• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾಹದಿಂದ ವಾಹನ ಕಳೆದುಕೊಂಡವರು ಈಗಲೇ ಇನ್ಸುರೆನ್ಸ್‌ ಕ್ಲೇಮ್‌ಗೆ ಅರ್ಜಿ ಹಾಕಿ

By Manjunatha
|

ಕೊಡಗು, ಆಗಸ್ಟ್ 20: ಪ್ರವಾಹಕ್ಕೆ ಸಿಕ್ಕು ವಾಹನ ಹಾಳಾಗಿದ್ದರೆ, ಅಥವಾ ಕಳೆದು ಹೋಗಿದ್ದರೆ ತಡ ಮಾಡದೆ ಇನ್ಸುರೆನ್ಸ್‌ ಸಂಸ್ಥೆಗೆ ಮಾಹಿತಿ ನೀಡಿ, ಕೂಡಲೇ ಇನ್ಸುರೆನ್ಸ್‌ ಕ್ಲೇಮ್‌ಗೆ ಅರ್ಜಿ ಹಾಕಿ, ತಡ ಮಾಡಬೇಡಿ.

ಹೌದು, ಇನ್ಸುರೆನ್ಸ್‌ ಇರುವ ವಾಹನಗಳು ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದರೆ, ಅಥವಾ ನೀರು, ಮಣ್ಣು ತುಂಬಿ ಕೆಟ್ಟು ಹೋಗಿ ಮತ್ತೆ ಉಪಯೋಗಕ್ಕೆ ಬಾರದಂತಾಗಿದ್ದರೆ ಈಗಲೇ ಇನ್ಸುರೆನ್ಸ್‌ ಸಂಸ್ಥೆಗೆ ಮಾಹಿತಿ ನೀಡಿ, ಕ್ಲೇಮ್‌ಗೆ ಅರ್ಜಿ ಹಾಕಿ, ತಡಮಾಡಿದರೆ ಇನ್ಸುರೆನ್ಸ್‌ ಕೈತಪ್ಪಬಹುದು ಜಾಗೃತೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಜೀವ ಹಾನಿಯಾಗಿದ್ದರೂ ಸಹ ತಡ ಮಾಡದೇ ಇನ್ಸುರೆನ್ಸ್‌ ಸಂಸ್ಥೆಗೆ ಮಾಹಿತಿ ನೀಡಿ, ಕ್ಲೇಮ್‌ ಮಾಡಿಸಿಕೊಂಡುಬಿಡಿ, ತಡ ಮಾಡಿದಲ್ಲಿ ನಷ್ಟವಾಗುವ ಸಂಭವ ಇದೆ.

ತಮಿಳುನಾಡಿನಲ್ಲಿ ಅರ್ಜಿಗಳನ್ನು ರದ್ದು ಮಾಡಿದ್ದ ವಿಮಾ ಸಂಸ್ಥೆಗಳು

ತಮಿಳುನಾಡಿನಲ್ಲಿ ಅರ್ಜಿಗಳನ್ನು ರದ್ದು ಮಾಡಿದ್ದ ವಿಮಾ ಸಂಸ್ಥೆಗಳು

ಕಳೆದ ಬಾರಿ ತಮಿಳುನಾಡಿನಲ್ಲಿ ಪ್ರವಾಹವಾದಾಗ ನೂರಾರು ಕ್ಲೇಮ್‌ ಅರ್ಜಿಗಳನ್ನು, ತಡವಾಗಿ ಅರ್ಜಿ ಹಾಕಿದ ಕಾರಣಕ್ಕೆ ವಿಮಾ ಸಂಸ್ಥೆಗಳು ರದ್ದು ಮಾಡಿಬಿಟ್ಟಿದ್ದವು, ಹಾಗಾಗಿ ಈಗಲೇ ಅರ್ಜಿ ಹಾಕುವುದು ಉತ್ತಮ.

ಕೊಡಗಿಗೆ ಇ-ಟಾಯ್ಲೆಟ್ಸ್ ಕಳಿಸಿಕೊಡಿ ಪ್ಲೀಸ್: ಸಿಟಿ ರವಿ ಮನವಿ

ವಾಹನ ಸ್ಟಾರ್ಟ್‌ ಮಾಡುವುದು ಬೇಡವೇ ಬೇಡ

ವಾಹನ ಸ್ಟಾರ್ಟ್‌ ಮಾಡುವುದು ಬೇಡವೇ ಬೇಡ

ಇನ್ಸುರೆನ್ಸ್‌ ಕ್ಲೇಮ್‌ನಲ್ಲಿ ಮಾಹಿತಿ ತುಂಬಬೇಕಾದರೂ ಬಹಳ ಜಾಗೃತೆ ವಹಿಸುವುದು ಅವಶ್ಯಕ. ಅಷ್ಟೆ ಅಲ್ಲ, ಕಾರಿನ ಒಳಕ್ಕೆ ನೀರು ನುಗ್ಗಿದ್ದರೆ, ನೀರು ಖಾಲಿ ಆದ ಮೇಲೆ ಅದನ್ನು ಸ್ಟಾರ್ಟ್ ಮಾಡುವ ಪ್ರಯತ್ನವೂ ಬೇಡ, ನೀವು ಹಾಗೆ ಮಾಡಿದಲ್ಲಿ ಇನ್ಸುರೆನ್ಸ್‌ ಕಂಪೆನಿ ಕ್ಲೇಮ್ ಮಾಡಲು ಒಪ್ಪದೇ ಇರಬಹುದು.

ಮಂಗಳೂರಿನ ಈ ಯುವಕನಿಗೆ ತನ್ನ ಸಾಕುನಾಯಿಯ ಮೇಲಿರುವ ಪ್ರೀತಿಗೆ ನಿಜಕ್ಕೂ ಮೆಚ್ಚಲೇಬೇಕು

ಇನ್ಸುರೆನ್ಸ್‌ ಏಜೆಂಟ್‌ಗೆ ಮಾಹಿತಿ ನೀಡುವಾಗ ಎಚ್ಚರ

ಇನ್ಸುರೆನ್ಸ್‌ ಏಜೆಂಟ್‌ಗೆ ಮಾಹಿತಿ ನೀಡುವಾಗ ಎಚ್ಚರ

ಬೈಕ್ ಗೂ ಇದೇ ನೀತಿ ಅನ್ವಯವಾಗುತ್ತದೆ. ನೀರಲ್ಲಿ ಮುಳುಗಿ ಹಾಳಾದ ಬೈಕ್ ಅನ್ನು ನೀರು ಇಳಿದ ಮೇಲೆ ಮತ್ತೆ ಸ್ಟಾರ್ಟ್ ಮಾಡುವ ಯತ್ನ ಬೇಡವೇ ಬೇಡ. ಇನ್ಸುರೆನ್ಸ್‌ ಏಜೆಂಟ್‌ಗೆ ಮಾಹಿತಿ ನೀಡುವಾಗಲೂ ತಾವು ಗಾಡಿಯನ್ನು ಸ್ಟಾರ್ಟ್ ಮಾಡುವ ಯತ್ನ ಮಾಡಲಿಲ್ಲವೆಂದೇ ಹೇಳಿ. ಕ್ಲೇಮ್‌ಗೆ ಇದು ಸಹಾಯವಾಗುತ್ತದೆ.

ಕೇರಳಕ್ಕೆ ಕನಿಷ್ಟ 500 ಕೋಟಿ ನೀಡಬೇಕು ವಿಮಾ ಸಂಸ್ಥೆ

ಕೇರಳಕ್ಕೆ ಕನಿಷ್ಟ 500 ಕೋಟಿ ನೀಡಬೇಕು ವಿಮಾ ಸಂಸ್ಥೆ

ಕೇರಳದಲ್ಲಿ ಈಗಾಗಲೇ ಸಾವಿರಾರು ಇನ್ಸುರೆನ್ಸ್‌ ಕ್ಲೇಮ್‌ ಅಪ್ಲಿಕೇಶನ್‌ಗಳು ವಿಮಾ ಸಂಸ್ಥೆಗಳಿಗೆ ಹೋಗಿವೆಯಂತೆ. ಕೇರಳ ಒಂದಕ್ಕೆ ವಾಹನ, ಜೀವ ಸೇರಿ ವಿಮಾ ಸಂಸ್ಥೆಗಳು ಕನಿಷ್ಟ 500 ಕೋಟಿ ಇನ್ಸುರೆನ್ಸ್‌ ಕ್ಲೇಮ್ ನೀಡಬೇಕಾಗಬಹುದು ಎಂದು ವಿಮಾ ತಜ್ಞರು ಹೇಳುತ್ತಾರೆ.

ಕ್ಲೇಮ್‌ ಅರ್ಜಿ ತುಂಬುವ ಮುನ್ನಾ ತಜ್ಞರನ್ನು ಸಂಪರ್ಕಿಸಿ

ಕ್ಲೇಮ್‌ ಅರ್ಜಿ ತುಂಬುವ ಮುನ್ನಾ ತಜ್ಞರನ್ನು ಸಂಪರ್ಕಿಸಿ

ಕೊಡಗಿನಲ್ಲೂ ಸಹ ಹಲವು, ವಾಹನಗಳು ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದೆ, ಹಲವು ನೀರಲ್ಲಿ ಮುಳುಗಿ, ಮಣ್ಣಿನ ರಾಡಿಯಿಂದಾಗಿ ಮತ್ತೆ ರಸ್ತೆಗೆ ಇಳಿಯದಂತಾಗಿವೆ. ಆದರೆ ಇನ್ಸುರೆನ್ಸ್‌ ಇದ್ದವರು ಸಹ ಜಾಗೃತೆಯಾಗಿ ಕ್ಲೇಮ್ ಅಪ್ಲಿಕೇಶನ್ ಹಾಕಿದರೆ ಮಾತ್ರವೇ ವಿಮಾ ಹಣ ಕೈಸೇರುತ್ತದೆ. ಕ್ಲೇಮ್‌ಗೆ ಅರ್ಜಿ ಹಾಕುವ ಮುನ್ನಾ ತಜ್ಞರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡರೆ ಒಳಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People who ever loss their vehicle in floods soon inform your insurance company and claim your policy. Be care full while filling the claim form and also while giving information to Insurance agent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more