• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶರಣರು ಕಂಡಂತೆ ಲಾಕ್‌ಡೌನ್: ಬಸವಣ್ಣನವರ ವಚನದಲ್ಲಿ ವಿವರಣೆ!

By ಡಾ. ಪ್ರಭಯ್ಯ ಪ್ರಭುಸ್ವಾಮಿಮಠ, ಬಾಗಲಕೋಟೆ
|

ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ವಿಶ್ವದ ಅರ್ಧದಷ್ಟು ಜನರು ತಮ್ಮನ್ನು ತಾವೇ ಮನೆಯಲ್ಲಿ ಲಾಕ್‌ಡೌನ್‌ ಎಂದು ಕಟ್ಟಿಹಾಕಿಕೊಂಡಿದ್ದಾರೆ. ಕಳೆದ ಸುಮಾರು 45 ದಿನಗಳಿಂದ ಯಾವುದೇ ಆದಾಯವಿಲ್ಲದೆ ಮನೆಯಲ್ಲಿ ಇದ್ದಾಗ ಮನೆಯ ಯಜಮಾನ (ಪತಿ) ಅನುಭವಿಸುವ ಯಾತನೆ, ಆತಂಕ ಮತ್ತು ಅನಿಶ್ಚಿತತೆ ಆತನನ್ನು ಇಕ್ಕಟ್ಟಿನಲ್ಲಿ ಇರಿಸುತ್ತದೆ. ಆತ ಹೇಗೆ ಗೃಹ ಬಂಧನವನ್ನು (ಲಾಕ್‌ಡೌನ್) ನಿರ್ವಹಿಸಬೇಕು ಎಂಬುದನ್ನು 12ನೆಯ ಶತಮಾನದಲ್ಲಿಯೆ ಶರಣರು ಕಂಡುಕೊಂಡಿದ್ದರು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಹೀಗಾಗಿ ವಚನ ಸಾಹಿತ್ಯ ಸದಾ ಕಾಲಕ್ಕೂ ಅನುಸರಿಸಲು ಯೋಗ್ಯ ಎಂಬುದು ಈ ಲಾಕ್‌ಡೌನ್ ಸಂದರ್ಭದಲ್ಲಿಯೂ ನಾವು ಅರಿಯ ಬಹುದಾಗಿದೆ. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ವಚನವೊಂದರಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಗೋಚರಿಸುತ್ತದೆ. ಆ ಕಾಲದಲ್ಲಿ ಈ ಕೊರೊನಾ ಮಾಹಾಮಾರಿ ಇರದಿದ್ದರೂ, ಆ ಬಗ್ಗೆಯೆ ಎಂದು ಬಸವಣ್ಣವರು ಬರೆಯದೇ ಇದ್ದರೂ, ಈ ಮುಂದಿನ ವಚನದಲ್ಲಿ ಸ್ಪಷ್ಟವಾಗಿ ಗೃಹಬಂಧನ ಪಾಲಿಸುವಾಗ ಇರಬೇಕಾದ ಅಂಶಗಳು ಹಾಗೂ ಈಗಿನ ಪರಿಸ್ಥಿತಿ ಎದುರರಿಸಲು ಸೂಕ್ತವಾಗಿವೆ.

ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ?

ಅಂಗವಿದ್ಯೆಯನೊಲ್ಲ,

ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ,

ಕೈಯ ತೊಳೆಯದಲ್ಲದೆ ಮುಟ್ಟಲೀಯ,

ಕಾಲ ತೊಳೆಯದಲ್ಲದೆ ಹೋದಲೀಯ,

ಇಂತಿ ಸರ್ವಾಂಗ ತಲೆದೊಳೆದ ಕಾರಣ,

ಕೋಡಲಸಂಗಮದೇವನೆನ್ನ ಕೂಡಿಕೊಂಡನವ್ವಾ..

ವಚನದಲ್ಲಿ ಹೆಂಡತಿ ತನ್ನ ಗಂಡ ಮನೆಯಲ್ಲಿದ್ದಾಗಿನ ಸುದ್ದಿ ಹೇಳುತ್ತಿದ್ದಾಳೆ. ಆತ ಅಂಗಾಂಗಳು ವಿದ್ಯೆಯನೊಲ್ಲ ಎನ್ನುತ್ತಿದ್ದಾಳೆ. ಎಂದರೆ ಒಂದು ಆತ ಆಕೆಯನ್ನು ಕಾಮ ತಣಿಸಲು ಬಳಸಿಕೊಳ್ಳುತ್ತಿಲ್ಲ. ಎರಡನೆಯದಾಗಿ ಭೌತಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದಾಗುತ್ತದೆ. ಮೂರನೆಯದಾಗಿ ಇತ್ತೀಚೆಗೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕೌಟುಂಬಿಕ ಕಲಹ ನ್ಯಾಯಾಲಯದ ಮೆಟ್ಟಿಲು ಏರುತ್ತಿವೆ. ನಾಲ್ಕನೆಯದಾಗಿ, ಅಂಗವಿದ್ಯೆಯನೊಲ್ಲ ಎಂದರೆ ಮಡದಿಗೆ ದೈಹಿಕ ಹಿಂಸೆ ಕೊಡುತ್ತಿಲ್ಲ ಎಂದಾಯಿತು.

ಕಂಗಳೊಳಗೆ ಕಸವ ಕಳೆದಲ್ಲವೆ ನೋಡುತ್ತಿಲ್ಲ. ಕುಟುಂಬದ ಸದಸ್ಯರ ಕುಂದಿದ ಮನಸ್ಥಿತಿಯನ್ನು ಕಸಕ್ಕೆ ಹೋಲಿಸಿ ಅದನ್ನು ನಿವಾರಿಸಲು ಅರಿವು, ಧೈರ್ಯ ತುಂಬಿ, ಆತಂಕ ಮತ್ತು ಖಿನ್ನತೆ ಕಳೆದು ಮನೋಭಾವ ಧನಾತ್ಮಕ ಆಗಿರುವಂತೆ ನೋಡಿಕೊಳ್ಳುತ್ತಿದ್ದಾನೆ.

"ಕೈಯ ತೊಳೆಯಲ್ಲದೆ ಮುಟ್ಟಲೀಯ" ಎಂದರೆ ಶುಚಿತ್ವದ ಬಗ್ಗೆ ತಾವೇ ಮಾದರಿಯಾಗಿ ಪದೇ ಪದೇ ಕೈತೊಳೆದು ಕೊಳ್ಳದೇ ಏನನ್ನೂ ಮುಟ್ಟುವುದಿಲ್ಲ ಎಂದಿದ್ದಾರೆ. ಇಲ್ಲಿ ದೈಹಿಕ ಬಹಿರಂಗ ಶುದ್ದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕಾಲ ತೊಳೆದಲ್ಲದೆ ಹೊಂದಲೀಯ. ಇಲ್ಲಿ ಕಾಲು ಎಂದರೆ ತನ್ನ ಅಸ್ತಿತ್ವದ ಅಂತಸ್ತಿನ ಅಹಂಕಾರ ಇಲ್ಲದೆ ಸಾದಾ ಸಭ್ಯ ವ್ಯಕ್ತಿತ್ವ ತೋರಿಸುವುದು ಎಂದಾಗುತ್ತದೆ. ಎನಗಿಂತ ಕಿರಿಯರಿಲ್ಲ ಎನ್ನುವ ತಮ್ಮ ತತ್ವದಿಂದ ಎಲ್ಲರ ಜೊತೆಗೆ ಹೊದಾಣಿಕೆ ವ್ಯಕ್ತಿತ್ವ ಅವರದಾಗಿತ್ತು.

ಇಂತಿ ಸರ್ವಾಂಗ ತಲೆದೊಳೆದ ಕಾರಣ,

ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ,

ಇಲ್ಲಿ ಶರಣನಾದವನು ಸರ್ವಾಂಗವನ್ನು ಎಂದರೆ ಬಹಿರಂಗ ಶುದ್ಧಿಯ ಜೊತೆ ಜೊತೆಗೆ ಅಂತರಂಗ ಶುದ್ಧಿಯ ಪಾಲನೆ ಮಾಡಿದ್ದಾರೆ. ಶುದ್ಧಿಯಲ್ಲಿ ಪ್ರತಿಯೊಬ್ಬರೂ ಅರಿಷಡ್ವರ್ಗಗಳಿಂದ ಮುಕ್ತರಾಗಬೇಕು( ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ).

ಈ ಮಹಾ ಮಾರಿಯಲ್ಲಿ ದೈಹಿಕ ಆರೋಗ್ಯ ಅಷ್ಟೇ ಅಲ್ಲದೆ ಮಾನಸಿಕ ಆರೋಗ್ಯಕ್ಕೂ ಧಕ್ಕೆ ಹೆಚ್ಚು. ಈ ವಚನ ಹಳೆಯದಾದರೂ ಇಂದಿನ ಕೊರೊನಾ ವೈರಸ್ ಮಹಾಮಾರಿಯ ಸಮಯದಲ್ಲಿ ಹೊಸ ಪರಿಕಲ್ಪನೆಯಿಂದ ವಚನ ವಿಶ್ಲೇಷಣೆ ಮಾಡಬಹುದು. ಸಧ್ಯದ ಪರಿಸ್ಥಿತಿಗೆ ಈ ವಿಚಾರಧಾರೆ ಲೋಕಕಲ್ಯಾಣಕ್ಕೆ ಸಹಕಾರಿಯಾಗಲಿದೆ ಎಂಬುದು ನನ್ನ ಆಶಯ. ಸರ್ವರಿಗೂ ಶರಣು ಶರಣಾರ್ಥಿಗಳು.

English summary
Half the people in the world have found themselves at home locked down during the epidemic of the coronavirus. The distress, anxiety and uncertainty that the owner of the household suffers from when he has been without any income for the past 45 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X