ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಕೈ ಗಾಳ; ನಾವು ಆಪರೇಷನ್ ಹಸ್ತ ಮಾಡಲ್ಲ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 26: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ರೆ, ಇತ್ತ ಡಿ ಕೆ ಶಿವಕುಮಾರ್ ನಾವು ಆಪರೇಷನ್ ಹಸ್ತ ಮಾಡಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಾವು ಆಪರೇಷನ್ ಹಸ್ತ ಮಾಡಲ್ಲ ಎಂದು ಹೇಳಿದ ಅವರು, ಎಂ ಪಿ ರೇಣುಕಾಚಾರ್ಯ ಹಾಗೂ ಶಿವರಾಮ್ ಹೆಬ್ಬಾರ್ ಅವರ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ ಇರುತ್ತೆ ಅದಕ್ಕಾಗಿ ಬಂದು ಭೇಟಿ ಮಾಡಿದ್ದಾರೆ. ಅಧಿಕಾರದಲ್ಲಿರುವ ನಾಯಕರ ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ಹೇಳಿದರು.

ಎಸ್ ಟಿ ಸೋಮಶೇಖರ್ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇವತ್ತು ನಾನು ಅಲ್ಲಿಗೆ ಹೋಗ್ತಾ ಇದ್ದೇನೆ, ಕನಕಪುರ ರಸ್ತೆಯಲ್ಲಿ ನೀರಿನ ಸಮಸ್ಯೆ ಇದೆ. ಸಮಸ್ಯೆ ಇದ್ದಾಗ ನಾವು ಗೌರವಕೊಡಬೇಕು. ಅದನ್ನು ಮಾಡ್ತಾ ಇದ್ದೇವೆ ಅಷ್ಟೇ, ಹಾಲಿ ಶಾಸಕರದ್ದು ಏನೇನೋ ಸಮಸ್ಯೆ ಇರುತ್ತದೆ ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲು, ಪ್ರೀತಿ, ಸ್ನೇಹ, ಬಾಂಧವ್ಯ, ರಾಜಕೀಯ ಇರುತ್ತೆ. ಬೇರೆ ಬೇರೆ ವಿಚಾರಗಳು ಇರ್ತಾವೆ ಅದನ್ನು ಸಾರ್ವಜನಿಕವಾಗಿ ಹೇಳಲು ಆಗಲ್ಲ. ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ನಾವು ಕಾರ್ಯಕರ್ತರು ಮತ್ತು ಮುಖಂಡರಿಗೆ ಹೇಳಿದ್ದೇವೆ. ಯಾರು ಎಷ್ಟು ದಿನ ಅಂತ ಕಾಯಲು ಆಗುತ್ತೆ ಬಹಳ ಕಷ್ಟ ಇದೆ, ಜನರಿಗೆ ಸಾಕಷ್ಟು ನಿರೀಕ್ಷೆ ಇರ್ತಾವೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಎಲ್ಲ ಯೋಜನೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಮಾಡಲು ಆಗುತ್ತಾ? 1.30 ಕೋಟಿ ಜನ ಗೃಹಲಕ್ಷ್ಮಿಗೆ ನೊಂದಣಿ ಮಾಡಿದ್ದಾರೆ. ಉಡುಪಿಯಲ್ಲಿ ನಾವು ಒಂದು ಸ್ಥಾನ ಗೆದ್ದಿಲ್ಲ, 85% ಗೃಹಲಕ್ಷ್ಮಿ ಗೆ ನೊಂದಣಿ ಆಗಿದೆ. ಬರಿ ಕಾಂಗ್ರೆಸ್ಸಿಗೆ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದ ಅವರು, ಎಲ್ಲ ಬಡವರಿಗೂ ಈ ಯೋಜನೆ ಸಿಗುತ್ತದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಆಗಮನಕ್ಕೆ ಪ್ರೋಟೋಕಾಲ್ ಪಾಲನೆ ಮಾಡಿಲ್ಲ ಎಂಬ ಅಶೋಕ್ ಟೀಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ರಿಸಿದ ಅವರು, ಆರ್ ಅಶೋಕ್ ಗೆ ಸ್ವಲ್ಪ ಪ್ರಾಬ್ಲಂ ಇದೆ
ಕೇಂದ್ರ ಸರ್ಕಾರವೇ ನಮಗೆ ಬರೋದು ಬೇಡ ಅಂತ ಹೇಳಿತ್ತು. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ, ಪ್ರಧಾನಿ ಕಚೇರಿಯಿಂದ ನಮಗೆ ಪೋನ್ ಬಂದಿತ್ತು. ಅಫಿಸಿಯಲ್ ಆಗಿ ನಮಗೆ ರೈಟಿಂಗ್ ನಲ್ಲಿ ಲೆಟರ್ ಕೊಡಲು ಹೇಳಿದ್ವಿ, ಅವರು ಲೆಟರ್ ಕೊಟ್ಟಿದ್ದಾರೆ.
ನಾವು ಸರ್ಕಾರದ ವತಿಯಿಂದ ಮೋದಿ ಅವರಿಗೆ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೋಡಬೇಕು ಅಂತ ನಮಗೆ ಗೊತ್ತಿದೆ, ಬೇರೆ ರಾಜ್ಯಗಳ ತರಹ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯ ಇದ್ರು ಪ್ರಧಾನಿಗೆ ಗೌರವ ಕೊಡ್ತೇವೆ ಎಂದು ಆರ್ ಅಶೋಕ್ ಹೇಳಿಕೆಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕಾವೇರಿ ನದಿ ನೀರಿನ ಬಗ್ಗೆ ಸುಪ್ರೀಂ ಕೋರ್ಟ್ ವ್ಯಾಜ್ಯ ವಿಚಾರವಾಗಿ ಮಾತನಾಡಿ, ಕೋರ್ಟ್ ಏನ್ ಹೇಳಬೇಕು ಅದನ್ನು ಹೇಳಿದೆ. ಶೋಭಾ ಕರಂದ್ಲಾಜೆ ರಾಜ್ಯದ ಹಿತ ಕಾಪಡಲು ಸಹಕಾರ ನೀಡಲಿ
ಸರ್ವಪಕ್ಷ ಸಭೆಗೆ ಶೋಭಾ ಅವರನ್ನು ಕರೆದಿದ್ವಿ,ಅವರು ಬರಲಿಲ್ಲ. ಪ್ರಧಾನಿ ಮತ್ತು ಜಲಶಕ್ತಿ ಸಚಿವರು ಸಮಯ ಕೊಟ್ಟಾಗ ಸರ್ವಪಕ್ಷ ನಿಯೋಗ ಹೋಗುತ್ತೇವೆ. ನಮ್ಮ ವಾದವನ್ನು ನಾವು ಮಂಡಿಸುತ್ತೇವೆ, ಸುಪ್ರೀಂ ಕೋರ್ಟ್ ತೀರ್ಪು ನೀಡಲು ನಕಾರ ಮಾಡಿದೆ.
ನೀರು ಎಷ್ಟು ಇದೆ ಅಂತ ಮಾಹಿತಿ ಬೇಕಿದೆ. ಸರಕಾರದಿಂದ ನಾವು ಕೋರ್ಟ್ ಗೆ ತಿಳಿಸಿದ್ದೇವೆ, ರೈತರ ಹಿತರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ಕೋರ್ಟ್ ಗೆ ಕೂಡ ಗೌರವ ಕೋಡಬೇಕಿದೆ. ಕಾನೂನು ತಜ್ಞರ ಜೊತೆ ನಮ್ಮ ಸಿಎಸ್ ಸಭೆ ಮಾಡಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ವಕೀಲರ ಜೊತೆ ಸಭೆ ಮಾಡಲಾಗಿದೆ ನಾನು ಕೂಡ ಸಭೆ ಮಾಡಬೇಕಿದೆ, ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications