ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಕುಮಾರಸ್ವಾಮಿ!

|
Google Oneindia Kannada News

ಬೆಂಗಳೂರು, ನ 6: ತ್ರಿಕೋಣ ಸ್ಪರ್ಧೆಯ ಮೂಲಕ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶ, ಮಂಗಳವಾರದಂದು (ನ 10) ಹೊರಬೀಳಲಿದೆ.

ಎರಡೂ ಕ್ಷೇತ್ರದಲ್ಲಿ ನಮದೇ ಗೆಲುವು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗೆಲುವಿನ ಅಂತರ ಎಷ್ಟು ಎನ್ನುವುದು ಮಾತ್ರ ಗೊತ್ತಾಗಬೇಕಿದೆ ಎನ್ನುವ ಖಚಿತ ವಿಶ್ವಾಸದ ಮಾತನ್ನಾಡುತ್ತಿದೆ.

ಆರ್.ಆರ್.ನಗರ ಕಡಿಮೆ ವೋಟಿಂಗ್, ಯಾರಿಗೆ ಲಾಭ: ಫೋಟೋ ಫಿನಿಷ್ ಫಲಿತಾಂಶ?ಆರ್.ಆರ್.ನಗರ ಕಡಿಮೆ ವೋಟಿಂಗ್, ಯಾರಿಗೆ ಲಾಭ: ಫೋಟೋ ಫಿನಿಷ್ ಫಲಿತಾಂಶ?

ಶಿರಾದಲ್ಲಿ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದು ಉಸ್ತುವಾರಿಯಲ್ಲಿ ಒಬ್ಬರಾಗಿರುವ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಎರಡೂ ಕ್ಷೇತ್ರದಲ್ಲಿ ಮತದಾರ ಕಾಂಗ್ರೆಸ್ಸಿಗೆ ಆಶೀರ್ವದಿಸಲಿದ್ದಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ನೀಡಿದ್ದಾರೆ.

 ಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿ ಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿ

ಇವೆಲ್ಲದರ ನಡುವೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ಶಿರಾದಲ್ಲಿ ಜೆಡಿಎಸ್ ಗೆಲ್ಲಲಿದ್ದೇವೆ. ರಾಜರಾಜೇಶ್ವರಿ ನಗರದಲ್ಲಿ ಗೆಲುವಿನ ಸನಿಹಕ್ಕೆ ಬರಲಿದ್ದೇವೆ" ಎಂದು ಹೇಳುವ ಮೂಲಕ ಒಂದು ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ.

ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನ

ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನ

ನವೆಂಬರ್ ಮೂರರಂದು ನಡೆದ ಉಪಚುನಾವಣೆಯಲ್ಲಿ ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನವಾಗಿದೆ. ಈ ಪೈಕಿ ಶಿರಾದಲ್ಲಿ ತ್ರಿಕೋಣ ಸ್ಪರ್ಧೆ ಮತ್ತು ಆರ್.ಆರ್.ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎಂದು ಹೇಳಲಾಗುತ್ತಿದೆ. ನವೆಂಬರ್ ಹತ್ತರ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.

ಅವರೇನೇ ಪ್ರಚಾರ ಮಾಡಲಿ, ಶಿರಾದಲ್ಲಿ ಗೆಲ್ಲುವುದು ಜೆಡಿಎಸ್

ಅವರೇನೇ ಪ್ರಚಾರ ಮಾಡಲಿ, ಶಿರಾದಲ್ಲಿ ಗೆಲ್ಲುವುದು ಜೆಡಿಎಸ್

"ಶಿರಾ ಚುನಾವಣೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಾಗಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರೇನೇ ಪ್ರಚಾರ ಮಾಡಲಿ, ಶಿರಾದಲ್ಲಿ ಗೆಲ್ಲುವುದು ಜೆಡಿಎಸ್. ನಮ್ಮ ಪಕ್ಷ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎನ್ನುವ ಬಿಜೆಪಿಯವರ ಮಾತಿಗೆ ಮತದಾರ ಉತ್ತರಿಸಲಿದ್ದಾನೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ

ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ

ರಾಜರಾಜೇಶ್ವರಿ ನಗರದಲ್ಲಿ ನಾವು ಗೆಲುವಿನ ಸನಿಹಕ್ಕೆ ಬರಲಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ. ನಮಗೆ ಎಲ್ಲಿಂದ ಬರಬೇಕು ಅಷ್ಟು ದುಡ್ಡು"ಎಂದು ಕುಮಾರಸ್ವಾಮಿ ಹೇಳುವ ಮೂಲಕ, ರಾಜರಾಜೇಶ್ವರಿ ನಗರದಲ್ಲಿ ಸೋಲು ಖಚಿತ ಎನ್ನುವ ಮಾತನ್ನಾಡಿದ್ದಾರೆ.

ಆರ್.ಆರ್.ನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,62,201

ಆರ್.ಆರ್.ನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,62,201

ಆರ್.ಆರ್.ನಗರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,62,201, ಇದರಲ್ಲಿ ಒಟ್ಟು ಚಲಾವಣೆಯಾದ ಮತ 2,09,083. ಇದರಲ್ಲಿ ಪುರುಷರು ವೋಟಿಂಗ್ ಮಾಡಿದ್ದು 1,08,806, ಮಹಿಳೆಯರು 1,00,261. ಶೇಕಡಾವಾರು ಮತದಾನವಾಗಿದ್ದು 45.33. ಒಂದು ಲಕ್ಷ ಮಹಿಳಾ ವೋಟರ್ಸ್ ಮತದಾನದಲ್ಲಿ ಭಾಗಿಯಾಗಿದ್ದಾರೆ.

Recommended Video

ಮುಗೀತಾ counting !! | All eyes on Pennsylvania as US election counting continues | Oneindia Kannada

English summary
We Will Win In Sira And Come Closure To Win In RR Nagar Bypoll, Said HD Kumaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X