ನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಸಿದ್ದು ಯತ್ನ: ದೇವೇಗೌಡ ಗರಂ

Posted By: Nayana
Subscribe to Oneindia Kannada

ಚಕ್ಕಮಗಳೂರು, ಡಿಸೆಂಬರ್ 08 : ದೇವೇಗೌಡರು ಯಾರ ಪರ ನಿಲುವು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ಕೆಂಡಮಂಡಲವಾಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧದ ಸಿಟ್ಟನ್ನೆಲ್ಲ ಹೊರಹಾಕಿದ ದೇವೇಗೌಡರು

ಚಿಕ್ಕಮಗಳೂರಿನ ವಸತಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ದೇವೇಗೌಡ ಏನು ಎಂದು ತಿಳಿದುಕೊಳ್ಳಲಿ. ವಾಟ್ ಈಸ್ ದೇವೇಗೌಡ ಎಂದು ಮುಂದೆ ನಡೆಯುವ ಫೈಟಿಂಗ್ ಇಂದ ಗೊತ್ತಾಗುತ್ತದೆ. ಕೆಸಿ ರೆಡ್ಡಿಯಿಂದ ಇಲ್ಲಿವರೆಗೂ ಆಗಿದ್ದ ಸಿಎಂ ಎಲ್ಲರೂ ಭ್ರಷ್ಟರೆ. ಸಿಎಂ ಸಿದ್ದರಾಮಯ್ಯ ಮಾತ್ರ ಉತ್ತಮ. ಆಗಾದ್ರೆ ಈ ಹಿಂದೆ ಅಧಿಕಾರಿ ನಡೆಸಿದ ನಾವೆಲ್ಲ ಭ್ರಷ್ಟರೆ ? ಮಾಜಿ ಪ್ರಧಾನಿ ವ್ಯಂಗ್ಯ ವಾಡಿದ್ದಾರೆ.

Who am I? you will see: Devegowda warns Siddramaiah

ಕುಮಾರಸ್ವಾಮಿ ಎರಡು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಮಾತನಾಡಿ, ಕುಮಾರಸ್ವಾಮಿ ರಾಮನಗರದಲ್ಲಿ ಸ್ಪರ್ಧಿಸಲಿ, ಎರಡು ಕಡೆ ನಿಂತರೆ ಜನರಿಗೆ ಗೊಂದಲ ಉಂಟಾಗುತ್ತೆ. ಹಾಗಾದರೆ 2018 ರ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಕಿಂಗ್ ಮೇಕರ್ ಆಗುವ ವಿಚಾರ.

ಮೇ 9 ಕ್ಕೆ ಕಿಂಗ್ ಯಾರು, ಕಿಂಗ್ ಮೇಕರ್ ಯಾರು ಎಂದು ಗೊತ್ತಾಗುತ್ತದೆ. ರಾಜ್ಯದಲ್ಲಿ ಧರ್ಮಸಿಂಗ್ ಗೆ ಬೆಂಬಲ ನೀಡಿದ್ದೆವು. ನನ್ನ ಮಗ ಬಿಜೆಪಿ ಸಾಹವಾಸ ಮಾಡಿ ನೋಡಿದಾನೆ. ಜನ ಬೆಂಬಲ ಕೊಡಲಿಲ್ಲ ಅಂದರೆ ವಿರೋಧ ಪಕ್ಷವಾಗಿ ಕೆಲಸ ಮಾಡ್ತೇವೆ. ಯಾರ ಜೊತೆಯಲ್ಲೂ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Prime Minister HD Deve gowda expressed displeasure about comment made by chief minister Siddaramaiah on casteism and warned that the latter will see the fact soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ