Kodi Mutt Swamiji: ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಕುರಿತು ಅಚ್ಚರಿ ಭವಿಷ್ಯ ನುಡಿದ ಕೋಡಿಶ್ರೀಗಳು
ಹಾಸನ, ಸೆಪ್ಟೆಂಬರ್ 09: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮುಸುಕುಧಾರಿ ದೂರುದಾರ ನೂರಾರು ಶವವನ್ನ ಹೂತು ಹಾಕಿರುವ ಕುರಿತು ನೀಡಿದ ಹೇಳಿಕೆ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ ಭವಿಷ್ಯ ನುಡಿದಿದ್ದು, ನಿನಗಾಗಿ ಪಶ್ಚಿಮದಲ್ಲಿ ಸೂರ್ಯ ಮೂಡುತ್ತಾನಾ? ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ ಎನ್ನುವ ಮಾತುಗಳನ್ನಾಡಿದ್ದಾರೆ. ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಅಪಪ್ರಚಾರ ಕೊನೆಗೆ ಬರಬೇಕಿತ್ತು, ಆದರೆ ಮೊದಲಿಗೆ ಬಂದಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದರು.ಧರ್ಮಸ್ಥಳ ಪ್ರಕರಣ, ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಮತ್ತು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯಯವರ ಬಗ್ಗೆ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯದ ಸತ್ಯಾಸತ್ಯತೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ವ್ಯವಸ್ಥಿತ ಅಪಪ್ರಚಾರ ಎಂದು ಶ್ರೀಗಳು ಹೇಳಿದ್ದರು.
ಒಳ್ಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿಯಿರುತ್ತೋ ಅಲ್ಲಿ ವಿಧಿಯಾಟವೂ ಜೋರಾಗಿ ಇರುತ್ತದೆ ಪ್ರಚಾರ ವಿಚಾರ ಸಮಾಚಾರ ಅಪಪ್ರಚಾರ ಹೀಗೆ ಬರಬೇಕಾಗಿತ್ತು. ಆದರೆ, ಅಪಪ್ರಚಾರದಿಂದಾಗಿ ಮಾಡಿದವನು ನಾಶವಾಗುತ್ತಾನೆ ಎಂದು ಶ್ರೀಗಳು ಹೇಳಿದ್ದಾರೆ. ರಾಮಾಯಣದಲ್ಲೂ ಸೀತೆ ಅಗ್ನಿಪರೀಕ್ಷೆಗೆ ಒಳಗಾಗಿದ್ದಳು, ಅದೇ ರೀತಿ ಧರ್ಮಸ್ಥಳದಲ್ಲೂ ಸತ್ಯಾಸತ್ಯತೆ ಹೊರಬರುತ್ತದೆ. ಸತ್ಯ ಹೊರಗೆ ಬರುವ ತನಕ ಕಾಯಬೇಕಿದೆ, ಅದು ಈಗ ಒಂದೊಂದಾಗಿ ಹೊರಗೆ ಬರುತ್ತದೆ. ಅಪಪ್ರಚಾರ ಕಡೆಗೆ ಬರಬೇಕಾಗಿತ್ತು ಅದು ಇಲ್ಲಿ ಮೊದಲು ಬಂದಿದೆ ಎಂದು ಹೇಳಿದ್ದಾರೆ.
ಬೆಳಕು ಇದ್ದಲ್ಲಿ ಕತ್ತಲು, ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಜನ ಸತ್ಯವನ್ನು ಸ್ವೀಕರಿಸುತ್ತಿಲ್ಲ. ಅರಸನ ಅರಮನೆಗೆ ಕಾರ್ಮೋಡ ಕವಿದೀತು, ರಾಜ್ಯ ಮತ್ತು ಕೇಂದ್ರದ ಬಗ್ಗೆ ನಾನು ಹೇಳುತ್ತಿರುವುದು ಎಂದು ಕೋಡಿಮಠ ಸಂಸ್ಥಾನದ ಶ್ರೀಗಳು ನುಡಿದಿದ್ದಾರೆ.












Click it and Unblock the Notifications