ಚಿಕ್ಕಬಳ್ಳಾಪುರ : ಸೆಲ್ಫಿ ಹುಚ್ಚಿಗೆ ಬಿಕಾಂ ವಿದ್ಯಾರ್ಥಿ ಬಲಿ

Posted By: Gururaj
Subscribe to Oneindia Kannada

ಚಿಕ್ಕಬಳ್ಳಾಪುರ, ಅಕ್ಟೋಬರ್ 17 : ಸೆಲ್ಫಿ ಹುಚ್ಚಿಗೆ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ರಾಮನಗರದಲ್ಲಿ ಮೂವರು ವಿದ್ಯಾರ್ಥಿಗಳು ಸೆಲ್ಫಿ ತೆಗೆದಯಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದರು.

ದೊಡ್ಡಬಳ್ಳಾಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ನವೀನ್ (21) ಮೃತಪಟ್ಟವರು. ಮಂಗಳವಾರ ಚನ್ನಗಿರಿ ಫಾಲ್ಸ್‌ಗೆ ಸ್ನೇಹಿತರ ಜೊತೆ ತೆರಳಿದ್ದ ನವೀನ್ ಸೆಲ್ಫಿ ತೆಗೆದುಕೊಳ್ಳುವಾಗ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಸೆಲ್ಫೀ ಮೋಜಿಗೆ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಬಲಿ

Water falls selfie ends in tragedy student dies in Chikkaballapur

ಬಿ.ಕಾಂ ವಿದ್ಯಾರ್ಥಿಯಾದ ನವೀನ್ ಇಂದು ಬೆಳಗ್ಗೆ ಚನ್ನಗಿರಿ ಫಾಲ್ಸ್‌ಗೆ ಹೋಗಿದ್ದರು. ಬಂಡೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ. ನಂತರ ಸ್ನೇಹಿತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನೀರಲ್ಲಿ ಮುಳುಗುತ್ತಿದ್ದರೂ ಸೆಲ್ಫಿಯಲ್ಲೇ ಬ್ಯುಸಿಯಾದ ಸ್ನೇಹಿತರು!

ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ಸೆಲ್ಫಿ ಹುಚ್ಚಿಗೆ ನಾಲ್ವರು ಬಲಿಯಾಗಿದ್ದಾರೆ.

ಸೆಲ್ಫಿ ತೆಗೆಯಲು ಹೋದ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಬಿಡದಿ ಬಳಿ ಅಕ್ಟೋಬರ್ 3ರಂದು ನಡೆದಿತ್ತು. ರಾಮನಗರ ಜಿಲ್ಲೆಯ ಬಿಡದಿಯ ವಂಡರ್‌ ಲಾ ಗೇಟ್ ಸಮೀಪ ರೈಲು ಬರುತ್ತಿದ್ದಾಗ, ಸೆಲ್ಫಿ ತೆಗೆಯಲು ಹೋದ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doddaballapur Government College final year BCom student Naveen Kumar (21) when trying to take selfie at Channagiri falls Chikkaballapur, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ