ಕಾವೇರಿ ವಿಚಾರ: ಮತ್ತೆ ಆಕ್ಷೇಪ ಸಲ್ಲಿಸಿದ ತಮಿಳುನಾಡು, ಕರ್ನಾಟಕ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 23: ಶುಕ್ರವಾರ ಬೆಳಗ್ಗೆ 11 ಗಂಟೆ ನಂತರ ನಮ್ಮ ಜನಪ್ರತಿನಿಧಿಗಳ ಇಷ್ಟು ದಿನದ ಕಾಳಜಿಯ ನಿಜರೂಪ ದರ್ಶನ ಆಗುತ್ತದೆ. ಇದನ್ನು ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ ಶುಕ್ರವಾರ ಆರಂಭವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಬಿಡಬೇಕೋ ಬೇಡವೋ ಎಂಬ ನಿರ್ಣಯ ಕೈಗೊಳ್ಳಲಾಗುವುದು.

ಕ್ಷಣ-ಕ್ಷಣದ ಬೆಳವಣಿಗೆ, ಯಾವ ಮುಖಂಡರು ಏನೆಂದರು ಎಂಬ ವಿವರಗಳನ್ನು ಇಲ್ಲಿ ನಿಮಗೆ ತಿಳಿಸಲಾಗುವುದು.

ಸುಪ್ರೀಂ ಕೋರ್ಟ್ ತೀರ್ಪಿನಂತೆ, ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಿಸಿರುವ ಪ್ರಕಾರ ಕರ್ನಾಟಕವು ಇನ್ನೂ 17 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು ಎಂದು ಸುಪ್ರೀಕೋರ್ಟ್ ನಲ್ಲಿ ತಮಿಳು ನಾಡು ಆಕ್ಷೇಪವನ್ನು ಸಲ್ಲಿಸಿದೆ.

ತಮಿಳುನಾಡು ಆಕ್ಷೇಪ ಸಲ್ಲಿಸಿದ ನಂತರ ಕರ್ನಾಟಕವೂ ಆಕ್ಷೇಪ ಸಲ್ಲಿಸಿದೆ. ಕೇವಲ 27.6 ಟಿಎಂಸಿ ಅಡಿ ನೀರು ಮಾತ್ರ ಇದೆ. ರಾಜ್ಯದ ಜನರಿಗೆ 26.33 ಟಿಎಂಸಿ ಅಡಿ ನೀರು ಕುಡಿಯುವುದಕ್ಕೆ ಬೇಕು ಎಂದು ತಿಳಿಸಿದೆ.

*ನಮ್ಮ ಮೊದಲ ಆದ್ಯತೆ ಕುಡಿಯುವ ನೀರು ಒಅದಗಿಸೋದು. ತಮಿಳುನಾಡು ನೀರು ಕೇಳುತ್ತಿರೋದು ಸಾಂಬಾ ಬೆಳೆಗೆ. ನಮಗೆ ಕುಡಿಯುವುದಕ್ಕೆ ನೀರು ಬೇಕು. ಅದಕ್ಕಾಗಿ ನೀರು ಇಟ್ಟುಕೊಳ್ಳಬೇಕು.

ನಮಗೆ ನ್ಯಾಯಾಂಗದ ಬಗ್ಗೆ ತುಂಬ ಗೌರವ ಇದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸೋದು ನಮ್ಮ ಉದ್ದೇಶವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ.

* ನಾವು ಕುಡಿಯುವ ನೀರು ರಕ್ಷಿಸಿಕೊಳ್ಳುವುದರಿಂದ ನ್ಯಾಯಾಂಗ ನಿಂದನೆ ಆಗಲ್ಲ: ಕುಮಾರಸ್ವಾಮಿ

* ಕಾವೇರಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ಪೈಕಿ ಒಬ್ಬರು ಜಯಲಲಿತಾಗೆ ವಕೀಲರಾಗಿದ್ದವರು: ಎಚ್ ಡಿಕೆ

* ಮೇಲುಸ್ತುವಾರಿ ಸಮಿತಿ ಬಳಿ ತೆರಳಲು ಸೂಚಿಸಿದ್ದ ಸುಪ್ರೀಂ ಕೋರ್ಟ್, ಆ ನಂತರ ತನಗೆ ಬೇಕಾದಂತೆ ಅದೇಶ ನೀಡಿತು

* ತಮಿಳುನಾಡು ರೈತರಿಗೆ ನಾವು ತೊಂದರೆ ಕೊಡ್ತಿದ್ದೇವೆ, ಅದರೆ ನಮ್ಮ ನೋವು ಹೇಳಿಕೊಳ್ತಿದ್ದೇವೆ: ಎಚ್ ಡಿಕೆ

* ನಾಲ್ಕು ಜಲಾಶಯಗಳಲ್ಲಿ ಇರುವುದು 27.6 ಟಿಎಂಸಿ ಅಡಿ ಮಾತ್ರ ನೀರು

* ಕನಿಷ್ಠ 40 ಸಾವಿರ ಕೋಟಿ ರಾಜ್ಯಕ್ಕೆ ನಷ್ಟ: ಈಶ್ವರಪ್ಪ

*2016-17 ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಅಭಾವ: ಕುಡಿಯುವ ನೀರೀಗೇ ಕಷ್ಟವಾಗಿದೆ.

*ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ನಗರಗಳ ಕುಡಿಯುವ ಉದ್ದೇಶಕ್ಕೆ ಮಾತ್ರ ನಾಲ್ಕು ಜಲಾಶಯಗಳ ನೀರನ್ನು ಬಳಸುವುದಕ್ಕೆ ನಿರ್ಧರಿಸಲಾಗಿದೆ: ವೈಎಸ್ ವಿ ದತ್ತಾ.

* ನೀರು ಬಿಡುವುದಕ್ಕಾಗಲ್ಲ ಎಂಬ ಜಗದೀಶ ಶೆಟ್ಟರ್ ಪ್ರಸ್ತಾವಕ್ಕೆ ವೈಎಸ್ ವಿ ದತ್ತಾ ಅನುಮೋದನೆ

* ಜಗದೀಶ್ ಶೆಟ್ಟರ್ ರಿಂದ ಇಂಗ್ಲಿಷ್ ನಲ್ಲಿ ಪ್ರಸ್ತಾವ ಮಂಡನೆ

* ಉರಿ ಹಾಗೂ ಪಠಾಣ್ ಕೋಟ್ ಮೇಲಿನ ದಾಳಿಯನ್ನು ಖಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

* ಕಾವೇರಿ ವಿಚಾರದ ಬಗ್ಗೆ ಮಾತನಾಡಲು ತಲಾ 5 ನಿಮಿಷಗಳ ಅವಕಾಶ ಮಾತ್ರ

* ಜಯಲಲಿತಾ ಶೀಘ್ರ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

* ಕಾವೇರಿ ಸಮಸ್ಯೆ ಬಗ್ಗೆ ಮಾತ್ರ ಚರ್ಚಿಸಿ, ಸುಪ್ರೀಂ ಕೋರ್ಟ್ ವಿರುದ್ಧ ಮಾತನಾಡಬೇಡಿ: ಸ್ಪೀಕರ್ ಕೋಳಿವಾಡ

* ಉಭಯ ಸದನಗಳ ನಿರ್ಣಯದ ಕರಡು ಪ್ರತಿ ಸಿದ್ಧತೆ

* ರಾಹುಕಾಲ ಮುಗಿದ ಮೇಲೆ ಮಧ್ಯಾಹ್ನ 12ರ ನಂತರ ಅಧಿವೇಶನ ನಡೆಸಿ ಎಂದ ಶಾಸಕ ರೇವಣ್ಣ

* ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಜೆಡಿಎಸ್ ಬಂಡಾಯ ಶಾಸಕರ ಪ್ರತಿಭಟನೆ

* ವಿಧಾನ ಸೌಧದಲ್ಲಿ ಸದನ ಸಮಿತಿ ಸಭೆ ಮುಕ್ತಾಯ

* ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಮಾತನಾಡಿದ್ದೀವಿ, ಕೇಂದ್ರ ನೀರಾವರಿ ಸಚಿವರ ಜತೆಗೂ ಮಾತನಾಡಿದ್ದೀವಿ. ಇಂದಿನ ತೀರ್ಮಾನ ಏನು ಬರುತ್ತದೆ ಎಂದು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ: ಸಚಿವ ಟಿ.ಬಿ.ಜಯಚಂದ್ರ

*ಕಚೇರಿಗಳನ್ನು ಮುಚ್ಚುವುದು ಸಾಧ್ಯವಿಲ್ಲ. ಈಗಾಗಲೇ ಮಂಡ್ಯದ ಶಾಲೆಗಳಿಗೆ ಹದಿನೈದು ದಿನ ರಜೆ ನೀಡಲಾಗಿದೆ. ಬಸ್ ಪ್ರಯಾಣಕ್ಕೆ ದುಡ್ಡು ಕೊಡದಿರುವುದು, ವಿದ್ಯುತ್ ಬಿಲ್ ಕಟ್ಟದಿರುವಂಥದ್ದನ್ನು ಮಾಡಬಾರದು ಎಂದು ಸಚಿವ ಡಿ.ಕೆ.ಶಿವಕುಮಾರ್ ಮನವಿ

* ತಮಿಳುನಾಡಿಗೆ ನೀರು ಬಿಡಲ್ಲ ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡು, ಶೀಘ್ರದಲ್ಲೇ ಕಲಾಪ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

* ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ಸಭೆ

* ವಿಧಾನ ಸೌಧದಲ್ಲಿ ಸದನ ಸಮಿತಿ ಸಭೆ ಆರಂಭವಾಗಿದೆ.

ಜನರ ಪರ ನಿಲ್ತೀವಿ: ಕರ್ನಾಟಕ ಕೋರ್ಟ್ ಆದೇಶ ಉಲ್ಲಂಘನೆ ಮಾಡಿಲ್ಲ. ಉಲ್ಲಂಘನೆ ಮಾಡುವ ಉದ್ದೇಶ ಇಲ್ಲ. ನೀರಾವರಿಗಿಂತ ನಮಗೆ ಕುಡಿಯುವ ನೀರಿಲ್ಲ. 2017ಕ್ಕೆ 97 ಟಿಎಂಸಿ ನೀರು ಬೇಕು. ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. ಅದು ಮೂರು ಸಾವಿರ ಕ್ಯೂಸೆಕ್ ನೀಡಬೇಕು ಅಂದರೆ, ಕೋರ್ಟ್ ಆರು ಸಾವಿರ್ ಕ್ಯೂಸೆಕ್ ಬಿಡಬೇಕು ಎಂದಿದೆ.

Vidhana soudha

ನನಗೆ ಕೋರ್ಟ್ ಬಗ್ಗೆ ಗೌರವ ಇದೆ. ಆದರೆ ಇದು ಅನುಸರಿಸಲು ಸಾಧ್ಯವಿಲ್ಲದ ಆದೇಶ ಎಂದಿದ್ದಾರೆ ಸಚಿವ ಆರ್.ವಿ.ದೇಶಪಾಂಡೆ.

ತಪ್ಪು ಮುಚ್ಚಿಕೊಳ್ಳಲು ಪ್ರಧಾನಿ ಹೆಸರು: ಕೆ.ಎಸ್.ಈಶ್ವರಪ್ಪ, ಬಿಜೆಪಿ ನಿಲುವು ಸ್ಪಷ್ಟ. ಕಾವೇರಿ ಕೊಳ್ಳದಲ್ಲಿ ಕುಡಿಯುವುದಕ್ಕೆ ನೀರಿಲ್ಲ. ಸಿಎಂ ಮೂರು ಸಭೆ ಕರೆದರು. ನಾವು ನೀರು ಬಿಡಬೇದಿ ಅಂದ್ವಿ. ಅವರು ನಮ್ಮ ಮಾತು ಕೇಳಲ್ಲ. ಅದಕ್ಕೆ ನಾವು ಬರಲ್ಲ ಅಂದ್ವಿ. ಇದರಿಂದ ನಲವತ್ತು ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರವೇ ತಪ್ಪು ಮಾಡಿದ್ದು, ಅದನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಧಾನಿಗಳ ಹೆಸರು ತರುತ್ತಿದ್ದಾರೆ. ಒಮ್ಮೆ ಕೋರ್ಟ್ ತೀರ್ಪು ಬಂದ ಮೇಲೆ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ ಎಂದರು.

ರೈತರಿಗೆ ಪರಿಹಾರ: ಶಾಸಕ ರೇವಣ್ಣ ಮಾತನಾಡಿ, ಕಾವೇರಿ ಕೊಳ್ಳದ ರೈತರಿಗೆ ಪರಿಹಾರ ನೀಡಬೇಕು. ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸುತ್ತೇವೆ. ಒಟ್ಟಿನಲ್ಲಿ ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು ಎಂಬುದು ನಮ್ಮ ನಿಲುವುಎಂದಿದ್ದಾರೆ.

ಯಾವ ಪ್ರಧಾನಿಯೂ ಮಧ್ಯ ಪ್ರವೇಶಿಸಿಲ್ಲ: "ಸುಪ್ರೀಂ ಕೋರ್ಟ್ ನಿರ್ಣಯ ಬಂದ ನಂತರ ಯಾವುದೇ ಪ್ರಧಾನಿ ಮಧ್ಯ ಪ್ರವೇಶಿಸಿದ ಉದಾಹರಣೆ ಇಲ್ಲ" ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಪ್ರಧಾನಿ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯ ಸರಕಾರ ಎಲ್ಲಿ ತಪ್ಪು ಮಾಡಿದೆ ಎಂಬುದನ್ನು ಅಧಿವೇಶನದಲ್ಲಿ ತೆರೆದಿಡುತ್ತೇವೆ. ರಾಜ್ಯದ ಜನರ ಪರವಾಗಿಯೇ ನಮ್ಮ ನಿರ್ಧಾರ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
LIVE updates from Karnataka Assembly. A special session is underway to discuss Cauvery Water Issue. The Congress Government headed by Siddaramaiah has refused to release 6,000 cusecs water to Tamilnadu till 27th of September ordered by Supreme Court of India.
Please Wait while comments are loading...