ಡಿಕೆಶಿ, ಸಿದ್ದು ಮುಖ್ಯಮಂತ್ರಿ ಆಗಲು ಮಲ್ಲಿಕಾರ್ಜುನ್ ಖರ್ಗೆ ಬಿಡಲ್ಲ: ನಳೀನ್ ಕುಮಾರ್ ಕಟೀಲ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ.ಶಿವಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾಲ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ, ಮಾರ್ಚ್17: ರಾಜ್ಯ ವಿಧಾನಸಭಾ ಚುನಾವಣೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ವಿಜಯ ಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಜಯನಗರದಲ್ಲಿ ನಡೆಸಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 150 ಸೀಟ್ ಗೆದ್ದು, ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ನವರಿಗೆ ಹುಚ್ವು ಹಿಡಿದಿದೆ, ಅಧಿಕಾರ ಮಾಡುತ್ತೇವೆ ಎಂದು, ಹುಚ್ಚನ ಮದುವೆಯ ಉದಾಹರಣೆ ನೀಡಿ ಕಾಂಗ್ರೆಸ್ ನಾಯಕರ ವಿರುದ್ದ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶರ್ಟ್ ಹೊಲಿಸಿದ್ದಾರೆ. ಆದರೆ, ಯಾರು ಮುಖ್ಯಮಂತ್ರಿ ಅಗಬೇಕು ಎಂದು ಪೈಪೋಟಿ ಇದೆ. ಆದರೆ ಮೇಲಿರುವ ಮಲ್ಲಿಕಾರ್ಜುನ್ ಖರ್ಗೆ ನಾನು ನಿಮ್ಮಿಬ್ಬರನ್ನು ಸಿಎಂ ಆಗಲು ಬಿಡೋದಿಲ್ಲ ಎನ್ನುತ್ತಿದ್ದಾರೆ. ಅದ್ದರಿಂದ ಜನರು ಬಿಜೆಪಿಯನ್ನು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಈ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ನರೇಂದ್ರ ಮೋದಿಯವರ ಕೆಲಸಕ್ಕೆ ಅಗ್ರಮಾನ್ಯ ಪ್ರಧಾನಿಯಾಗಿದ್ದಾರೆ. ಇಡೀ ವಿಶ್ವದ ಅಗ್ರಮಾನ್ಯ ಪ್ರಧಾನಿ ಎಂದು ಸಮೀಕ್ಷೆ ಯಲ್ಲಿ ಬಂದಿದೆ. ಮೋದಿ ಅಧಿಕಾರಕ್ಕೆ ಬಂದಾಗ ಜಮ್ಮು ಕಾಶ್ಮೀರದ 370 ಬಿಲ್ ತೆಗೆದು ಹಾಕಿದರು. ಈ ಅರ್ಟಿಕಲ್ ನ ತೆಗೆದುಹಾಕುವ ಗಂಡಸುತನ ಮಾಡಿದ್ದು ನರೇಂದ್ರ ಮೋದಿ, ಈಗ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದರು.
ಕಾಂಗ್ರೆಸ್ ಅಡಳಿತ ಇದ್ದಾಗ ಬಾಂಬ್ ಬ್ಲಾಸ್ಟ್, ಸೈನಿಕರ ಹತ್ಯೆಯಾಗುತ್ತಿತ್ತು. ಆದರೆ ಈಗ ಮೋದಿಯವರ ಅಡಳಿತ ದಲ್ಲಿ ಇವ್ಯಾವುವು ನಡೆಯುವುದಿಲ್ಲ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಯಿ ಅಡಳಿತದಲ್ಲಿ ಕೂಡ ಅಭಿವೃದ್ಧಿ ಕೆಲಸಗಳಾಗಿವೆ. ಸಿದ್ದರಾಮಯ್ಯ ನವರ ಸಿಎಂ ಆಗಿದ್ದಾಗ ಅರ್ಕಾವತಿ ಹಗರಣ ಹೊರ ಬಂದಿದೆ, ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದಾರೆ. ಯಾವ ನೈತಿಕ ಹಕ್ಕು ಇದೆ ನಿಮಗೆ ಬಿಜೆಪಿ ಬಗ್ಗೆ ಮಾತನಾಡಲು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.

ಇನ್ನೂ ಅಧಿಕಾರಕ್ಕೆ ಬರುತ್ತೇವೆ ಎಂದು ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಿರುಕನಕನಸು ಕಾಣುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ದೂಳಿಪಟವಾಗುತ್ತಿದೆ. ಎಲ್ಲಾ ಕಡೆ ಕೂಡ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ, ಇಡೀ ದೇಶದಲ್ಲಿ ಕಾಂಗ್ರೆಸ್ ನನ್ನು ದುರ್ಭಿನ್ ಹಾಕಿ ಹುಡುಕಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಐಸಿಯು ನಲ್ಲಿ ಇದೆ ಎಂದು ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಿ 140 ಕ್ಕೂ ಹೆಚ್ವು ಸೀಟ್ ಗೆದ್ದು ನಾವು ಅಧಿಕಾರಕ್ಕೆ ಬರ್ತಿವಿ. ಸಚಿವ ಶ್ರೀರಾಮುಲು ಅವರ ಮೀಸಲಾತಿ ಹೆಚ್ಚಳ ಮಾಡಲು ಒತ್ತಾಯ ಹಾಕಿದ್ರು, ಅದರಂತೆ ಯಾರು ತೆಗೆದುಕೊಳ್ಳದ ನಿರ್ಧಾರ ಬಿಜೆಪಿ ಸರ್ಕಾರ ತೆಗೆದುಕೊಂಡು ಮೀಸಲಾತಿ ಹೆಚ್ಚಿಸಲಾಗಿದೆ ಎಂದು ಹೇಳಿದರು.












Click it and Unblock the Notifications