ನಾವು ಅರಸೀಕೆರೆಯಲ್ಲಿ ಯಾರನ್ನು ಅಭ್ಯರ್ಥಿ ಅಂತ ಘೋಷಣೆ ಮಾಡಿಲ್ಲ: ಪ್ರಜ್ವಲ್ ರೇವಣ್ಣ

ನಾವು ಅರಸೀಕೆರೆಯಲ್ಲಿ ಯಾರನ್ನು ಅಭ್ಯರ್ಥಿ ಅಂತ ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಶಿವಲಿಂಗೇಗೌಡ ನಾನು ಜೆಡಿಎಸ್ ನಲ್ಲಿದ್ದೇನೆ ಅಂತ ಸದನದಲ್ಲಿ ಹೇಳಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಹಾಸನ,ಫೆಬ್ರವರಿ16: ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಅರಸೀಕೆರೆಯ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ ಜೆಡಿಎಸ್ ಪಕ್ಷವನ್ನ ತೊರೆಯಲು ಸಜ್ಜಾಗಿದ್ದಾರೆ. ಆದರೆ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ ಶಿವಲಿಂಗೇಗೌಡಗೆ ಅಫರ್ ಕೊಟ್ಟಿದ್ದಾರೆ.

ಈ ಕುರಿತು ಹಾಸನದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಅರಸೀಕೆರೆಯಲ್ಲಿ ಯಾರನ್ನು ಅಭ್ಯರ್ಥಿ ಅಂತ ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಶಿವಲಿಂಗೇಗೌಡ ನಾನು ಜೆಡಿಎಸ್ ನಲ್ಲಿದ್ದೇನೆ ಅಂತ ಸದನದಲ್ಲಿ ಹೇಳಿದ್ದಾರೆ, ಅವರು ಜೆಡಿಎಸ್ ನಲ್ಲೇ ಉಳಿದುಕೊಂಡರ ನಮಗೆ ಸಂತೋಷ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

We Will Not Announce The Candidate In Arsikere Says MP Prajwal Revanna

ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರದ ಟಿಕೆಟ್ಗಳನ್ನು ನಮ್ಮ ಕುಮಾರಣ್ಣ ಅನೌನ್ಸ ಮಾಡುತ್ತಾರೆ. ನಾವು ಯಾರನ್ನು ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ, ಪಂಚರತ್ನ ಯಾತ್ರೆ ಮುಂದಿನ ತಿಂಗಳು ಎರಡನೇ ತಾರೀಖು ಹಾಸನದಲ್ಲಿ ಆರಂಭವಾಗುತ್ತೆದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಅರಸೀಕೆರೆ ಕ್ಷೇತ್ರದವರು ಶಾಸಕರಾಗೋವರೆಗೆ ಪ್ರಜ್ವಲ್ ರೇವಣ್ಣ ನಿದ್ದೆ ಮಾಡೋಲ್ಲ ಅಂತ ಹೇಳಿದ್ದೆನೆ ಎಂದರು.

ಯಾವುತ್ತಿಗೂ ಶಿವಲಿಂಗಣ್ಣ ಅವರನ್ನು ಅಚೆ ಹೋಗಿ ಅಂತ ಹೇಳಿಲ್ಲ, ನಾವು ಯಾರೇ ಅಭ್ಯರ್ಥಿ ಆಗಲಿ ನಾನು ಅವರ ಪರವಾಗಿ ಕೆಲಸ ಮಾಡಬೇಕು ಅಷ್ಟೆ ಶಿವಲಿಂಗೇಗೌಡರು ಸದನದಲ್ಲಿ ಹೇಳಿದ್ದನ್ನೇ ಆಚೆ ಬಂದು ಹೇಳಲಿ ಎಂದು ಹೇಳಿದರು.

We Will Not Announce The Candidate In Arsikere Says MP Prajwal Revanna

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದೇನು.?

ನಾನು ಇನ್ನೂ ಜೆಡಿಎಸ್ ಶಾಸಕ. ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿಲ್ಲ. ನಾನು ಜೆಡಿಎಸ್ ನವನು ಅಲ್ಲ ಅಂತ ಯಾರೂ ಡಿಕ್ಲೇರ್ ಮಾಡಿಲ್ಲ. ದೇಶದಲ್ಲಿ ಎಲ್ಲರೂ ಪಕ್ಷ‌ ಬಿಡುತ್ತಾರೆ. ಯಾರಿಗೆ ಯಾವ ಪಕ್ಷ ಇಷ್ಟನೋ, ಹೋಗಿ ಅವರು ಸೇರಿಕೊಳ್ಳುತ್ತಾರೆ ಎಂದು ಶಿವಲಿಂಗೇಗೌಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+