ಮೇಟಿ ರಾಸಲೀಲೆ ವಿಡಿಯೋ ಹಿಂದಿನ ರಹಸ್ಯವೇನು?

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: ಎಚ್ ವೈ ಮೇಟಿ ಅವರು ಸೆಕ್ಸ್ ವಿಡಿಯೋದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಗೊತ್ತಿರಬಹುದು. ಆದರೆ, ಈ ವಿಡಿಯೋ ಶೂಟಿಂಗ್ ಹಿಂದೆ ಓರ್ವ ಮಹಿಳಾ ರಾಜಕಾರಣಿ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಇದ್ದಾರೆ ಎಂಬ ಸತ್ಯ ಬಹಿರಂಗಗೊಂಡಿದೆ.

ಎಚ್ ವೈ ಮೇಟಿ ಅವರ ರಾಸಲೀಲೆಯನ್ನು ಚಿತ್ರೀಕರಿಸಿದ್ದು ಗನ್ ಮ್ಯಾನ್ ಸುಭಾಷ್, ಈಗ ಆತ ನಾಪತ್ತೆಯಾಗಿದ್ದಾನೆ ಎಂಬುದಷ್ಟೇ ಸತ್ಯವಲ್ಲ,

ಈ ವಿಡಿಯೋ ಹಿಂದೆ ಹಿಡನ್ ಕೆಮೆರಾ ಶಕ್ತಿಗಳಿದ್ದು, ರಾಜಕಾರಣಿಗಳು, ಪೊಲೀಸರು ಹಾಗೂ ಮಾಧ್ಯಮದವರ ಸಹಕಾರ, ಸಂಯೋಜನೆ ಮೂಲಕ ಕರ್ನಾಟಕದ ಜನತೆಯ ಮುಂದೆ ಮೇಟಿ ರಾಸಲೀಲೆ ಪ್ರಸಾರವಾಗಲು ಸಾಧ್ಯವಾಗಿದೆ ಎಂದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ.

ಡಿಸೆಂಬರ್ 12 ರಂದು ಅಬಕಾರಿ ಸಚಿವ ಎಚ್ ವೈ ಮೇಟಿ ಅವರ ವಿಡಿಯೋ ಪ್ರಸಾರ ಮಾಡಿದ ಚಾನೆಲ್ ಗಳಿಗೆ ವಿಡಿಯೋ ನೀಡಿದ್ದು ಯಾರು? ಯಾರೆಲ್ಲ ಈ ವಿಡಿಯೋ ಬಹಿರಂಗವಾಗಲು ಸಹಕರಿಸಿದ್ದಾರೆ? ವಿಡಿಯೋ ಬಹಿರಂಗವಾಗದಂತೆ ಮೇಟಿ ಅವರು ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಕೂಡಾ ವಿಫಲರಾಗಿದ್ದು ಏಕೆ? ಎಂಬೆಲ್ಲಾ ಪ್ರಶ್ನೆಗಳಿಗೆ ಸಿಐಡಿ ಉತ್ತರ ಕಂಡು ಕೊಂಡಿದೆ.

ಆರ್ ಟಿಐ ಕಾರ್ಯಕರ್ತರ ನೆರವು

ಆರ್ ಟಿಐ ಕಾರ್ಯಕರ್ತರ ನೆರವು

ಗನ್ ಮ್ಯಾನ್ ಬಳಸಿಕೊಂಡು ಹಿಡನ್ ಕೆಮರಾವನ್ನು ಮೇಟಿ ಅವರಿದ್ದ ಕೋಣೆಯಲ್ಲಿ ಇರಿಸಲಾಗಿದ್ದು ಹಲವರಿಗೆ ತಿಳಿದಿರುವ ಸತ್ಯ. ಅದರೆ, ಸಿಐಡಿ ತನಿಖೆ ಮುಂದುವರೆಸುತ್ತಿದ್ದಂತೆ ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಆರ್ ಟಿಐ ಕಾರ್ಯಕರ್ತ ಈ ವಿಡಿಯೋ ತುಣುಕು ಬಹಿರಂಗ ಮಾಡುವ ಹೊಣೆ ಹೊತ್ತಿದ್ದರು ಎಂದು ತಿಳಿದು ಬಂದಿದೆ. ಮೇಟಿ ರಾಸಲೀಲೆ ವಿಡಿಯೋ ಹಿಂದಿನ ರಹಸ್ಯವೇನು?
ರಾಜಕಾರಣಿಗೆ ಅರ್ ಟಿಐ ಕಾರ್ಯಕರ್ತನಿಂದ ಕರೆ
ಕರ್ನಾಟಕದ ವಿರೋಧ ಪಕ್ಷದಲ್ಲಿರುವ ಪ್ರಭಾವಿ ಮಹಿಳಾ ರಾಜಕಾರಣಿಯೊಬ್ಬರಿಗೆ ಆರ್ ಟಿಐ ಕಾರ್ಯಕರ್ತ 12 ಬಾರಿ ಕರೆ ಮಾಡಿದ್ದರ ಬಗ್ಗೆ ಪೂರ್ಣ ವಿವರ ಸಿಐಡಿಗೆ ಲಭ್ಯವಾಗಿದೆ.ಈ ಕಾಲ್ ರೆಕಾರ್ಡ್ ಗಳ ಮೂಲಕ ವಿಡಿಯೋ ಚಿತ್ರೀಕರಣದ ಬಳಿಕ ಕೈಗೊಳ್ಳಬೇಕಾದ ಕ್ರಮ, ಪ್ರಚಾರ ಮಾಡುವುದರ ಬಗ್ಗೆ ಮಾತುಕತೆ ವಿವರ ಸಿಗಲಿದೆ.

ಮಹಿಳಾ ಪೊಲೀಸ್ ಅಧಿಕಾರಿ ಪಾತ್ರವೇನು?

ಮಹಿಳಾ ಪೊಲೀಸ್ ಅಧಿಕಾರಿ ಪಾತ್ರವೇನು?

ಮೇಟಿ ಅವರನ್ನು ಹಳ್ಳಕ್ಕೆ ಕೆಡವಲು ರೂಪಿಸಿದ್ದ ಸಂಚಿನಲ್ಲಿ ಈ ಮಹಿಳಾ ರಾಜಕಾರಣಿ ಹಾಗೂ ಆರ್ ಟಿಐ ಕಾರ್ಯಕರ್ತ ನಡುವೆ ಈ ಒಪ್ಪಂದ ಏರ್ಪಡಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನೆರವು ನೀಡಿದ್ದರು. ಮಹಿಳಾ ಅಧಿಕಾರಿಯವರೇ ಆರ್ ಟಿಐ ಕಾರ್ಯಕರ್ತನನ್ನು ರಾಜಕಾರಣಿಗೆ ಪರಿಚಯಿಸಿದ್ದರು. ನಂತರ ಎಲ್ಲರೂ ಸೇರಿ, ಯೋಜನೆಯಂತೆ ವಿಡಿಯೋ ಮಾಡಿದ್ದಾರೆ.

ವಿಡಿಯೋ ಮಾಡಿದ್ದು ಬೆದರಿಸಲು ಮಾತ್ರ

ವಿಡಿಯೋ ಮಾಡಿದ್ದು ಬೆದರಿಸಲು ಮಾತ್ರ

ಇಷ್ಟಕ್ಕೂ ವಿಡಿಯೋ ಬಹಿರಂಗವಾಗುವುದು ಯಾರಿಗೂ ಬೇಕಿರಲಿಲ್ಲ. ವಿಡಿಯೋ ಬಳಸಿಕೊಂಡು ಮೇಟಿ ಅವರನ್ನು ಬೆದರಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಅದರೆ, ವಿಡಿಯೋ ಬಹಿರಂಗವಾಗಿ, ಮೇಟಿ ರಾಜೀನಾಮೆ ನೀಡಿಯಾಗಿದೆ. ಈಗ ಸಿಐಡಿ ತನಿಖೆ ಅಂತಿಮ ಹಂತದಲ್ಲಿದ್ದು, ಈ ವಿಡಿಯೋ ಹಿಂದಿನ ರಹಸ್ಯ ಎಷ್ಟು ಪ್ರಮಾಣದಲ್ಲಿ ಬಹಿರಂಗವಾಗಲಿದೆ ಕಾದುನೋಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Who was behind Meti's tape?
English summary
A woman political leader and a former police officer are under the scanner for allegedly planting a camera in former minister, HY Meti's residence who resigned after a sex tape became public. Informed sources tell OneIndia that several others too are behind planting the hidden camera in the former minister's house.
Please Wait while comments are loading...