Kirik Keerthi: ಧರ್ಮಸ್ಥಳ ಸೌಜನ್ಯ: ಸಮೀರ್ ಬಗ್ಗೆ ಕಿರಿಕ್ ಕೀರ್ತಿ ಹೇಳಿದ್ದೇನು, ಕೀರ್ತಿ ಫೂಲ್ ಟ್ರೋಲ್!
Soujanya Case: ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ಕಿರಿಕ್ ಕೀರ್ತಿ ಅವರು ಇದೀಗ ಟ್ರೋಲ್‌ಗೆ ಗುರಿಯಾಗಿದ್ದರೆ. ಅಲ್ಲದೆ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಧರ್ಮಸ್ಥಳದ ಸೌಜನ್ಯ ಪ್ರಕರಣವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬರ್ ಸಮೀರ್ ಮಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು. ಇದಕ್ಕೆ ಅಪಾರ ಬೆಂಬಲವೂ ವ್ಯಕ್ತವಾಗಿದೆ. ಇದರ ನಡುವೆ ಕೆಲವರು ಕೀರ್ತಿ ಅವರ ಈ ವಿಡಿಯೋಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಕಿರಿಕ್ ಕೀರ್ತಿ ಸಹ ವಿಡಿಯೋ ಮಾಡಿದ್ದು. ಇದರಲ್ಲಿ ಸಮೀರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಮೀರ್ ಅವರು ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್‌ನ ಬಗ್ಗೆ ವಿಡಿಯೋ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೇಜ್ ತೆಗೆದರೂ ಇದೇ ಕಾಣಿಸುತ್ತಿದೆ. ಕಿರಿಕ್ ಕೀರ್ತಿ ಅವರು, "ಧರ್ಮಸ್ಥಳದ ಬಗ್ಗೆ ಧರ್ಮಸ್ಥಳದ ದೇವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಆ ಜಾಗದ ಬಗ್ಗೆ ಮಾತನಾಡಿದ್ದು, ನನಗೆ ಇಷ್ಟವಾಗಿಲ್ಲ. ಜನರನ್ನು ಬ್ರೈನ್ ವಾಶ್ ಮಾಡುವ ಅಥವಾ ತಂದಿಡುವ ಕೆಲಸವನ್ನು ಮಾಡಿದರೆ ಸುಮ್ಮನೆ ಕುಳಿತುಕೊಳ್ಳಲು ಆಗಲ್ಲ. ನಾಳೆ ಇನ್ನೊಂದು ಪುಣ್ಯ ಕ್ಷೇತ್ರದ ಬಗ್ಗೆ ಮಾತನಾಡುತ್ತಾನೆ" ಎಂದಿದ್ದಾರೆ. ಈ ಮಾತನ್ನು ಅವರು Speed Plus Karnataka ನಲ್ಲಿ ಮಾತನಾಡಿದ್ದಾರೆ.

ಸಮೀರ್ ವಿರುದ್ಧ ಏಕವಚನದಲ್ಲೇ ಕಿರಿಕ್ ಕೀರ್ತಿ ಮಾತನಾಡಿದ್ದು. ಇದೀಗ ಈ ವಿಡಿಯೋ ಭಾರೀ ಚರ್ಚೆ ಸೃಷ್ಟಿ ಮಾಡಿದೆ. ಕಿರಿಕ್ ಕೀರ್ತಿ ಅವರ ಮಾತಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. 40 ನಿಮಿಷದ ವಿಡಿಯೋದಲ್ಲಿ ಎಲ್ಲಿ ಸಮೀರ್ ದೇವಸ್ಥಾನದ ಬಗ್ಗೆ ಮಾತನಾಡಿದ್ದಾರೆ ಅಂತ ಜನ ಮಾತನಾಡುತ್ತಿದ್ದಾರೆ. ಬಹುತೇಕರು ಕಿರಿಕ್ ಮಾತಿಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮೋಹನ್ ಅಪ್ಪು ಎನ್ನುವವರು ಕಿರಿಕ್ ಕೀರ್ತಿ ಅವರೇ ನೀವು ಮೊದಲು ಸಮೀರ್ ಅವರ ವಿಡಿಯೋವನ್ನು ಪೂರ್ತಿ ನೋಡಿ. ಆ ವಿಡಿಯೋದ ಯಾವುದೇ ಭಾಗದಲ್ಲೂ ಧರ್ಮಸ್ಥಳದ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಅವರು ಮಾತನಾಡಿರುವುದು ಅಲ್ಲಿನ ರಾಕ್ಷಸರು ಮಾಡಿರುವ ಅನಾಚಾರದ ವಿಷಯದ ಬಗ್ಗೆ ಮಾತ್ರ. ನ್ಯಾಯದ ಪರವಾಗಿ ಸಮೀರ್ ಧ್ವನಿ ಎತ್ತಿದ್ದು ತಪ್ಪಾ, ಕೀರ್ತಿ ಪ್ರಕಾರ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಸೌಜನ್ಯ ಅವರಿಗೆ ನ್ಯಾಯ ಸಿಗುವಂತಹ ಕೆಲ ವಿಷಯಗಳು...ಇಷ್ಟು ವರ್ಷಗಳ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಒಂದಿಂಚೂ ಬೆಂಬಲಿಸದ ಕೀರ್ತಿ ಅವರು ಇಂದು ಮಾತನಾಡಲೂ ಒಬ್ಬ ಮುಸ್ಲಿಂ ವ್ಯಕ್ತಿ ವೀಡಿಯೋ ಬರಬೇಕಾಯಿತು. ಹಾಗಾದರೆ ಇನ್ನು ಮುಂದೆ ಯಾವುದೇ ಚಿಂತೆ ಬೇಡ...ನ್ಯಾಯ ದೊರಕಲು ಬೇಕಾದ ಎಲ್ಲವನ್ನೂ ಕೀರ್ತಿ ಹೇಳುತ್ತಿದ್ದಾರೆ...ಅದರಂತೆಯೇ ಮಾಡೋಣ ಬನ್ನಿ... ಎಂದು ರಮೀಜ್ ಅವರು ಹೇಳಿದ್ದಾರೆ.

ವಕೀಲೆ ಶೈಲಜಾ ಅಮರನಾಥ್ ಅವರು, ಕಿರಿಕ್ ಕೀರ್ತಿ ಅವರೇ ನೀವು ಒಮ್ಮೆಯಾದರೂ ಸೌಜನ್ಯ ಅವರ ಪರವಾದ ವಿಡಿಯೋ ಮಾಡಿದ್ದೀರಾ. ಸಮೀರ್ ಅವರು ಹಿಂದೂ ಹುಡುಗಿಯ ಪರವಾಗಿ ಮಾತನಾಡಿದ್ದಾರೆ. ಹಿಂದೂ ಆಗಿರುವವರು ಎಂದಿಗೂ ಧೈರ್ಯ ತುಂಬುತ್ತಾರೆ ಅದನ್ನು ತಿಳಿದುಕೊಳ್ಳಿ ಎಂದು ಅವರು ಹೇಳಿದ್ದಾರೆ.












Click it and Unblock the Notifications