ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಆರಂಭಿಸಿದ 'ಆಪರೇಷನ್ ಕಮಲ': ಬಿಜೆಪಿಗೆ ದೇಶದೆಲ್ಲೆಡೆ 'ಗದ್ದುಗೆ ಬಲ'

|
Google Oneindia Kannada News

ಬೆಂಗಳೂರು, ಜೂ. 22: ಆಪರೇಷನ್ ಕಮಲ ಭಾಗ 01:

ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ಅಸ್ತ್ರ ಬಳಕೆ ಮಾಡುತ್ತಿದೆ. 2020 ರಲ್ಲಿ ಮಧ್ಯಪ್ರದೇಶದಲ್ಲಿ ಕಮಲನಾಥ ಸರ್ಕಾರನ್ನು ಉರುಳಿಸಿದ್ದ ಅಪರೇಷನ್ ಕಮಲ ಇದೀಗ ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್- ಶಿವಸೇನೆ ಮೈತ್ರಿಯ ಉದ್ಧವ್ ಠಾಕ್ರೆ ಸರ್ಕಾರ ಪತನದತ್ತ ಸಾಗಿದೆ. ದೇಶದಲ್ಲಿ ಅತಂತ್ರ ಸರ್ಕಾರಗಳನ್ನು ಉರುಳಿಸುವಲ್ಲಿ ಆಪರೇಷನ್ ಕಮಲ ಯಶಸ್ವಿ ಯಶಸ್ಸು ಗಳಿಸುತ್ತಿದೆ.

ದೇಶಕ್ಕೆ ಮೊದಲ ಬಾರಿ ಆಪರೇಷನ್ ಕಮಲ ಪರಿಚಯಿಸಿ ಬಿಎಸ್. ಯಡಿಯೂರಪ್ಪ ಯಶಸ್ಸುಗಳಿಸಿದ ಬಳಿಕ ಬಿಜೆಪಿ ದೇಶದ ರಾಜಕಾರಣದ ಮೇಲೆ ಪ್ರಯೋಗಿಸುತ್ತಿದೆ. ಆಪರೇಷನ್ ಕಮಲ ಹುಟ್ಟು, ಕರ್ನಾಟಕದಲ್ಲಿ ನಡೆದ ಆಪರೇಷನ್ ಕುರಿತ ಸಮಗ್ರ ವಿವರ ಇಲ್ಲಿದೆ.

BJP Foundation Day : ಸಂಸ್ಥಾಪನಾ ದಿನಾಚರಣೆ: ಯುದ್ಧದ ಭಾರತದ ನಿಲುವಿನ ಬಗ್ಗೆ ಮೋದಿ ಭಾಷಣ BJP Foundation Day : ಸಂಸ್ಥಾಪನಾ ದಿನಾಚರಣೆ: ಯುದ್ಧದ ಭಾರತದ ನಿಲುವಿನ ಬಗ್ಗೆ ಮೋದಿ ಭಾಷಣ

ಕರ್ನಾಟಕ ರಜ್ಯ ರಾಜಕಾರಣಕ್ಕೆ 2008 ರಲ್ಲಿ ಪರಿಚಯಿಸಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ 'ಆಪರೇಷನ್ ಕಮಲ' ಸೂತ್ರ ಬಿಜೆಪಿ ಪಾಲಿಗೆ ಸಂಜೀವಿನಿಯಾಗಿದೆ. ಇದೇ ಸೂತ್ರ ಪ್ರಯೋಗಿಸಿ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸಿ ಕಮಲ ಅರಳಿಸಲಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಬೀಳಿಸಿದ ಆಪರೇಷನ್ ಕಮಲ ಇದೀಗ ನೆರೆ ರಾಜ್ಯ ಮಹಾರಾಷ್ಟ್ರ ಶಿವಸೇನಾ ಸರ್ಕಾರದ ಬುಡದಲ್ಲಿ ಬೆಂಕಿ ಇಟ್ಟಿದೆ. ಇನ್ನೇನು ಉದ್ದವ್ ಠಾಕ್ರೆ ರಾಜೀನಾಮೆ ನೀಡಲಿದ್ದು, ಕಮಲ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

2006 ಧರ್ಮಸಿಂಗ್ ಖುರ್ಚಿ ಉರುಳಿಸಿದ್ದ ದೇವೇಗೌಡರ ಧರ್ಮಪುತ್ರ!

2006 ಧರ್ಮಸಿಂಗ್ ಖುರ್ಚಿ ಉರುಳಿಸಿದ್ದ ದೇವೇಗೌಡರ ಧರ್ಮಪುತ್ರ!

2004 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಜಾತ್ಯತೀತ ಪಕ್ಷಗಳು ಸರ್ಕಾರ ರಚನೆ ಮಾಡುವ ಸಮಾನ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ. ಧರ್ಮಸಿಂಗ್ ಸಿಎಂ ಆಗಿದ್ದರು. ಜೆಡಿಎಸ್ ನಾಯಕ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಮೊದಲ ಬಾರಿ ಶಾಸಕರಾಗಿ ಎಚ್‌.ಡಿ. ಕುಮಾರಸ್ವಾಮಿ ವಿಧಾನಸೌಧ ಪ್ರವೇಶಿಸಿದ್ದರು. ಜೆಡಿಎಸ್- ಕಾಂಗ್ರೆಸ್ ನಡುವಿನ ವೈಮನಸ್ಸಿನಿಂದ ಜೆಡಿಎಸ್ ಮೈತ್ರಿಯಿಂದ ಹೊರ ಬಂದಿತ್ತು. 2006 ರಲ್ಲಿ ಧರ್ಮಸಿಂಗ್ ಸರ್ಕಾರ ಪತನವಾಗಿತ್ತು. ಈ ವೇಳೆ ವಿರೋಧ ಪಕ್ಷದ ನಾಯಕನಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಜತೆ ಕುಮಾರಸ್ವಾಮಿ ಹೊಸ ಮೈತ್ರಿ ಮಾಡಿಕೊಂಡಿದ್ದರು. ಸಿಎಂ ಹುದ್ದೆ 50/50 ಷರತ್ತಿನ ಆಧಾರದ ಮೇಲೆ ಮೊದಲ ಅವಧಿಗೆ ಕುಮಾರಸ್ವಾಮಿ ಸಿಎಂ ಖುರ್ಚಿ ಅಲಂಕರಿಸಿದ್ದರು. ಕುಮಾರಸ್ವಾಮಿ ಅವಧಿ ಮುಗಿಯುವಷ್ಟರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಅಸಮಧಾನ ಹೊಗೆ ಹರಿದಾಡಿತ್ತು.

ದುರಂತ ನಾಯಕನಾಗಿದ್ದ ಯಡಿಯೂರಪ್ಪ !

ದುರಂತ ನಾಯಕನಾಗಿದ್ದ ಯಡಿಯೂರಪ್ಪ !

ಜೆಡಿಎಸ್ ಅವಧಿ ಮುಗಿದ ಬಳಿಕ ಯಡಿಯೂರಪ್ಪ ಅವರಿಗೆ ಸಿಎಂ ಖುರ್ಚಿ ಬಿಟ್ಟು ಕೊಡಬೇಕಿತ್ತು. ಅಷ್ಟರಲ್ಲಿ ಜೆಡಿಎಸ್ ಜಾತ್ಯತೀತ ತತ್ವಕ್ಕೆ ವಿರೋಧಿ ನಿಲುವು ಬೇಡ ಎಂದು ದೊಡ್ಡಗೌಡರು ದಾಳ ಬಿಟ್ಟಿದ್ದರು. ಅಪ್ಪನ ಮಾತಿನಿಂದ ಪ್ರೇರಣೆಗೊಂಡ ಕುಮಾರಸ್ವಾಮಿ, ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದರು. 2007 ನವೆಂಬರ್ 9 ರಂದು ಸಿಎಂ ಖುರ್ಚಿ ಅಲಂಕರಿಸಿದ್ದ ಬಿ.ಎಸ್. ಯಡಿಯೂರಪ್ಪ ಕೇವಲ ಏಳು ದಿನ ಕಾಲ ಆಳ್ವಿಕೆ ನಡೆಸಿದ್ದರು. ಜೆಡಿಎಸ್ ಬೆಂಬಲ ಹಿಂಪಡೆದ ಕಾರಣ ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬಿದ್ದಿತ್ತು. ಹಣಕಾಸು ಸಚಿವರಾಗಿ ರಾಜ್ಯಕ್ಕೆ ಉತ್ತಮ ಬಜೆಟ್ ನೀಡಿದ್ದ ಯಡಿಯೂರಪ್ಪ ದುರಂತ ನಾಯಕನಾಗಿದ್ದರು. ಯಡಿಯೂರಪ್ಪ ಪರ ಅನುಕಂಪದ ಅಲೆ ಏಳಿತ್ತು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.

ದುರಂತ ನಾಯಕ ಪರಿಚಯಿಸಿದ ಅಪರೇಷನ್ ಕಮಲ:

ದುರಂತ ನಾಯಕ ಪರಿಚಯಿಸಿದ ಅಪರೇಷನ್ ಕಮಲ:

ಯಡಿಯೂರಪ್ಪ ಮೇಲಿನ ಅನುಕಂಪದ ಅಲೆಯಿಂದಾಗಿ 2008 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಗೆದ್ದಿತ್ತು. ಆದರೂ ಸರ್ಕಾರ ರಚನೆಗೆ ಕೇವಲ ಮೂರು ಶಾಸಕರ ಬೆಂಬಲ ಬೇಕಿತ್ತು. ಗಣಿ ಉದ್ಯಮದಿಂದ ಶ್ರೀಮಂತಿಕೆ ಮೈಗೂಡಿಸಿಕೊಂಡಿದ್ದ ಬಳ್ಳಾರಿ ಗಣಿ ರೆಡ್ಡಿ ಗಾಲಿ ಜನಾರ್ಧನರೆಡ್ಡಿ ಫೀಲ್ಡಿಗೆ ಇಳಿದಿದ್ದರು. ಬಿಜೆಪಿ ಸರ್ಕಾರ ರಚನೆಗೆ ಅಗತ್ಯ ಶಾಸಕರ ಕುದುರೆ ವ್ಯಾಪಾರ ಮಾಡಿದರು. ಅಗತ್ಯಕ್ಕಿಂತಲೂ ಹೆಚ್ಚು ಶಾಸಕರನ್ನು ಖರೀದಿ ಮಾಡಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದರು. 2008 ರಲ್ಲಿ ರೆಡ್ಡಿಗಳ ಪರಿಚಯಿಸಿದ ಅಪರೇಷನ್ ಕಮಲ ಸೂತ್ರಕ್ಕೆ ಯಡಿಯೂರಪ್ಪ ಹಸಿರು ನಿಶಾನೆ ತೋರಿದ್ದರು. ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ 2008 ರಿಂದ 2011 ರ ವರೆಗೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ನಡೆಸಿದ್ದರು. ಹೀಗೆ ರಾಜಕೀಯಕ್ಕೆ ಮೊದಲು ಆಪರೇಷನ್ ಕಮಲ ಸೂತ್ರ ಪರಿಚಯಿಸಿದ್ದು ಯಡಿಯೂರಪ್ಪ. ಅದನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದು ಬಳ್ಳಾರಿ ರೆಡ್ಡಿಗಳು.

ಆಪರೇಷನ್ ಕಮಲ ಸರ್ಕಾರಕ್ಕೆ ಪೂರ್ಣಾವಧಿ ಅಧಿಕಾರ:

ಆಪರೇಷನ್ ಕಮಲ ಸರ್ಕಾರಕ್ಕೆ ಪೂರ್ಣಾವಧಿ ಅಧಿಕಾರ:

ಕರ್ನಾಟಕದಲ್ಲಿ ಬಲಿಷ್ಠ ಲೋಕಾಯುಕ್ತ ಸಂಸ್ಥೆ ಅಸ್ತಿತ್ವದಲ್ಲಿತ್ತು. ನ್ಯಾ. ಎನ್. ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದರು. ಆಪರೇಷನ್ ಕಮಲ ಪರಿಚಯಿಸಿದ ಯಡಿಯೂರಪ್ಪ ಸಿಎಂ ಆಗಿ ನಡೆಸಿದ ಅಕ್ರಮ ಅವರ ಪಾಲಿಗೆ ಉರುಳಾಗಿ ಪರಿಣಮಿಸಿತ್ತು. ಆಪರೇಷನ್ ಕಮಲ ಕಾರ್ಯಗತಗೊಳಿಸಿದ್ದ ಗಾಲಿ ಜನಾರ್ಧನರೆಡ್ಡಿ ಪಟಾಲಂ ಬೆನ್ನಿಗೆ ಅಕ್ರಮ ಗಣಿಗಾರಿಕೆ ಪ್ರಕರಣ ಬೆನ್ನೇರಿತು. ಯಡಿಯೂರಪ್ಪ ಅನಿವಾರ್ಯವಾಗಿ ಸಿಎಂ ಖುರ್ಚಿಗೆ ರಾಜೀನಾಮೆ ನೀಡಿ 2011 ರಲ್ಲಿ ಜೈಲಿಗೆ ತೆರಳಿದರು. ಆ ಬಳಿಕ ರಾಜ್ಯದ ಸಿಎಂ ಆಗಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿದ್ದರು. ಬಿಜೆಪಿ ಪೂರ್ಣಾವಧಿ ಸರ್ಕಾರ ನೀಡುವಲ್ಲಿ ಯಶಸ್ವಿಯಾಗಿತ್ತು.

ಕಮಲ ದಳ ಚಿವುಟಿ ಹಾಕಿದ್ದ ಆಪರೇಷನ್ ಕೆಜೆಪಿ

ಕಮಲ ದಳ ಚಿವುಟಿ ಹಾಕಿದ್ದ ಆಪರೇಷನ್ ಕೆಜೆಪಿ

ಭೂ ಅಕ್ರಮದಲ್ಲಿ ಯಡಿಯೂರಪ್ಪ ಜೈಲಿಗೆ ಹೋದ ಕಾರಣದಿಂದ ಬಿಜೆಪಿ ಪಕ್ಷ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿತು. ಅಕ್ರಮಗಳಿಗೆ ನಮ್ಮ ಪಕ್ಷದಲ್ಲಿ ಅವಕಾಶ ವಿಲ್ಲ ಎಂದು ಯಡಿಯೂರಪ್ಪ ಅವರನ್ನು ದೂರವಿಟ್ಟು 2013 ರಲ್ಲಿ ಚುನಾವಣೆ ಎದುರಿಸಲು ಸಜ್ಜಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಟ್ಟಿದ್ದ ಯಡಿಯೂರಪ್ಪ ಬಿಜೆಪಿ ಈ ನಡೆಯಿಂದ ಬೇಸತ್ತು 'ಕರ್ನಾಟಕ ಜನತಾ ಪಾರ್ಟಿ' ಪರಿಚಯಿಸಿದರು. ಈ ಮೂಲಕ ಕಮಲಕ್ಕೆ ಆಪರೇಷನ್ ಕಮಲ ಪರಿಚಯಿಸಿ 2013 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮಕ್ಕಾಡೆ ಮಲಗಿಸಿಬಿಟ್ಟರು. ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ ಎಂಬ ಸತ್ಯ ಅರಿತ ಬಿಜೆಪಿ ಮತ್ತೆ ಕಂಪು ಹಾಸ ಹಾಕಿ ಪಕ್ಷಕ್ಕೆ ಬಿಎಸ್ ವೈ ಅವರನ್ನು ಭರಮಾಡಿಕೊಂಡಿತು. ಅಪರೇಷನ್ ಕಮಲ, ಯಡಿಯೂರಪ್ಪ ಬಿಜೆಪಿ ತೊರೆದ ಪರಿಣಾಮ 2013 ರಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಪೂರ್ಣ ಬಹುಮತ ಗಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಿತು. ಸಿದ್ದರಾಮಯ್ಯ 2013 ರಿಂದ 2018 ರ ವರೆಗೆ ಪೂರ್ಣಾವಧಿ ಸಿಎಂ ಹುದ್ದೆ ಅಲಂಕರಿಸಿದ್ದರು.

Recommended Video

HD Kumaraswamy ಹಾಗು GT Deve Gowda ಅವರ ನಡುವಿನ ಶೀತಲ ಸಮರಕ್ಕೆ ಹೊಸ ತಿರುವು | *Politics | OneIndia Kannada

English summary
Operation Kamala or Operation Lotus is a term coined in 2008, when former minister G. Janardhana Reddy in Karnataka used a method to secure support from legislators bypassing the anti-defection law, so as to take the BJp past the majority number. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X