ಚಂದ್ರನಂಗಳದಲ್ಲಿ ಭಾರತ: ಹೆಮ್ಮೆಯ ಸಾಧನೆಗೆ ಕಾರಣವಾದ ಇಸ್ರೋ ಅಧ್ಯಕ್ಷರ ಸಂಬಳ ಎಷ್ಟು?

ಬೆಂಗಳೂರು, ಆಗಸ್ಟ್‌ 26: ಚಂದ್ರಯಾನ 3 ಯೋಜನೆ ಯಶಸ್ವಿಯಾಗಿದೆ. ಚಂದ್ರ ಮೇಲೆ ಭಾರತ ಚರಿತ್ರೆ ಸೃಷ್ಟಿಸಿದೆ.ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ಅನ್ನು ದಾಖಲಿಸಿದೆ. ಇಸ್ರೋ ವಿಜ್ಞಾನಿಗಳನ್ನು ಇಡೀ ದೇಶವೇ ಹೊಗಳುತ್ತಿದೆ.

ಹೌದು, ಆಗಸ್ಟ್‌ 23, ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಯ್ತು. ಈ ಮೂಲಕ ಇಸ್ರೋದ ಪರಾಕ್ರಮ ಇಡೀ ವಿಶ್ವಕ್ಕೆ ಗೊತ್ತಾಯಿತು. ಭಾರತದ ಈ ಅದ್ಭುತ ಸಾಧನೆಯ ಹಿಂದೆ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ನೇತೃತ್ವದ ವಿಜ್ಞಾನಿಗಳ ಪರಿಶ್ರಮ ಇದೆ ಎಂಬುದು ಎಲ್ಲರಿಗೂ ಗೊತ್ತು. ಭಾರತದ ವಿಜ್ಞಾನಿಗಳ ಬಗ್ಗೆ ಜಗತ್ತೇ ಮಾತಾಡ್ತಿದೆ. ಅದರಂತೆ ಚಂದ್ರಯಾನ - 3 ಸಕ್ಸಸ್‌ ಬೆನ್ನಲ್ಲಿಯೇ ಇಸ್ರೋ ಅಧ್ಯಕ್ಷರ ಸಂಬಳ ಎಷ್ಟು ಎಂಬ ಪ್ರಶ್ನೆಗಳು ಹರಿದಾಡ್ತಿವೆ.

What Chandrayaan 3 ISRO Scientists Earn Might Surprise You!

ನಮ್ಮ ಇಸ್ರೋ ಅಧ್ಯಕ್ಷರ ತಿಂಗಳ ವೇತನ ಒಂದಿಷ್ಟು ಕಂಪನಿಗಳ ಉದ್ಯೋಗಿಗಳು ಪಡೆಯುವುದಕ್ಕಿಂತ ಕಡಿಮೆ. ಡಿಪಾರ್ಟ್‌ಮೆಂಟ್‌ ಆಫ್‌ ಸ್ಪೇಸ್‌ನ ಅಧಿಕೃತ ವೆಬ್‌ಸೈಟ್‌ ಪ್ರಕಾರ, ಜನವರಿ 2021ರಂತೆ ಇಸ್ರೋ ಅಧ್ಯಕ್ಷರ ಮಾಸಿಕ ಮೂಲ ವೇತನ 2.5 ಲಕ್ಷ ರೂಪಾಯಿ ಮಾತ್ರ. ಭಾರತದಲ್ಲಿ ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೀಡುವ 17ನೇ ಪೇ ಸ್ಕೇಲ್‌ ವೇತನ ಇದಾಗಿದೆ.

ಕೇವಲ 2.5 ಲಕ್ಷ ರೂಪಾಯಿ ಮಾತ್ರವಲ್ಲದೇ ಇಸ್ರೋ ಅಧ್ಯಕ್ಷರು ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ವೈದ್ಯಕೀಯ ಮರು ಪಾವತಿ, ರಜೆ ಪ್ರಯಾಣ ರಿಯಾಯಿತಿ ಮತ್ತು ಇತರ ವಿವಿಧ ಭತ್ಯೆಗಳನ್ನು ಸಹ ಪಡೆಯುತ್ತಾರೆ. 2017ರಲ್ಲಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಗಿನ ಇಸ್ರೋ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಅವರು ಒಟ್ಟು ಮಾಸಿಕ 3.4 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಇದರಲ್ಲಿ 2 ಲಕ್ಷ ರೂಪಾಯಿ ಮೂಲ ವೇತನ ಮತ್ತು 1.4 ಲಕ್ಷ ರೂ. ಭತ್ಯೆಗಳಿಂದ ಬರುತ್ತಿತ್ತು.

2023ರಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ಮೂಲ ವೇತನ ಮತ್ತು ಭತ್ಯೆಗಳ ಇದೇ ಅನುಪಾತವನ್ನು ಅಂದಾಜು ಲೆಕ್ಕ ಹಾಕಿದರೆ, ಅವರ ಒಟ್ಟು ಮಾಸಿಕ ವೇತನವು ಸುಮಾರು 4.25 ಲಕ್ಷ ರೂ. ಆಗಬಹುದು. ಅಂದ್ರೇ ವರ್ಷಕ್ಕೆ 51 ಲಕ್ಷ ರೂ. ವೇತನವನ್ನು ಎಸ್‌ ಸೋಮನಾಥ್‌ ಅವರು ಪಡೆಯುತ್ತಿದ್ದಾರೆ.

ಇನ್ನು, ಇಸ್ರೋ ಅಧ್ಯಕ್ಷರಿಗೆ ಬೆಂಗಳೂರಿನಲ್ಲಿ ಸರ್ಕಾರದಿಂದ ಅಧಿಕೃತ ನಿವಾಸ ಒದಗಿಸಲಾಗಿದೆ. ಈ ಮನೆ ವಿಶಾಲ ಮತ್ತು ಸುಸಜ್ಜಿತವಾಗಿದ್ದು, ಎಲ್ಲಾ ಸೌಕರ್ಯಗಳು ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇಸ್ರೋ ಅಧ್ಯಕ್ಷರಿಗೆ ಅಧಿಕೃತ ಮತ್ತು ವೈಯಕ್ತಿಕ ಬಳಕೆಗಾಗಿ ಐಷಾರಾಮಿ ಕಾರನ್ನು ಸಹ ನೀಡಲಾಗುತ್ತದೆ. ಇದಕ್ಕೆ ಸರ್ಕಾರದಿಂದಲೇ ಚಾಲಕರನ್ನು ನೇಮಿಸಲಾಗುತ್ತದೆ.

ಅದರೊಂದಿಗೆ ಇಸ್ರೋ ಅಧ್ಯಕ್ಷರು ಸರ್ಕಾರಿ ಅಥವಾ ವೈಯಕ್ತಿಕ ಕೆಲಸಗಳಿಗೆ ಎಲ್ಲಿಗಾದರೂ ಹೋಗಬೇಕೆಂದರೆ ರೈಲು ಮತ್ತು ವಿಮಾನದಲ್ಲಿ ಫಸ್ಟ್‌ ಕ್ಲಾಸ್‌ ಅಥವಾ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಅನ್ನು ಸರ್ಕಾರವೇ ಭರಿಸುತ್ತದೆ. ಕೇವಲ ಅವರಿಗಷ್ಟೇ ಅಲ್ಲದೇ ಅವರ ಕುಟುಂಬಸ್ಥರಿಗೂ ಈ ಸೌಲಭ್ಯ ಇದೆ. ಅಗತ್ಯವಿದ್ದಾಗ ಚಾರ್ಟರ್ಡ್ ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳನ್ನು ಕೂಡ ಇಸ್ರೋ ಅಧ್ಯಕ್ಷರು ಬಳಸಬಹುದು.

ಇಸ್ರೋ ಅಧ್ಯಕ್ಷರು ಮತ್ತು ಅವರ ಕುಟುಂಬದ ಸದಸ್ಯರು ಭಾರತ ಅಥವಾ ವಿದೇಶದಲ್ಲಿರುವ ಯಾವುದೇ ಸರ್ಕಾರಿ ಅಥವಾ ನೋಂದಾಯಿತ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಔಷಧಿಗಳು ಅಥವಾ ವೈದ್ಯಕೀಯ ಪರೀಕ್ಷೆಗಳಿಗೆ ಮಾಡಿದ ವೆಚ್ಚವನ್ನು ಕ್ಲೇಮ್‌ ಕೂಡ ಮಾಡಿಕೊಳ್ಳಬಹುದು. ಇನ್ನು, ನಿವೃತ್ತಿಯ ಬಳಿಕ ವೇತನದ ಶೇ.50ರಷ್ಟು ಪಿಂಚಣಿಯನ್ನು ಕೂಡ ಪಡೆಯಲು ಇಸ್ರೋ ಅಧ್ಯಕ್ಷರು ಅರ್ಹರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+