Waqf Land Row: ಮಂಗಳವಾರ ವಿಜಯಪುರಕ್ಕೆ ಬಿಜೆಪಿ ತಂಡ ಭೇಟಿ: ಯತ್ನಾಳ್‌ಗಾಗಿ ತಂಡ ಪುನಾರಚನೆ
ಬೆಂಗಳೂರು, ಅಕ್ಟೋಬರ್ 29: ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ವಕ್ಫ್ ಕಾಯಿದೆಯಿಂದ ಜನರಿಗೆ, ಅದರಲ್ಲೂ ರೈತರಿಗೆ ತೊಂದರೆ ಆಗಿದೆ ಎಂಬ ಆರೋ ಕೇಳಿ ಬಂದಿದೆ. ಈ ಸಂಬಂಧ ಜನರ ಅಹವಾಲು ಆಲಿಸಲು, ಜನರ ಧ್ವನಿ ಎತ್ತಲು ಕರ್ನಾಟಕ ಬಿಜೆಪಿಯು ಶಾಸಕ ಗೋವಿಂಗ್ ಕಾರಜೋಳ ನೇತೃತ್ವದಲ್ಲಿ 'ಬಿಜೆಪಿ ಪರಿಶೀಲನಾ ತಂಡ' ರಚನೆ ಮಾಡಿದೆ. ಈ ತಂಡಕ್ಕೆ ತಡವಾಗಿ ಬಸನಗೌಡ ಪಾಟೀಲ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ತಂಡುವ ಮಂಗಳವಾರ ಅಕ್ಟೋಬರ್ 20ರಂದು ವಿಜಯಪುರಕ್ಕೆ ಭೇಟಿ ನೀಡಲಿದೆ.
ಹೌದು, ವಕ್ಫ್ ಮಂಡಳಿ, ಕಾಯಿದೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ರೈತರು ಜಮೀನು ಕಳೆದುಕೊಳ್ಳಲಿದ್ದಾರೆ. ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದೆಲ್ಲ ವರದಿ ಆಗಿದೆ. ಇದರ ಬೆನ್ನಲ್ಲೆ ಬಿಜೆಪಿಯು ಪರಿಶೀಲನಾ ತಂಡ ರಚಿಸಿತ್ತು. ಆದರೆ ವಿಜಯಪುರ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಬಿಟ್ಟು ತಂಡ ರಚಿಸಲಾಗಿತ್ತು.

ಇದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಂಡ ಬಹಿರಷ್ಕರಿಸುವುದಾಗಿ ಹೇಳುತ್ತಿದ್ದಂತೆ ತಂಡವನ್ನು ಸೋಮವಾರ ಸಂಜೆ ಪುನಾರಚರಿಸುವ ಮೂಲಕ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಯತ್ನಾಳ್ ಆಕ್ರೋಶಕ್ಕೆ ಮಣಿದಿದ್ದಾರೆ. ಯತ್ನಾಳ್ ಅವರನ್ನು ಸೇರ್ಪಡೆಗೊಳಿಸಿ, ವಿಜಯಪುರ ಭೇಟಿಗೂ ಮುನ್ನಾ ದಿನವೇ ತಂಡದ ಸದಸ್ಯರು ಹೆಸರನ್ನು ಪ್ರಕಟಿಸಿದ್ದಾರೆ.
ವಕ್ಫ್ ಬೋರ್ಡ್: ರೈತರ ಸಮಸ್ಯೆ ಸ್ವೀಕಾರ
ಈ ತಂಡದಲ್ಲಿ ಹಿರಿಯ ಬಿಜೆಪಿ ನಾಯರಕಿದ್ದಾರೆ. ಅವರೆಲ್ಲವು ಇಂದು ಮಂಗಳವಾರ ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ಅನ್ಯಾಯ ಹಾಗೂ ವಕ್ಫ್ ಬೋರ್ಡ್‌ನಿಂದ ರೈತರು ಎದುರಿಸುತ್ತಿರುವ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಬಿಜೆಪಿ ನಿಯೋಗವು ವಿಜಯಪುರ ಜಿಲ್ಲೆಯಾದ್ಯಂತ ಭೇಟಿ ನೀಡಲಿದೆ. ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ. ಖುದ್ದು ಜಮೀನು ಪರಿಶೀಲಿಸಿ ವರದಿ ತಯಾರಿಸಲಿದ್ದಾರೆ ಎಂದು ಬಿಜೆಪಿ ಮಾಹಿತಿ ನೀಡಿದೆ.
ಬಿಜೆಪಿ ಪರಿಶೀಲನಾ ತಂಡದಲ್ಲಿ ಯಾರಿದ್ದಾರೆ?
* ಶಾಸಕ ಗೋವಿಂದ ಕಾರಜೋಳ
* ಸಂಸದ ರಮೇಶ್ ಜಿಗಜಿಣಗಿ
* ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
* ಶಾಸಕ ಹರೀಶ್ ಪೂಂಜಾ
* ಶಾಸಕ ಮಹೇಶ್ ಟೆಂಗಿನಕಾಯಿ
* ಮಾಜಿ ಎಂಎಲ್‌ಸಿ ಅರುಣ್ ಶಹಾಪುರ
* ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ
* ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ












Click it and Unblock the Notifications