್ಡಿ ಪ್ರಮುಖ ಆಕಾಂಕ್ಷಿ. ಶ್ರೀಧರ್, ಜಯದೇವ್ ಅವರು ಟಿಕೆಟ್ ರೇಸ್‌ನಲ್ಲಿದ್ದಾರೆ. ಜನಾರ್ದನ ರೆಡ್ಡಿ ಅವರ ಸೋದರ ಸಂಬಂಧಿಯೊಬ್ಬರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.

   ಜೆಡಿಎಸ್‌ ಅಭ್ಯರ್ಥಿ ಯಾರು?

   ಜೆಡಿಎಸ್‌ ಅಭ್ಯರ್ಥಿ ಯಾರು?

   ಜೆಡಿಎಸ್‌ ಪಕ್ಷದಿಂದ ಬಿಬಿಎಂಪಿ ಸದಸ್ಯರಾದ ದೇವದಾಸ್ ಅವರು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಡೆಗಣಿಸುವಂತಿಲ್ಲ.

   ಮೂರು ಪಕ್ಷಗಳ ಬಲಾಬಲ

   ಮೂರು ಪಕ್ಷಗಳ ಬಲಾಬಲ

   ಪ್ರಭಾವಿ ಸಚಿವರು ಹಾಲಿ ಶಾಸಕರು ಎಂಬುದು ಕಾಂಗ್ರೆಸ್‌ಗೆ ಸಹಕಾರಿಯಾಗಿದೆ. ನರೇಂದ್ರ ಮೋದಿ ಅವರ ಅಲೆ, ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿಗೆ ಕ್ಷೇತ್ರ ಒಲಿಯಬಹುದಾಗಿದೆ. ಜೆಡಿಎಸ್ ತಂತ್ರವೇನು? ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Who will win BTM Layout assembly constituency, Bengaluru. Home minister of Karnataka Ramalinga Reddy sitting MLA of the constituency.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ