ಕರ್ನಾಟಕ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಕರಾರುವಾಕ್ ಫಲಿತಾಂಶ ನೀಡಿದ್ದ 5 ವಾಹಿನಿಗಳು
ಇದೇ ಭಾನುವಾರ (ಮೇ 19) ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಹದಿನೇಳನೇ ಲೋಕಸಭೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಆ ಮೂಲಕ ಏಪ್ರಿಲ್ 11ರಿಂದ ಆರಂಭವಾದ ಏಳು ಹಂತದ ಮತದಾನ ಸಂಪನ್ನಗೊಳ್ಳಲಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕೊನೆಯ ಹಂತ ಎನ್ನುವುದು ಒಂದು ಕಡೆಯಾದರೆ, ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿಯ ಕ್ಷೇತ್ರದ ಚುನಾವಣೆಯೂ ಅಂದೇ ನಡೆಯಲಿದೆ. ಬೆಳಗ್ಗೆ ಏಳರಿಂದ ಸಂಜೆ ಆರು ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಇವೆಲ್ಲಕ್ಕಿಂತಲೂ ಕುತೂಹಲ ಜನಸಾಮಾನ್ಯರಿಗೆ ಇರುವುದು ಅಂದು ಪ್ರಕಟಗೊಳ್ಳುವ ಎಕ್ಸಿಟ್ ಪೋಲ್ ಯಾನೆ ಮತಗಟ್ಟೆ ಸಮೀಕ್ಷೆ.
ದೇಶದ ಇದುವರೆಗಿನ ಇತಿಹಾಸದಲ್ಲಿ ಎಕ್ಸಿಟ್ ಪೋಲ್ ಗಳು ಎಷ್ಟು ಕರಾರುವಕ್ಕಾದ ಫಲಿತಾಂಶವನ್ನು ನೀಡಿವೆ ಎನ್ನುವುದು ನಂತರದ ವಿಚಾರವಾದರೂ, ಜನರಿಗೆ ಅದರ ಮೇಲಿನ ಕುತೂಹಲ ಅಂತಿಂದಲ್ಲ.
ಒನ್ ಇಂಡಿಯಾ ಕನ್ನಡ ಕೂಡಾ, ವಿವಿಧ ವಾಹಿನಿ/ಸಂಸ್ಥೆಗಳು ನೀಡುವ ಎಕ್ಸಿಟ್ ಪೋಲ್ ಗಳ ಫಲಿತಾಂಶವನ್ನು ಭಾನುವಾರ ಸಂಜೆ 5.30ರಿಂದ ಲೈವ್ ನಲ್ಲಿ ಕೊಡಲಿದೆ... please stay tuned.. ಈ ನಡುವೆ, ಕಳೆದ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಬಂದಿದ್ದ ಸಮೀಕ್ಷಾ ಫಲಿತಾಂಶಗಳು ಏನು, actual ರಿಸಲ್ಟ್ ಬಂದಿದ್ದೇನು ಎನ್ನುವುದರ ಬಗ್ಗೆ ಒಂದು ಝಲಕ್.

ಕರ್ನಾಟಕ ಅಸೆಂಬ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆ
ಒಟ್ಟು ಹದಿನೈದು ಸಂಸ್ಥೆಗಳು ಒಂದಕ್ಕೊಂದು ಜಂಟಿಯಾಗಿ ಕರ್ನಾಟಕ ಅಸೆಂಬ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ನಡೆಸಿದ್ದವು. ಅದರಲ್ಲಿ ಕೆಲವೊಂದು ಬಹುತೇಕ ಕರಾರುವಕ್ಕಾದ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದ್ದವು. ಅದೇ ಸಂಸ್ಥೆಗಳು ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಎಕ್ಸಿಟ್ ಪೋಲ್ ಅನ್ನೂ ನಡೆಸಲಿದೆ. ಇದನ್ನಾಧರಿಸಿ, ಯಾವ ಸಂಸ್ಥೆ ನೀಡುವ ಫಲಿತಾಂಶದ ಮೇಲೆ ನಿಮಗೆ ನಂಬಿಕೆ ಎನ್ನುವುದು ಓದುಗರ ವಿವೇಚನೆಗೆ ಬಿಟ್ಟ ವಿಚಾರ.

ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಜಸ್ಟ್ ಮಿಸ್ ಆಗಿತ್ತು
ಅಧಿಕೃತ ಫಲಿತಾಂಶ
ಒಟ್ಟು ಸ್ಥಾನಗಳು : 224
ಬಿಜೆಪಿ : 104
ಕಾಂಗ್ರೆಸ್ : 80
ಜೆಡಿಎಸ್ : 37
ಬಿಎಸ್ಪಿ : 01
ಕೆಪಿಜೆಪಿ : 01
ಪಕ್ಷೇತರ : 01

ರಿಪಬ್ಲಿಕ್ ಟಿವಿ - ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ
ರಿಪಬ್ಲಿಕ್ ಟಿವಿ - ಜನ್ ಕೀ ಬಾತ್
ಬಿಜೆಪಿ : 105
ಕಾಂಗ್ರೆಸ್ : 78
ಜೆಡಿಎಸ್ : 37
ಇತರರು : 02
ನ್ಯೂಶ್ ನೇಶನ್
ಬಿಜೆಪಿ : 107
ಕಾಂಗ್ರೆಸ್ : 73
ಜೆಡಿಎಸ್ : 38
ಇತರರು : 04

ನ್ಯೂಸ್ ಎಕ್ಸ್ - ಸಿ ಎನ್ ಎಕ್ಸ್ ಎಕ್ಸಿಟ್ ಪೋಲ್
ಬಿಜೆಪಿ : 106
ಕಾಂಗ್ರೆಸ್ : 75
ಜೆಡಿಎಸ್ : 37
ಇತರರು : 04
ಇಂಡಿಯಾ ಟುಡೇ - ಏಕ್ಸಿಸ್ ಮೈ ಇಂಡಿಯಾ
ಬಿಜೆಪಿ : 85
ಕಾಂಗ್ರೆಸ್ : 111
ಜೆಡಿಎಸ್ : 26
ಇತರರು : 00

ಇಂಡಿಯಾ ಟಿವಿ - ವಿಎಂಆರ್
ಬಿಜೆಪಿ : 94
ಕಾಂಗ್ರೆಸ್ : 97
ಜೆಡಿಎಸ್ : 28
ಇತರರು : 03
ಎಬಿಪಿ ನ್ಯೂಸ್ - ಸಿವೋಟರ್
ಬಿಜೆಪಿ : 110
ಕಾಂಗ್ರೆಸ್ : 88
ಜೆಡಿಎಸ್ : 24
ಇತರರು : 02

ಟೈಮ್ಸ್ ನೌ - ವಿಎಂಆರ್
ಬಿಜೆಪಿ : 87
ಕಾಂಗ್ರೆಸ್ : 97
ಜೆಡಿಎಸ್ : 35
ಇತರರು : 03
ಟೈಮ್ಸ್ ನೌ, ಟುಡೇಸ್ ಚಾಣಕ್ಯ
ಬಿಜೆಪಿ : 120
ಕಾಂಗ್ರೆಸ್ : 73
ಜೆಡಿಎಸ್ : 26
ಇತರರು : 03
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications