Vokkaliga Swamiji: ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದುತ್ತಿರುವ ಆರ್.ಅಶೋಕ್: ಡಿ.ಕೆ ಶಿವಕುಮಾರ್ ಹಿಂಗಂದಿದ್ಯಾಕೆ
ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ. ಈ ವಿಚಾರವಾಗಿ ಒಕ್ಕಲಿಗ ಸ್ವಾಮೀಜಿ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರ ಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಡುವೆ ವಾಕ್ಸಮರ ನಡೆಯುತ್ತಿತ್ತು.
ಇದೀಗ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವೆ ವಾಕ್ಸಮರ ಶುರುವಾಗಿದೆ. ಒಕ್ಕಲಿಗ ಸ್ವಾಮೀಜಿ ವಿಚಾರವಾಗಿ ಈ ಮಾತನಾಡ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿದ್ದಾಗ ಬಾಲಗಂಗಾಧರ ಸ್ವಾಮೀಜಿ ಅವರ ಮೇಲೆ ಮೇಲೆ ಕೇಸ್ ದಾಖಲಿಸಲಾಗಿತ್ತು. ಆಗ ಈ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು ಎಂದು ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಇದ್ದ ಸರ್ಕಾರ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಇವರು ಮಾತನಾಡಲಿಲ್ಲ. ಆಗ ಅಶೋಕ್ ಅವರು ಎಲ್ಲಿದ್ದರು. ಶ್ರೀಗಳಿಗೆ ಕ್ರಿಮಿನಲ್‌ಗಳ ರೀತಿ ನಂಬರ್ ಸಹ ಕೊಡಲಾಗಿತ್ತು. ಆ ರಿಪೋರ್ಟ್‌ನ ಬಗ್ಗೆ ಇವರಿಗೆ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಆಫೀಸ್ ಹುಡುಗರ ಮೇಲೆ ಸಹ ಕೇಸ್ ಹಾಕಿದ್ದಾರೆ. ಈಗ ಸ್ವಾಮೀಜಿಗಳ ವಿಚಾರಕ್ಕೆ ಉಗ್ರ ಹೋರಾಟ ಮಾಡುವುದಾಗಿ ಅಶೋಕ್ ಹೇಳಿದ್ದಾರೆ. ಅವರಿಗೆ ಜೆಡಿಎಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಮೇಲೆ ಕೇಸ್ ಹಾಕಿದ್ದಾಗ ಇವರು ಎಲ್ಲಿಗೆ ಹೋಗಿದ್ದರು.
ಆಗ ಬಿಜೆಪಿ ನಾಯಕರು ಮಾತನಾಡಲಿಲ್ಲವೇಕೆ. ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಏಕೆ ಸುಮ್ಮನಿದ್ದರಂತೆ. ಆಗ ಆರ್. ಅಶೋಕ್ ಅವರು ಎಲ್ಲೋಗಿದ್ದರು. ಈ ರೀತಿ ಸುಮ್ಮನೆ ಒಣ ರಾಜಕಾರಣ ಬಿಟ್ಟು ಬಿಡಿ. ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದಿಕೊಂಡು ಆರ್. ಅಶೋಕ್ ಕೂತಿದ್ದಾನೆ ಎಂದು ವ್ಯಂಗ್ಯ ಮಾಡಿದ್ದಾರೆ.
ನಾನು ಎಲ್ಲಾ ನಮ್ಮ ಸ್ವಾಮೀಜಿಗಳಿಗೆ ಹಾಗೂ ಎಲ್ಲಾ ಸ್ವಾಮೀಜಿಗಳಿಗೂ ಒಂದು ಮನವಿ ಮಾಡ್ತೀನಿ. ದಯವಿಟ್ಟು ಯಾರೂ ಸಂವಿಧಾನ, ಯಾರ ಹಕ್ಕುಗಳ ಬಗ್ಗೆಯೂ ಮಾತನಾಡಬೇಡಿ. ಜಾತಿಗಳ ಕುರಿತು ಮಾತನಾಡುವುದು ಬೇಡ. ನಮ್ಮದೆಲ್ಲ ಮಾನವ ಧರ್ಮ, ನಮ್ಮದು ಸಂವಿಧಾನವಾಗಿದೆ.
ನಾವು ಇದೆರಡಕ್ಕೂ ಹೆಚ್ಚು ಒತ್ತು ಕೊಟ್ಟುಕೊಂಡು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರಿಗೂ ಹೇಳುತ್ತೇನೆ. ಯಾರು ಸಹ ಇಲ್ಲಿನ ಕಾನೂನಿಗಿಂತ ದೊಡ್ಡವರಲ್ಲ. ನಾಳೆ ನಾನು ಮಾತಾಡಿದರೂ ನನ್ನ ಮೇಲೂ ಕೇಸ್ ಹಾಕುತ್ತಾರೆ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ: ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆಯ ಬಗ್ಗೆ ಇಲ್ಲಿಯ ವರೆಗೆ ಯಾವುದೇ ಚರ್ಚೆಯಾಗಿಲ್ಲ. ಇನ್ನು ನಾನು ಮುಖ್ಯಮಂತ್ರಿ ಅಲ್ಲ ಉಪ ಮುಖ್ಯಮಂತ್ರಿ. ಆದರೆ, ಪಾರ್ಟಿ ಅಧ್ಯಕ್ಷರ ಸದ್ಯಕ್ಕೆ ಯಾವುದೇ ಚರ್ಚೆ ನಡೆದಿಲ್ಲ. ಈಗ ಅದರ ಅವಶ್ಯಕತೆಯೂ ಇಲ್ಲ. ಕರ್ನಾಟಕದಲ್ಲಿ ಯಾವುದೇ ವಿಧಾನಸಭೆಯಲ್ಲಿ ಯಾವ ಸ್ಥಾನವೂ ಖಾಲಿ ಉಳಿದಿಲ್ಲ ಎಂದಿದ್ದಾರೆ.












Click it and Unblock the Notifications