Randeep Surjewala: ಕಾಂಗ್ರೆಸ್ ತಾರಾ ಪ್ರಚಾರಕರಲ್ಲಿ ಕ್ರಿಮಿನಲ್ ಗಳ ಜತೆ ನಂಟು ಎಂದು ಬಿಜೆಪಿ ಆರೋಪ: ಸುರ್ಜೆವಾಲಾ ಹೇಳಿದ್ದೇನು?
ಬೆಂಗಳೂರು,ಏಪ್ರಿಲ್21: ಕಾಂಗ್ರೆಸ್ ತಾರಾ ಪ್ರಚಾರಕರಲ್ಲಿ ಕ್ರಿಮಿಲ್ ಗಳ ಜತೆ ನಂಟು ಹೊಂದಿರುವವರನ್ನು ಒಳಗೊಳ್ಳಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ರಾಜ್ಯ ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶುಕ್ರವಾರ ಕೆಪಿಸಿಸಿ ಕಚೇರಿಯನ್ನ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಮುಸಲ್ಮಾನರ ನಡುವೆ ಸಂಘರ್ಷ ಹಾಗೂ ಕೋಮುವಾದದ ರಾಜಕಾರಣ ಯಶಸ್ವಿಯಾಗುವುದಿಲ್ಲ. ಬಿಜೆಪಿ ಅವರು ಈ ವಿಚಾರವಾಗಿ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಾರೆ ಎಂದು ಜನರಿಗೆ ಅರಿವಾಗಿದೆ. ಬಿಜೆಪಿ ಮೀಸಲಾತಿ, ಕೋಮುವಾದ, ಜಾತಿಗಳ ವಿಚಾರಗಳ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತದೆ ಎಂದು ಕಿಡಿಕಾರಿದರು.

ಬಿಜೆಪಿಯ ಈ ಕುತಂತ್ರವನ್ನು ಜನ ನಿರ್ಲಕ್ಷಿಸಬೇಕು. ಅವರು 5 ಸಾವಿರ ವರ್ಷಗಳ ಹಿಂದಿನ ವಿಚಾರ ಇಟ್ಟುಕೊಂಡು ಮಾತನಾಡುತ್ತಾರೆ. ರಾಜ್ಯ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತನ್ನ ಸಾಧನೆ ಏನು ಎಂದು ಹೇಳಬೇಕು. ಐದು ವರ್ಷಗಳ ಹಿಂದೆ ಪರೇಶ್ ಮೇಸ್ತಾ ಅವರ ಸಾವಿನ ವಿಚಾರವಾಗಿ ಇದೇ ಶೋಭಾ ಕರಂದ್ಲಾಜೆ, ಸಿ.ಟಿ ರವಿ ಅವರು ಮಾನಸಿಕ ಅಸ್ವಸ್ಥರಂತೆ ಮಾತನಾಡುತ್ತಿದ್ದರು. ಅವರು ಈ ಸಾವಿನ ಪ್ರಕರಣದಲ್ಲಿ ಸಾಕಷ್ಟು ಅರಚಾಡಿದ್ದರು, ಆದರೆ ಆ ಪ್ರಕರಣ ತನಿಖೆ ಮಾಡಿದ ಸಿಬಿಐ ವರದಿಯಲ್ಲಿ ಏನು ಹೇಳಿತು? ಈ ನಾಯಕರ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿದೆ. ಬಿಜೆಪಿ ನಾಯಕರು ಇಂತಹ ಸುಳ್ಳನ್ನು ಹೇಳುತ್ತಲೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಆಯನೂರು ಮಂಜುನಾಥ್ ಅವರಾಗಲಿ, ಜಗದೀಶ್ ಶೆಟ್ಟರ್, ಸವದಿ ಅವರಾಗಲಿ, ಅನೇಕ ಬಿಜೆಪಿ ನಾಯಕರು ಬಿಜೆಪಿ ಸರ್ಕಾರ ಅಢಿಯಿಂದ ಮುಡಿಯವರೆಗೂ ಭ್ರಷ್ಟಾಚಾರದಿಂದ ತುಂಬಿದೆ ಎಂದು ಹೇಳಿದ್ದಾರೆ. ಅವರ ನಾಯಕ ನೆಹರೂ ಓಲೇಕರ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು 40% ಕಮಿಷನ್ ಭ್ರಷ್ಟಾಚಾರದ ಏಜೆಂಟ್ ಎಂದು ಕರೆದರು. ಇದಕ್ಕೆ ಬೊಮ್ಮಾಯಿ ಅವರು ಮಾತಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಅವರ ಚರಿತ್ರೆ ಸ್ವಚ್ಛವಾಗಿದ್ದರೆ ಇಷ್ಟು ಹೊತ್ತಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದರು. ಅವರ ಮೌನ ಈ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಿತ್ತೊಗೆಯಬೇಕು ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣಕರ್ತರಾದ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ವಿಡಿಯೋ ನಾವೆಲ್ಲರೂ ನೋಡಿದ್ದೇವೆ. ಭಾರತದ ಪ್ರಜೆಯಾಗಿ ನಾವು ಪ್ರಧಾನಿಗೆ ಪ್ರಶ್ನೆ ಕೇಳಬಸುತ್ತೇವೆ. ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಕ್ರಾಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪತ್ರ ಬರೆದು ಪ್ರಾಣ ಕಳೆದುಕೊಳ್ಳಲಿಲ್ಲವೇ? ಎಂದು ಪ್ರಶ್ನಿಸಿದರು.
ಈ ಬಗ್ಗೆ ಮೋದಿ ಅವರು ಸಂತೋಷ್ ಪಾಟೀಲ್ ಅವರ ಕುಟುಂಬದ ಮನೆಯವರ ಜತೆ ಮಾತನಾಡಿ ಸಂತಾಪ ಸೂಚಿಸಿದ್ದಾರಾ? ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಅವರ ಮನೆಗೆ ಭೇಟಿ ನೀಡ್ದದರೇ? ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದ್ರೋಹ ಬಗೆಯಲಾಗಿದೆ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು.












Click it and Unblock the Notifications