ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ಟಿಕೆಟ್ ದರ ಗರಿಷ್ಠ 200 ರು, ಆದೇಶ ಜಾರಿ, ಆದರೆ...

ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನೀತಿ ಜಾರಿಯನ್ವಯ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯನ್ನು ತೆರಿಗೆ ಹೊರತುಪಡಿಸಿ ರೂ. 200 ಗಳಿಗೆ ನಿಗದಿಪಡಿಸಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 02: ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನೀತಿ ಜಾರಿಯನ್ವಯ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯನ್ನು ತೆರಿಗೆ ಹೊರತುಪಡಿಸಿ ರೂ. 200 ಗಳಿಗೆ ನಿಗದಿಪಡಿಸಲಾಗಿದೆ.

2017-18ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳು ಸೇರಿದತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ(ಟಿಕೆಟ್) ನೀತಿ ಜಾರಿಗೆ ತರಲಾಗುತ್ತಿದ್ದು, 200 ರು ಗರಿಷ್ಠ ಪ್ರವೇಶ ದರ ನಿಗದಿ ಪಡಿಸಲಾಗಿದೆ.['ಮಲ್ಟಿಪ್ಲೆಕ್ಸ್'ಗಳಲ್ಲಿ ರೂ.200 ಟಿಕೆಟ್ ದರ: ಇನ್ನೆರೆಡು ದಿನಗಳಲ್ಲಿ ಅಧಿಕೃತ]

Watch a movie at just Rs 200 in Karnataka but with a catch, govt introduces cap

ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಯ ಚಲನಚಿತ್ರಗಳಿಗೆ ಈ ದರ ಅನ್ವಯಿಸುತ್ತದೆ. ಹಾಗೂ ರೂ. 200 ಗಳ ಗರಿಷ್ಠ ಮಿತಿಯು ಮಲ್ಟಿಪ್ಲೆಕ್ಸ್ ಗಳಲ್ಲಿ ಗೋಲ್ಡ್ ಕ್ಲಾಸ್ ಸ್ಕ್ರೀನ್ ಮತ್ತು ಗೋಲ್ಡ್ ಕ್ಲಾಸ್ ಸೀಟುಗಳನ್ನು ಒಟ್ಟು ಸೀಟುಗಳ ಶೇ. 10 ರಷ್ಟು ಮೀರದಂತೆ ಹೊರತುಪಡಿಸಲಾಗಿದೆ. [ಏಪ್ರಿಲ್ 27ರಿಂದಲೇ 'ಮಲ್ಟಿಪ್ಲೆಕ್ಸ್'ಗಳಲ್ಲಿ ರೂ 200 ಟಿಕೆಟ್ ದರ ಜಾರಿ: ಸಾ.ರಾ ಗೋವಿಂದು!]

ಐ-ಮಾಕ್ಸ್ ಮತ್ತು 4 ಡಿ ಎಕ್ಸ್ ಚಿತ್ರಮಂದಿರಗಳನ್ನು ಗರಿಷ್ಠ ಪ್ರವೇಶ ದರ ಮಿತಿಯಿಂದ ಹೊರತುಪಡಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಎಷ್ಟಾಗಲಿದೆ ಟಿಕೆಟ್ ದರ: 200 ರು ಟಿಕೆಟ್ ಗರಿಷ್ಠ ಟಿಕೆಟ್ ದರ + ಮನರಂಜನಾ ತೆರಿಗೆ ಶೇ 30 + ಸೇವಾ ತೆರಿಗೆ ಶೇ 15 + ಹೆಚ್ಚುವರಿ ಸೆಸ್ ಗಳು ಸೇರಿದರೆ ಸಿನಿಮಾ ಟಿಕೆಟ್ ಬೆಲೆ 260 ಪ್ಲಸ್ ಆಗಲಿದೆ.

ರಾಜ್ದಲ್ಲಿರುವ ಮಲ್ಟಿಪ್ಲೆಕ್ಸ್ ಗಳಲ್ಲನ ಒಂದು ಪರದೆಯಲ್ಲ ಮಧ್ನಾಹ್ನ 1.30 ರಂದ 7.30ರವರಗನ ಪ್ರೈಮ್ ಟೈಮ್(ಪ್ರಮುಖ ಅವಧಿ)ನಲ್ಲ ಕನ್ನಡ ಹಾಗೂ ಪ್ರಾದೇಶಿಕ ಚಲನಚತ್ರ ಪ್ರದರ್ಶನವನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.[ಮೇ ತಿಂಗಳಿಂದ 'ಮಲ್ಟಿಪ್ಲೆಕ್ಸ್'ಗಳಲ್ಲಿ 200 ರೂ ಟಿಕೆಟ್ ಕಡ್ಡಾಯ: ಸಿದ್ದರಾಮಯ್ಯ]

ಮಾರ್ಚ್ 15 ರಂದು 2017ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಮಲ್ಟಿಪ್ಲೆಕ್ಸ್'ಗಳಿಗೆ ಏಕರೀತಿಯ ಪ್ರವೇಶದರ ನೀತಿ ಆದೇಶ ಹೊರಡಿಸಿದ್ದರು.

English summary
The Karnataka government on Tuesday passed orders to cap ticket prices in cinema halls including multiplexes across the state. With the state government's order, the maximum price of a ticket irrespective of the cinema hall is capped at Rs 200.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X